ಆಧುನಿಕ ಜೀವನ ಶೈಲಿ, ಧಾವಂತ ಕಾಲದ ಮಧ್ಯೆಯ ಬದುಕು ನಮ್ಮದು. ಇದಕ್ಕೆ ಯೋಗದಿಂದ ಮಾತ್ರ ಆರಾಮ. ನಗರಗಳಲ್ಲಿ ಕೆಲಸ ಮಾಡುವ ಮಂದಿಗೆ ಒತ್ತಡ ತುಸು ಹೆಚ್ಚು. ನಾನಾ ಒತ್ತಡಗಳು ಕಾಡುತ್ತಿರುತ್ತವೆ. ಈ ಮಾನಸಿಕತೆಯಿಂದ ಹೊರಬರಲು ಯೋಗ ಸಹಕಾರಿ.ಚಿಕ್ಕ ಮಕ್ಕ ಳಿಂದ ವಯಸ್ಕರ ಒತ್ತಡ, ಮಕ್ಕಳಿಗೆ ಪರೀಕ್ಷೆ ಒತ್ತಡವಾದರೆ ದೊಡ್ಡವರಿಗೆ ಜೀವನದ ಒತ್ತಡ.
ಈ ಎಲ್ಲ ಒತ್ತಡಗಳನ್ನು ಮೆಟ್ಟಿ ನಿಂತು ಸವಾಲು ಗಳನ್ನು ಸಮರ್ಥವಾಗಿ ಎದುರಿಸಲು ಯೋಗ ಸಹಕಾರಿ. ಮಾನಸಿಕ ಖನ್ನತೆಯನ್ನು ಹೋಗ ಲಾಡಿಸುತ್ತದೆ. ಏಕಕಾಲಕ್ಕೆ ಹಲವು ಕೆಲಸ ಕಾರ್ಯಗಳ ಒತ್ತಡವಿದ್ದರೂ ಯೋಗ ಮಾಡುವುದರಿಂದ ಮನಸನ್ನು ನಿಯಂತ್ರಣಗೊಳಿಸುವ ಮೂಲಕ ಕೆಲಸವನ್ನು ಆರಾಮವಾಗಿ ನಿರ್ವಹಿಸಬಹುದಾಗಿದೆ. ಈ ಹಿನ್ನೆಲೆ ಒತ್ತಡ ನಿವಾರಣೆಗೆ ಯೋಗದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಪದೇ ಪದೇ ಒತ್ತಡಕ್ಕೊಳಗಾಗುವವರು ಆರಂಭದಲ್ಲಿ ಶವಾಸನದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಬೇಕು. ಮಾತ್ರವಲ್ಲದೇ ಆರು ಬಾರಿ ದೀರ್ಘ ಉಸಿರಾಟ ನಡೆಸಬೇಕು. ಬಳಿಕ ಸ್ವಲ್ಪಹೊತ್ತು ನೆಟ್ಟಗೆ ನೇರವಾಗಿ ಕುಳಿತುಕೊಂಡು ಧ್ಯಾನ ಮಾಡಬೇಕು. ಸರಳ ವ್ಯಾಯಾಮಗಳನ್ನು ಅಥವಾ ನಡಿಗೆಯನ್ನು ಮಾಡಬಹುದು.
ಈ ಯೋಗಾಸನಗಳನ್ನು ಮಾಡಿ
ಅರ್ಧ ಚಕ್ರಾಸನ, ಪಾಸಹಸ್ತಾಸನ, ಪಾಶೋತ್ತಾನಾಸನ, ಪರ್ವತಾಸನ, ವಜ್ರಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ, ಸರ್ವಾಂಗಾಸನ, ಹಲಾಸನ, ಶೀರ್ಷಾ ಸನ, ಅಧೋಮುಖ ಶ್ವಾನಾಸನ, ಊಧ್ವìಮುಖ ಶ್ವಾನಾಸನ ಮಾಡಿ.
ಈ ಎಲ್ಲ ಒತ್ತಡಗಳಿಗೆ ಭಾರತೀಯ ಕಲೆಯಾದ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಸಹಕಾರಿಯಾಗುತ್ತದೆ.