ಯೋಗರಾಜ್ ಭಟ್ , ದುನಿಯಾ ಸೂರಿ ಜೊತೆಯಾಗಿ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಜೋಡಿಗೆ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರೂ ಕೈ ಜೋಡಿಸಿದ್ದು, ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ರೆಡಿಯಾಗುವುದು ಪಕ್ಕಾ ಎನ್ನುವ ಮಾತು ಈಗಾಗಲೇ ಶುರುವಾಗಿದೆ.
ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ಸಹ ಅಭಿನಯಿಸಲಿದ್ದು, ಬಿಸಿ ಪಾಟೀಲ್ ಸಂಸ್ಥೆಯಿಂದ ಅವರ ಮಗಳು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ.
ಈ ಸಿನಿಮಾದ ಬಗ್ಗೆ ಚರ್ಚಿಸಲು ಬಿಸಿ ಪಾಟೀಲ್ ನಿವಾಸದಲ್ಲಿ ಎಲ್ಲರೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ ಮಾತಾನಾಡಿರುವ ಯೋಗರಾಜ್ ಭಟ್, ” ಸಿನಿಮಾ ಬರ್ತಿದೆ…ರಾಜ್ಯದ ಕೃಷಿ ಮಂತ್ರಿಗಳು ಸನ್ಮಾನ್ಯ ಶ್ರೀ ಬಿ.ಸಿ.ಪಾಟೀಲ್ ಅವರ ಜೊತೆ.. ಸೂರಿ, ಹರಿಕೃಷ್ಣ, ವಿಕಾಸ್, ಸುಧೀರ್… ಒಂದು ಅದ್ಭುತ ಸಿನಿಮಾ ಲೈನ್ ಅಪ್ ಆಯ್ತು.. ಸ್ನೇಹಿತರೆಲ್ಲರ ಮುದ್ದಾಟ ಗುದ್ದಾಟ ಹಾಗು ಸಪೋರ್ಟ್ ಜೊತೆ ನಿರ್ದೇಶನ ನನ್ನದು.. ನಟ ವರ್ಗ ಅದ್ಭುತ ಆದ್ರೆ ಇವತ್ತು ಹೇಳಂಗಿಲ್ಲ.. ಶೀಘ್ರದಲ್ಲೇ ಬಾಕಿ ಸುದ್ದಿ.. ನನ್ನೆಲ್ಲಾ ಗುರುಗಳಾದ ನನ್ನ ಗೆಳೆಯರಿಗೆ ಗುರು ಪೂರ್ಣಿಮಾ ಶುಭಾಶಯಗಳು..” ಎಂದು ಪೋಸ್ಟ್ ಹಾಕಿದ್ದಾರೆ.
ಇನ್ನು ಈಗಾಗಲೇ ಸೂರಿ, ಯೋಗರಾಜ್ ಭಟ್ ಹಾಗೂ ಹರಿಕೃಷ್ಣ ಅವರು ಕಾಂಬಿನೇಷನ್ ನಲ್ಲಿ ರೆಡಿಯಾದ ಸಿನಿಮಾಗಳು ಸೂಪರ್ ಹಿಟ್ ಆಗಿರುವುದು ಎಲ್ಲರಿಗೂ ಗೊತ್ತು. ಇದೀಗ ಹೊಸ ಪ್ರಾಜೆಕ್ಟ್ ಮೇಲೆ ಕನ್ನಡ ಸಿನಿರಸಿಕರ ಕಣ್ಣು ನೆಟ್ಟಿದೆ.