Advertisement

ಪೇಜಾವರ, ಪಲಿಮಾರು ಶ್ರೀಗಳಿಂದ ಯೋಗಾಸನ

11:25 PM Jun 21, 2020 | Sriram |

ಉಡುಪಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಬಹುತೇಕ ಮನೆಗಳಲ್ಲಿಯೇ ಯೋಗಾಸನಗಳನ್ನು ನಡೆಸಿದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನೀಲಾವರ ಗೋಶಾಲೆಯಲ್ಲಿ ಯೋಗಾಸನ ನಡೆಸಿದರು.

Advertisement

56ರ ಹರೆಯದ ಶ್ರೀಗಳು ಕಿರಿಯ ವಯಸ್ಸಿನಿಂದಲೇ ಯೋಗಾಸನಗಳನ್ನು ಸಿದ್ಧಿಸಿಕೊಂಡವರು. ಇಂದಿಗೂ ನಿತ್ಯ ಯೋಗಾಸನಗಳನ್ನು ನಡೆಸುತ್ತಾರೆ.

ಕೆಲವು ಸಂಘಟನೆಗಳು ಯೋಗ ಪ್ರದರ್ಶನ ನೀಡಿದರೆ, ಬಹುತೇಕ ಸಂಘಟನೆಗಳ ಸದಸ್ಯರು ಮನೆಗಳಲ್ಲಿಯೇ ಯೋಗಾಭ್ಯಾಸ ಮಾಡಿದರು. ಪತಂಜಲಿ ಸಂಸ್ಥೆಯಿಂದ ನೇರ ಪ್ರಸಾರವಿತ್ತು.

64ರ ಹರೆಯದ ಪಲಿಮಾರು ಶ್ರೀಗಳೂ ಮಠದಲ್ಲಿ ಯೋಗಾಭ್ಯಾಸ ಮಾಡಿದರು.




 

Advertisement
Advertisement

Udayavani is now on Telegram. Click here to join our channel and stay updated with the latest news.

Next