Advertisement

ಉಪ್ಪಿನಂಗಡಿ ಯೋಗ ಶಿಕ್ಷಕನಿಂದ ವಿಯೆಟ್ನಾಂನಲ್ಲಿ ಯೋಗ ತರಬೇತಿ

11:11 AM Jun 23, 2018 | Team Udayavani |

ಉಪ್ಪಿನಂಗಡಿ: ಭಾರತದ ಯೋಗ ಇಂದು ವಿಶ್ವದೆಲ್ಲೆಡೆ ಮಾನ್ಯತೆಗೆ ಒಳಗಾಗುತ್ತಿದ್ದರೆ, ಇನ್ನೊಂದೆಡೆ ಭಾರತೀಯ ಯೋಗ ಶಿಕ್ಷಕರಿಗೆ ವಿಶ್ವದೆಲ್ಲೆಡೆ ಬೇಡಿಕೆ ಇದೆ. ದೂರದ ವಿಯೆಟ್ನಾಂ ದೇಶದಲ್ಲಿ ಭಾರತೀಯ ಯುವ ಯೋಗ ಶಿಕ್ಷಕ ದಂಪತಿ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Advertisement

ಉಪ್ಪಿನಂಗಡಿ ಪರಿಸರದ ಬಾಲಕೃಷ್ಣ ಗೌಡ ಕಳೆದ 3 ವರ್ಷಗಳಿಂದ ವಿಯೆಟ್ನಾಂ ದೇಶದಲ್ಲಿ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಅವರು ಉಪ್ಪಿನಂಗಡಿ ಪರಿಸರದ ಯೋಗ ಶಿಕ್ಷಕಿ ಚೈತ್ರಾ ಅವರನ್ನು ವಿವಾಹವಾಗಿ ವಿಯೆಟ್ನಾಂಗೆ ಕರೆದೊಯ್ದಿದ್ದು, ಅಲ್ಲಿ ಅವರಿಬ್ಬರೂ ವಿಯೆಟ್ನಾಂ ಪ್ರಜೆಗಳಿಗೆ ಯೋಗ ಶಿಕ್ಷಣವನ್ನು ನೀಡುತ್ತಿದ್ದಾರೆ. 

ಅಲ್ಲಿನ ಜನತೆ ವಿಶ್ವ ಯೋಗ ದಿನವನ್ನು ಸಂಭ್ರಮದಿಂದ ಎದುರು ನೋಡಿದ್ದು, ವಿಯೆಟ್ನಾಂ ರಾಜಧಾನಿ ಹಾನೋಯಿ ಹಾಗೂ ಹಾಯಿಫಾಂಗ್‌ ಎಂಬಲ್ಲಿ ಸಾವಿರಾರು ಜನರು ಯೋಗದ ಪೂರ್ವ ಅಭ್ಯಾಸ ಮಾಡಿದ್ದು, ವಿಶ್ವ ಯೋಗ ದಿನದಂದು ಅಲ್ಲಿನ ಜನ ಸಂಭ್ರಮದಿಂದ ಭಾಗವಹಿಸಿದ್ದಾರೆ ಎಂದು ಬಾಲಕೃಷ್ಣ ಗೌಡ ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next