Advertisement

ಮಾನವ ನಿರೋಗಿಯಾಗಲು ಯೋಗ ಪೂರಕ: ಗೋಪಾಲಕೃಷ್ಣ 

01:41 PM Mar 31, 2018 | Team Udayavani |

ಶರವು: ಯೋಗ ಮನುಷ್ಯನ ಏಕಾಗ್ರತೆಯನ್ನು ಜಾಗೃತಗೊಳಿಸಿ ನಿರಂತರ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಮಾನವ ನಿರೋಗಿಯಾಗಲು ಯೋಗ ಪೂರಕ ಎಂದು ಯೋಗ ರತ್ನ ಗೋಪಾಲಕೃಷ್ಣ ದೇಲಂಪಾಡಿ ಹೇಳಿದರು. ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಕಾಲಾವಧಿ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

Advertisement

ಯೋಗವು ವಿದ್ಯಾರ್ಥಿಗಳಲ್ಲಿ ಹಾಗೂ ವಯಸ್ಕರಲ್ಲಿ ನೆನಪಿನ ಶಕ್ತಿ ವೃದ್ಧಿಸುತ್ತದೆ. ಯೋಗನಿದ್ರಾ, ನಿದ್ರಾ ಯೋಗ ಇವೆಲ್ಲವೂ
ಮನಸ್ಸನ್ನು ಹುಮ್ಮಸ್ಸಿನಲ್ಲಿರುವಂತೆ ಮಾಡುತ್ತದೆ ಎಂದರು.

ಸಮ್ಮಾನ
ಯಕ್ಷಗುರು ರವಿ ಅಲೆವೂರಾಯ ಅವರನ್ನು 2018ನೇ ಸಾಲಿನ ದಿ| ರಾಮಕೃಷ್ಣ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ನವೀನ್‌ ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ, ಡಾ| ಸುದೇಶ್‌ ಶಾಸ್ತ್ರಿ ಉಪಸ್ಥಿತರಿದ್ದರು.

ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಸೀತಾರಾಮ ಕುಲಾಲ್‌ ವಂದಿಸಿದರು. ಬಳಿಕ ಸರಯೂ ಕಲಾವಿದರಿಂದ ‘ಮೇಧಿನಿ
ನಿರ್ಮಾಣ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next