Advertisement

ಉತ್ತರ ಪ್ರದೇಶ ಸಿಎಂ ಯೋಗಿ ಆಗ್ತಾರೆ ಎಂಎಲ್‌ಸಿ

07:50 AM Aug 31, 2017 | |

ಹೊಸದಿಲ್ಲಿ/ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ, ಶಾಸಕರಾಗುವುದಿಲ್ಲ. ಅದರ ಬದಲಾಗಿ ವಿಧಾನ ಪರಿಷತ್‌ ಸದಸ್ಯರಾಗಲಿದ್ದಾರೆ. 

Advertisement

ಸೆ.15ರಂದು ಈ ಚುನಾವಣೆ ನಡೆಯಲಿದೆ. ಅವರ ಜತೆಗೆ ಡಿಸಿಎಂಗಳಾದ ಕೇಶವ ಪ್ರಸಾದ್‌ ಮೌರ್ಯ, ದಿನೇಶ್‌ ಶರ್ಮಾ, ಸಚಿವರಾದ ಸ್ವತಂತ್ರ ದೇವ್‌ ಸಿಂಗ್‌ ಮತ್ತು ಮೊಹ್ಸಿàನ್‌ ರಾಜಾ ಕೂಡ ವಿಧಾನ ಪರಿಷತ್‌ ಸದಸ್ಯರಾಗಲಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಐವರು ಬಿಜೆಪಿ ನಾಯಕರು ಅನಾಯಾಸವಾಗಿ ಮೇಲ್ಮನೆಗೆ ಆಯ್ಕೆಯಾಗಲಿ  ದ್ದಾರೆ. ಇದಕ್ಕಾಗಿಯೇ ವಿಪಕ್ಷಗಳ ಸದಸ್ಯರು ರಾಜೀನಾಮೆ ನೀಡಿರುವು ದರಿಂದ ಐದು ಸ್ಥಾನಗಳು ಖಾಲಿ ಉಳಿದಿವೆ. 

ಸಮಾಜವಾದಿ ಪಕ್ಷದ ಒಬ್ಬರು ಮತ್ತು ಬಿಎಸ್‌ಪಿಯ ನಾಲ್ವರು ಎಂಎಲ್‌ಸಿಗಳು ತ್ಯಾಗಪತ್ರ ಸಲ್ಲಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್‌ ಸುಗಮವಾಗಿ ಆಯ್ಕೆಯಾಗುವುದಕ್ಕೆ ಬಿಜೆಪಿಯೇ ವಿಧಾನ ಪರಿಷತ್‌ ಸದಸ್ಯರು ರಾಜೀನಾಮೆ ನೀಡುವಂತೆ ಮಾಡಿದೆ ಎಂದು ಎರಡೂ ಪಕ್ಷಗಳ ನಾಯಕರು ಆರೋಪಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next