Advertisement

ಯುಪಿ ಅಸೆಂಬ್ಲಿಗೆ ಕೈಕೈ ಹಿಡಿದು ಬಂದ ಯೋಗಿ, ಆಜಂ ಖಾನ್‌, Watch

04:23 PM Dec 15, 2017 | Team Udayavani |

ಲಕ್ನೋ : ಉತ್ತರ ಪ್ರದೇಶ ವಿಧಾನಸಭೆಯ ಚಳಿಗಾಲದ ಅಧಿವೇಶನದ ನಿನ್ನೆ ಗುರುವಾರದ ಮೊದಲ ದಿನದ ಕಲಾಪ ಅತ್ಯಪರೂಪದ ಸ್ನೇಹ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

Advertisement

ರಾಜಕೀಯ ರಂಗದಲ್ಲಿ  ಹಾವು – ಮುಂಗುಸಿ ಎಂಬಂತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಸಮಾಜವಾದಿ ಪಕ್ಷದ ವಿವಾದಿತ ನಾಯಕ ಆಜಂ ಖಾನ್‌ ಕೈ ಕೈ ಹಿಡಿದುಕೊಂಡು, ಬಹುಕಾಲದ ಅಪ್ಪಟ ಸ್ನೇಹಿತರಂತೆ ವಿಧಾನಸಭೆ ಕಾರಿಡಾರ್‌ಗೆ ನಡೆದು ಬಂದರು. 

ಸದಾ ಪರಸ್ಪರ ವಾಕ್‌ ಸಮರದಲ್ಲೇ ನಿರತರಾಗುವ ಈ ಇಬ್ಬರು ನಾಯಕರು ಕೈ ಕೈ ಹಿಡಿದುಕೊಂಡು ವಿಧಾನಸಭೆ ಕಾರಿಡಾರ್‌ಗೆ ನಡೆದುಕೊಂಡು ಬರುತ್ತಿರುವುದನ್ನು ಕಂಡು ಚಕಿತರಾದ ಮಾಧ್ಯಮ ಮಂದಿ ಒಡನೆಯೇ ಈ ನಾಯಕರಿಂದ ಅಪರೂಪದ ಪೋಸ್‌ ಪಡೆದುಕೊಂಡು ತಮ್ಮ ಕ್ಯಾಮೆರಾದಲ್ಲಿ “ಸಾರ್ವಕಾಲಿಕ ದಾಖಲೆ” ಗಾಗಿ  ಕ್ಲಿಕ್ಕಿಸಿಸಿಕೊಂಡರು. 

ಸಿಎಂ ಯೋಗಿ ಆದಿತ್ಯನಾಥ್‌ ಮತ್ತು ಆಜಂ ಖಾನ್‌ ಬಹುತೇಕ ಒಂದೇ ಹೊತ್ತಿನಲ್ಲಿ ವಿಧಾನಸಭೆಯ ಕಾರಿಡಾರ್‌ ಪ್ರವೇಶಿಸಿದಾಗ ಉಭಯತರು ಪರಸ್ಪರರನ್ನು ಅಭಿನಂದಿಸಿ ಕೈಕೈ ಹಿಡಿದುಕೊಂಡು ಕಾರಿಡಾರ್‌ ಪ್ರವೇಶಿಸಿದರು. 

ಈ ಹಿಂದೆ ಯೋಗಿ ಆದಿತ್ಯನಾಥ್‌ ಅವರು “ನಮಾಜ್‌ ಮತ್ತು ಸೂರ್ಯ ನಮಸ್ಕಾರ ಒಂದೇ’ ಎಂದು ಹೇಳಿದ್ದರು; ಅದಕ್ಕೆ ಉತ್ತರವಾಗಿ ಆಜಂ ಖಾನ್‌, “ಹಾಗಿದ್ದರೆ ನೀವು ಸೂರ್ಯ ನಮಸ್ಕಾರಕ್ಕೆ ಬದಲಾಗಿ ನಮಾಜ್‌ ಮಾಡಲು ಬಯಸುವಿರಾ?’ ಎಂದು ವ್ಯಂಗ್ಯವಾಡಿದ್ದರು. ಮಾತ್ರವಲ್ಲದೆ ನಮಾಜ್‌ ಮಾಡುವುದಕ್ಕೆ ಆದಿತ್ಯನಾಥ್‌ ಅವರನ್ನು ಯಾರೂ ನಿರ್ಬಂಧಿಸುವುದಿಲ್ಲ’ ಎಂದೂ ಹೇಳಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next