Advertisement
ಸಾಮಾನ್ಯವಾಗಿ ಬ್ಯಾಕ್ಟೀರಿಯಾ, ವೈರಸ್ ಸೋಂಕು ಇದಕ್ಕೆ ಕಾರಣವಾಗಿರುತ್ತದೆ. ಜ್ವರದಲ್ಲಿ ದೇಹದ ತಾಪ ಹೆಚ್ಚಾಗುವುದಲ್ಲದೆ ಗಂಟಲು ನೋವು, ಸೆಳೆತ, ತಲೆನೋವು, ಮೂಗು ಸೋರುವಿಕೆಯೂ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಗಟ್ಟಲು ನಿಯಮಿತವಾಗಿ ಯೋಗ ಮಾಡಬೇಕು.
Related Articles
ಪ್ರಾಣಾಯಾಮದ ಪ್ರತಿಯೊಂದು ಭಂಗಿಯೂ ದೇಹಕ್ಕೆ ಚೈತನ್ಯ ತುಂಬುತ್ತದೆ. ಅದರಲ್ಲಿ ನಾಡಿ ಶೋಧನ ಪ್ರಾಣಾಯಾಮವು ನರ ವ್ಯವಸ್ಥೆಗೆ ಆರಾಮ ಒದಗಿಸುವುದು ಮಾತ್ರವಲ್ಲದೆ ದೇಹದ ತಾಪಮಾನ ಇಳಿಸಲು ನೆರವಾಗುತ್ತದೆ.
Advertisement
ಇದರಿಂದ ಸರಳವಾದ ಉಸಿರಾಟ ಸಾಧ್ಯವಾಗುವುದಲ್ಲದೆ ಉಸಿರಾಟದ ವ್ಯವಸ್ಥೆ, ಶ್ವಾಸಕೋಶವನ್ನು ಶುದ್ಧೀಕರಿಸಬ ಹುದು. ತಲೆನೋವು ನಿವಾರಿಸಲು ಇದು ಅತ್ಯುತ್ತಮ. ಜ್ವರವಿದ್ದಾಗ ಒಂದು ಬಾರಿಗೆ 9ರಂತೆ ದಿನದಲ್ಲಿ ಮೂರು ಬಾರಿ ಈ ಪ್ರಾಣಾಯಾಮ ಮಾಡಬಹುದು.
ಶೀತಲಿ ಪ್ರಾಣಾಯಾಮವು ದೇಹವನ್ನು ತಂಪಾಗಿರಿಸುತ್ತದೆ. ಈ ಭಂಗಿಯಲ್ಲಿ ಉಸಿರಾಟದಿಂದ ಬಾಯಿಯ ಮೂಲಕ ಗಾಳಿಯನ್ನು ತೆಗೆದುಕೊಂಡು ಮೂಗಿನಲ್ಲಿ ಹೊರಬಿಡಲಾಗುತ್ತದೆ. ಇದರಿಂದ ದೇಹ ಸಂಪೂರ್ಣ ತಂಪಾಗುವುದಲ್ಲದೆ ನರ ವ್ಯವಸ್ಥೆಗೂ ಚೈತನ್ಯ ದೊರೆಯುವುದು.
ಅನುಲೋಮಾ ವಿಲೋಮಾ ಪ್ರಾಣಾಯಾಮವು ದೇಹವನ್ನು ಸಂಪೂರ್ಣ ಶುದ್ಧೀಕರಿಸುತ್ತದೆ. ಇದು ಶೀತ, ಜ್ವರದ ಲಕ್ಷಣಗಳನ್ನು ಶೀಘ್ರದಲ್ಲಿ ಕಡಿಮೆ ಮಾಡುತ್ತದೆ. ಉಸಿರನ್ನು ಎಳೆದು ಒತ್ತಡ ಪೂರ್ವಕವಾಗಿ ಹೊರಬಿಡುವ ಕಪಾಲಭಾತಿ ಪ್ರಾಣಾಯಾಮದಿಂದ ಮೂಗಿನ ಹೊಳ್ಳೆಗಳು ಶುದ್ಧವಾಗುವುದು. ಇದು ದೇಹದಲ್ಲಿರುವ ಶೇ. 80ರಷ್ಟು ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ.