Advertisement

ತುಂಬಿದ ಬಾವಿಯಲ್ಲಿ ಮಕ್ಕಳ ಯೋಗಾಸನ: ಜನರಿಂದ ಪ್ರಶಂಸೆ

03:09 PM May 08, 2022 | Team Udayavani |

ದೇವನಹಳ್ಳಿ: ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಅರದೇಶನಹಳ್ಳಿ ಗಾಮದ ಜ್ಯೋತಿಷಿ ಡಾ. ಆನಂದ್‌ಕುಮಾರ್‌ ಮತ್ತು ಗೃಹಿಣಿ ರೂಪಾ ದಂಪತಿ ಮಕ್ಕಳಾದ ಲಿಖೀತ್‌ಕುಮಾರ್‌ (12) ಮತ್ತು ತಂಗಿ ದೇವಿಕಾ(8) ಸಾಧನೆ ಇತರರಿಗೆ ಮಾದರಿ ಯಾಗಿದ್ದು, ಯೋಗಾಸಕ್ತಿ ವಿಕ್ಷಕರನ್ನು ಬೆರಗಾಗಿಸುತ್ತದೆ. ಈ ಅಣ್ಣ ತಂಗಿಯ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ತಾಯಿ ರೂಪಾ ಮತ್ತು ಅಜ್ಜಿಯಂದಿರಿಬ್ಬರ ಪ್ರೋತ್ಸಾಹ ಮಕ್ಕಳ ಭವಿಷ್ಯಕ್ಕೆ ಬುನಾದಿ ಯಾಗಿದೆ. ಮನೆಯಲ್ಲಿ ಶಾಲೆ, ರಜೆ ಸಮಯ ದಲ್ಲಿ ಓದಿನ ಜೊತೆಗೆ ಜಲಕ್ರೀಡೆ ಆಸಕ್ತಿ ಹೊಂದಿರುವ ಮಕ್ಕಳಿಗೆ ತಂದೆಯ ಶ್ರಮ ಹೆಚ್ಚು ಇದೆ. ಗ್ರಾಮೀಣ ಭಾಗದಲ್ಲಿ ಇಂತಹ ಪ್ರತಿಭೆಗಳನ್ನು ಹೊಂದಿರುವ ಚಿಣ್ಣರು ಬೆರಳೆಣಿಕೆ ಯಷ್ಟು ಮಾತ್ರ ಕಾಣಲು ಸಾಧ್ಯ. ನುರಿತ ತಜ್ಞರ ಜೊತೆಯಲ್ಲಿ ಈಜು ಬರುವವರ ಜೊತೆಯಲ್ಲಿ ಮಾತ್ರ ಇಂತಹ ಜಲ ಕ್ರೀಡೆಗೆ ಮುಂದಾಗಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೇವಲ 15 ದಿನಗಳಲ್ಲಿ ಇಂತಹ ದೊಡ್ಡ ಸಾಧನೆ ಯನ್ನು ಮಾಡಿದ ಪುಟಾಣಿಗಳ ಯೋಗಾಸನ ಗಮನ ಸೆಳೆಯು ವಂತಹ ದ್ದಾಗಿದೆ ಎಂದು ಸ್ಥಳೀಯ ರೈತ ರಾಮಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ನೀರಿನಲ್ಲಿ ಯೋಗಾಸನ: ಜ್ಯೋತಿಷಿ ಡಾ.ಆನಂದ್‌ ಕುಮಾರ್‌ ಮಾತನಾಡಿ, ನಮ್ಮ ಆಡು ಭಾಷೆಯಲ್ಲಿ ಹಿಂಗಾಣಿ, ಮುಂಗಾಣಿ ಡೈ ಹಾಗೂ ಮೀನಿನಂತೆ ನೀರಿನ ಒಳಗಡೆ ಇವರು ಈಜಾಡುವುದನ್ನು ನೋಡಿದರೆ ಇದರ ಹಿಂದಿನ ಶಕ್ತಿ ಒಂದು ಅಡಗಿದೆ ಎಂದು ಭಾಸವಾಗುತ್ತದೆ. ಮೊದಲು ಈ ಇಬ್ಬರು ಮಕ್ಕಳಿಗೆ ಧೈರ್ಯ ತುಂಬಿ, ನೀರಿನಲ್ಲಿ ಸತತವಾಗಿ ತರಬೇತಿಯನ್ನು ನೀಡಲಾಗುತ್ತಿತ್ತು. ಇಷ್ಟು ಬೇಗ ಇಷ್ಟು ಮಟ್ಟದಲ್ಲಿ ಈಜು ಮತ್ತು ಯೋಗಾಸನವನ್ನು ಮಾಡುತ್ತಾರೆಂಬುದು ನಂಬಲು ಸಾಧ್ಯವಾಗುತ್ತಿಲ್ಲ ಎಂದರು.

ದೃಢ ಸಂಕಲ್ಪ, ಏಕಾಗ್ರತೆಯಿಂದ ನೀರಿನಲ್ಲಿ ಯೋಗ ಪ್ರದರ್ಶನ : ನೀರಿನಲ್ಲಿ ಯೋಗಾಸನ ಮಾಡುವುದು ಅಷ್ಟೇನು ಸುಲಭದ ಕೆಲಸವಲ್ಲ, ಬೃಹತ್‌ ಬಾವಿಯೊಂದರಲ್ಲಿ ಈ ಬೇಸಿಗೆಯಲ್ಲಿ ಕೇವಲ 15 ದಿನಗಳ ಸತತ ತರಬೇತಿಯಿಂದ ನೋಡುಗರ ಗಮನ ಸೆಳೆಯುತ್ತಿದ್ದಾರೆ. ಈ ಅಣ್ಣ-ತಂಗಿಯ ಯೋಗಾಸಕ್ತಿ ನಿಜಕ್ಕೂ ಇತರರಿಗೆ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾಮಾನ್ಯವಾಗಿ ಬಯಲಿನಲ್ಲಿ ಯೋಗಾಸನ ಮಾಡುವುದು ಸಹಜ ಕ್ರಿಯೆಯಾಗಿದೆ. ಯಾವುದೇ ರೀತಿಯ ಪರಿಕರ ಬಳಸದೆಯೇ ದೃಢ ಸಂಕಲ್ಪ ಮತ್ತು ಏಕಾಗ್ರತೆಯಿಂದ ನೀರಿನಲ್ಲಿ ತೇಲುವ ಬಲೂನಿನಂತೆ ಮನುಷ್ಯ ನೀರ ಮೇಲೆ ಉಸಿರಾಡುವ ಕ್ರಿಯೆ ಈ ಚಿಕ್ಕ ಮಕ್ಕಳು ತೋರಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next