Advertisement

ಅಯೋಧ್ಯೆಯಲ್ಲಿ ರಾಮನ ಡಿಜಿಟಲ್‌ ಮ್ಯೂಸಿಯಂ

12:31 PM Nov 03, 2019 | Hari Prasad |

ಲಕ್ನೋ: ಉತ್ತರ ಪ್ರದೇಶ ಸರಕಾರ ಅಯೋಧ್ಯೆಯಲ್ಲಿ ಶ್ರೀರಾಮನ ಬಗ್ಗೆ ಡಿಜಿಟಲ್‌ ಮ್ಯೂಸಿಯಂ ನಿರ್ಮಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ. ಈ ಮೂಲಕ ದೇಗುಲಗಳ ನಗರದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದಂತೆ ಆಗುತ್ತದೆ ಎಂದು ಸಚಿವ ಶ್ರೀಕಾಂತ್‌ ಶರ್ಮಾ ಸಭೆಯ ಅನಂತರ ಮಾಧ್ಯಮಗಳಿಗೆ ವಿವರಣೆ ನೀಡಿದ್ದಾರೆ. ಇದರ ಜತೆಗೆ ಆಹಾರ ಮಾರಾಟ ವಲಯ, ಶ್ರೀರಾಮನ ಬೃಹತ್‌ ಪ್ರತಿಮೆ ಸ್ಥಾಪನೆ ಬಗ್ಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ 446 ಕೋಟಿ ರೂ. ವೆಚ್ಚದಲ್ಲಿ 61. 38 ಹೆಕ್ಟೇರ್‌ ಪ್ರದೇಶದಲ್ಲಿ ಜಮೀನು ವಶಪಡಿಸಿಕೊಳ್ಳಲೂ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ಸಂವಿಧಾನದಲ್ಲಿ ವಿಶ್ವಾಸ ಇರಿಸಿ: ಸಂವಿಧಾನದಲ್ಲಿ ವಿಶ್ವಾಸ ಇರಿಸಬೇಕು ಎಂದು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಶುಕ್ರವಾರ ಮುಸ್ಲಿಂ ಸಮುದಾಯದಲ್ಲಿ ಮನವಿ ಮಾಡಿಕೊಂಡಿದೆ. ಅಯೋಧ್ಯೆ ಯಲ್ಲಿರುವ 2.77 ಎಕರೆ ಜಮೀನು ಯಾರಿಗೆ ಸೇರಬೇಕು ಎಂಬ ಬಗ್ಗೆ ಸುಪ್ರೀಂಕೋರ್ಟ್‌ ಶೀಘ್ರದಲ್ಲಿ ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಈ ಮನವಿ ಮಹತ್ವ ಪಡೆದಿದೆ.

ಕೆಲವೊಂದು ಮಾಧ್ಯಮಗಳಲ್ಲಿ ಶೀಘ್ರದಲ್ಲಿಯೇ ಸುಪ್ರೀಂಕೋರ್ಟ್‌ ಅಯೋಧ್ಯೆ ಬಗ್ಗೆ ಶೀಘ್ರದಲ್ಲಿಯೇ ತೀರ್ಪು ನೀಡಲಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗುತ್ತಿವೆ. ಮುಸ್ಲಿಂ ಸಮುದಾಯ ಸಂವಿಧಾನದಲ್ಲಿ ವಿಶ್ವಾಸ ಇರಿಸಿಕೊಳ್ಳಬೇಕು. ಈ ಪ್ರಕರಣ ಸ್ವತಂತ್ರ ಭಾರತದಲ್ಲಿ ಅತ್ಯಂತ ಸೂಕ್ಷ್ಮವಾಗಿದೆ ಎಂದು ಸಂಘಟನೆ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next