Advertisement

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

04:53 PM May 01, 2024 | Team Udayavani |

ಧಾರವಾಡ : ದೇಶದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಫಲರಾಗಿದ್ದಾರೆ. ಹೀಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಜೈ ಕಿಸಾನ್ ಆಂದೋಲನ ಮುಖ್ಯಸ್ಥ ಯೋಗೇಂದ್ರ ಯಾದವ್ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಆದರೆ ಈ ವರೆಗೂ ದ್ವಿಗುಣವಂತೂ ಆಗಿಲ್ಲ. ಕನಿಷ್ಠ ಪಕ್ಷ ಶೇಕಡಾ ಎಷ್ಟು ಅಧಿಕವಾಗಿದೆ ಎಂಬುದನ್ನಾದರೂ ಈ ದೇಶದ ಮತ್ತು ರಾಜ್ಯದ ರೈತರಿಗೆ ತಿಳಿಸಬೇಕು ಎಂದರು.

ಬಿಜೆಪಿಯ ರೈತ ವಿರೋಧಿ ಧೋರಣೆಯಿಂದ ದೇಶದ ಕೃಷಿ ವ್ಯವಸ್ಥೆ ಗದಗೆಟ್ಟು ಹೋಗಿದೆ. ರಾಸಾಯನಿಕ ಗೊಬ್ಬರದ ಬೆಲೆ ಏರಿಕೆಯಾಗಿದೆ. ಜೊತೆಗೆ ಗೊಬ್ಬರ ಪಾಕೇಟುಗಳ ತೂಕ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಇಂಧನ ಬೆಲೆ ಇಳಿಮುಖವಾಗಿಲ್ಲ. ಹೀಗಾಗಿ ಮೋದಿ ರಾಜ್ಯದಲ್ಲಿ ರೈತರು ಅನಾಥರಾಗುತ್ತಿದ್ದಾರೆ ಎಂದು ಯಾದವ್ ಆರೋಪಿಸಿದರು.

ಆಪ್ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ರಾಜೇಂದ್ರ ಸಿಂಗ್ ಟೀಕಾಯತ್ ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ನಾವು ಬಿಜೆಪಿಯನ್ನು ಸೋಲಿಸಿ ಎಂದು ಅಭಿಯಾನ ಮಾಡುತ್ತಿದ್ದೇವೆ. ರೈತರು ಮತ್ತು ಕೃಷಿ ಉಳಿಯಬೇಕಾದರೆ ಈ ಬಾರಿ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಯೋಗೇಂದ್ರ ಹೇಳಿದರು.

ಮೋದಿ ಅವರು ವಿದೇಶಿ ಬ್ಯಾಂಕುಗಳಲ್ಲಿನ ಕಪ್ಪು ಹಣವನ್ನು ತಂದು ಕೊಡುತ್ತೇವೆ ಎಂದಿದ್ದರು. ಆದರೆ ಕೊಡಲಿಲ್ಲ. ಇದೀಗ ಕಾಂಗ್ರೆಸ್‌ನವರು ಕೊನೆ ಪಕ್ಷ ರೈತರ ಸಾಲಮನ್ನಾ ಮಾಡುತ್ತೇವೆ ಎನ್ನುತ್ತಿದ್ದು, ಹೀಗಾಗಿ ಕಾಂಗ್ರೆಸ್‌ಗೆ ರೈತರು ಮತ ಹಾಕಬೇಕು.
-ಯೋಗೇಂದ್ರ ಯಾದವ್, ಜೈ ಕಿಸಾನ್ ಆಂದೋಲನ ಮುಖ್ಯಸ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next