Advertisement

ಯೋಗ, ಯೋಗಿ ಮತ್ತು ಧ್ಯಾನ ಯೋಗ

09:10 AM Jun 22, 2019 | Suhan S |

ಮಾನವರು ಜ್ಞಾನವನ್ನು ಗಳಿಸಿ, ಅದನ್ನು ಮುಂದಿನ ಪೀಳಿಗೆಗೆ ಕೊಡುವ ಭಾಗ್ಯಶಾಲಿಗಳು. ಭಗವಾನ್‌ ಕೃಷ್ಣನು ಅರ್ಜುನನಿಗೆ, ‘ಯೋಗದ ಪರಂಪರೆಯು ಅನಾದಿಕಾಲದಿಂದಲೂ ಹರಿದು ಬಂದಿದೆ. ನಾನು ವಿವಸ್ವನಿಗೆ ಬೋಧಿಸಿದೆ. ವಿವಸ್ವಸು ಮನುವಿಗೆ ಬೋಧಿಸಿದನು. ಮನು ಇಕ್ಷ್ವಾಕುವಿಗೆ ಬೋಧಿಸಿದ. ನಂತರ ಈ ಜ್ಞಾನವು ಇತರ ರಾಜರ್ಷಿಗಳ ಬಳಿ ತಲುಪಿತು. ಯೋಗದ ಈ ಜ್ಞಾನವನ್ನು ಈಗ ನಾನು ನಿನಗೆ ನೀಡುತ್ತಿರುವೆ’ ಎಂದ. ಯೋಗಿಯ ಲಕ್ಷಣವನ್ನು ಕೃಷ್ಣನು ಬಲು ಸುಂದರವಾಗಿ ವಿವರಿಸಿದ್ದಾನೆ. ಎಲ್ಲಾ ಸಂಕಲ್ಪಗಳನ್ನು ತ್ಯಜಿಸಿ ಧ್ಯಾನದಲ್ಲಿ ಕುಳಿತುಕೊಳ್ಳಬಲ್ಲವರೇ ಯೋಗಿ, ಮಗುವಿನಂಥ ಮುಗ್ಧತೆ ಪಡೆದು, ವರ್ತಮಾನದಲ್ಲಿ ಇರಬಲ್ಲವರೇ ಯೋಗಿ. ಯೋಗ ಎಂದರೆ ನಿಜವಾಗಿಯೂ ಏನನ್ನೂ ಮಾಡದಿರುವುದು, ಕೇಂದ್ರದಲ್ಲಿರುವುದು.

Advertisement

ಆದರೆ, ಯೋಗದ ಮಾರ್ಗದಲ್ಲಿ ಹೊಕ್ಕಬೇಕೆಂದರೆ ಕರ್ಮ ಮಾಡಬೇಕು. ಕೃಷ್ಣನ ಮಾತು ಈ ರೀತಿಯ ಗೊಂದಲದಿಂದ ತುಂಬಿರುತ್ತದೆ. ಸೋಂಬೇರಿಗಳ ಮನಸ್ಸು ಧ್ಯಾನದಲ್ಲಿ ಹೊಕ್ಕುವು ದಿಲ್ಲ. ದೇಹ ಚಡಪಡಿಸಿದರೂ, ಸ್ತಬ್ಧವಾಗಿ ಕುಳಿತುಕೊಳ್ಳಲು ಸಾಧ್ಯವಾಗದಿದ್ದರೂ ಯೋಗ‌ ಸ್ಥಿತಿಗೆ ಹೊಕ್ಕಲು ಸಾಧ್ಯವಿಲ್ಲ.

ಯೋಗವು ವಿಪರೀತ ಕೆಲಸ ಮಾಡುವವರಿಗೆ, ವಿಶ್ರಮಿಸಲಾಗದವರಿಗೆ, ಸೋಂಬೇರಿಗಳಿಗೆ, ವಿಪರೀತ ತಿನ್ನುವವರಿಗೆ, ಬಹಳ ಉಪವಾಸ ಮಾಡುವವರಿಗೆ ಆಗುವುದಿಲ್ಲ. ಯುಕ್ತಾಹಾರ ವಿಹಾರಸ್ಯ-ಯೋಗಿಯು ಚಟುವಟಿಕೆ ಮತ್ತು ವಿಶ್ರಾಂತಿಯ ನಡುವೆ ಸಮತೋಲನ ಹೊಂದಿರುತ್ತಾನೆ ಎಂದ ಕೃಷ್ಣ. ‘ಸನೈಃ ಸನೈರ್‌ ಉಪರಮೇದ್‌’ – ನಿಧಾನವಾಗಿ, ಕ್ರಮೇಣವಾಗಿ ಈ ಪಥದಲ್ಲಿ ನಡೆಯಿರಿ ಎಂದ. ‘ಅಭ್ಯಾಸೇನ ತುಕೌಂತೇಯ, ವೈರಾಗ್ಯೇಣ ಚ ಗೃಹ್ಯತೆ’ – ಅಭ್ಯಾಸದಿಂದ, ವೈರಾಗ್ಯದಿಂದ ಇದು ಸಿದ್ಧಿಸುತ್ತದೆ ಎಂದ ಕೃಷ್ಣ. ‘ಸಮಾಜದಲ್ಲಿ ಅನೇಕ ಕರ್ಮ ಯೋಗಿಗಳಿದ್ದಾರೆ, ಆದರೆ ಅಲ್ಲಿ ಇಲ್ಲಿ ಹೊರಡುವ ಮನಸ್ಸನ್ನು ತಂದು ನನ್ನ ಮೇಲಿರಿಸಿ, ನನ್ನನ್ನು ಪಡೆ, ನನ್ನನ್ನು ನಿನ್ನ ಹೃದಯದಲ್ಲಿ ಸದಾ ಇಟ್ಟುಕೊ’ ಎಂದು ಧ್ಯಾನ ಯೋಗವನ್ನು ಕೃಷ್ಣ, ಅರ್ಜುನನಿಗೆ ಬೋಧಿಸಿದ.

Advertisement

 

● ಶ್ರೀ ಶ್ರೀ ರವಿಶಂಕರ ಗುರೂಜಿ

Advertisement

Udayavani is now on Telegram. Click here to join our channel and stay updated with the latest news.

Next