ದುಬೈ: ದುಬೈನಲ್ಲಿ ವಾಸವಿರುವ ಭಾರತೀಯ ಯೋಗ ಟೀಚರ್ ಒಬ್ಬರು ಇದೀಗ ಯೋಗ ಮೂಲಕವೇ ಗಿನ್ನೆಸ್ ರೆಕಾರ್ಡ್ ಬರೆದಿದ್ದಾರೆ.
21 ವರ್ಷದ ಮೊರಾಡಿಯಾ ಬರೋಬ್ಬರಿ 29 ನಿಮಿಷ 4 ಸೆಕೆಂಡುಗಳ ಕಾಲ ವೃಶ್ಚಿಕಾಸನ ಮಾಡಿ, ದಾಖಲೆ ಬರೆದಿದ್ದಾರೆ.
4 ನಿಮಿಷ 47 ಸೆಕೆಂಡುಗಳ ಕಾಲ ವೃಶ್ಚಿಕಾಸನ ಮಾಡಿದ್ದು ಈ ಹಿಂದಿನ ದಾಖಲೆಯಾಗಿದ್ದು, ಅದನ್ನು ಮೊರಾಡಿಯಾ ಮುರಿದಿದ್ದಾರೆ ಎಂದು ತಿಳಿಸಲಾಗಿದೆ.
ಎಂಟನೇ ವಯಸ್ಸಿನಿಂದಲೇ ಮೊರಾಡಿಯಾ ಯೋಗಾಭ್ಯಾಸ ಮಾಡುತ್ತಿದ್ದಾರೆ. ಗಿನ್ನೆಸ್ ರೆಕಾರ್ಡ್‌ಗಾಗಿ ಅವರು ಈ ವರ್ಷ ಫೆ.22ರಂದು ಯತ್ನಿಸಿ, ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಪವಾರ್ ವಿರುದ್ಧ ಪೋಸ್ಟ್ ಮಾಡಿದ್ದ ನಟಿಗೆ ಜಾಮೀನು; ಜೈಲಿನಿಂದ ಬಿಡುಗಡೆ
22/2/22 ವಿಶೇಷ ಪ್ಯಾಲಿಂಡ್ರೋಮ್ ದಿನವಾದ್ದರಿಂದ ಅದೇ ದಿನ ದಾಖಲೆಯ ಯತ್ನ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.