Advertisement

ಯೋಗ ಸಂಗ‌ ಸಾಧಕ ಸಂಗಮೇಶ

08:22 AM Jun 21, 2019 | Team Udayavani |

ಬೈಲಹೊಂಗಲ: ಯೋಗದಲ್ಲಿ ಆಸಕ್ತಿ ಬೆಳೆಸಿಕೊಂಡು ಕಳೆದ 10 ವರ್ಷಗಳಿಂದ ತಮ್ಮ ಯೋಗ ಕಲೆಯನ್ನು ಪ್ರದರ್ಶಿಸಿ ನಾಡಿನ ಮೇರುಪ್ರತಿಭೆಯಾಗಿ ಹೊರಹೊಮ್ಮಿರುವ ಇಲ್ಲಿನ ಡಾ| ಸಂಗಮೇಶ್‌ ಸವದತ್ತಿಮಠ ಯೋಗದಿಂದ ಜನರ ಆರೋಗ್ಯ ಕಾಪಾಡುವಲ್ಲಿ ಅನೇಕರಿಗೆ ದಾರಿ ದೀಪವಾಗಿದ್ದಾರೆ.

Advertisement

2013 ರಲ್ಲಿ ಸನಾತನ ಭಾರತೀಯ ಶತಾಯುಷಿ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ಯೋಗಾಸನವನ್ನು ಸಕಲರಿಗೂ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ನಾಡಿನಾದ್ಯಂತ ಯೋಗ ಶಿಬಿರ, ಆರೋಗ್ಯ ಶಿಬಿರ ಹಾಗೂ ಇನ್ನೂ ಹಲವು ಉಪಯುಕ್ತ ಸಮಾಜ ಸೇವೆಯಿಂದ ಹೆಸರುವಾಸಿಯಾಗಿದ್ದಾರೆ. 2010 ರಿಂದ ಯೋಗ ಶಿಬಿರ ಪ್ರಾರಂಭಿಸಿ ಇಲ್ಲಿಯವರೆಗೆ 300ಕ್ಕಿಂತ ಹೆಚ್ಚು ಯೋಗ ಮತ್ತು ಆರೋಗ್ಯ ಶಿಬಿರ ಮಾಡಿ ಯಶಸ್ವಿ ಯಾಗಿದ್ದಾರೆ. ಅದರಲ್ಲಿ 200 ಹೆಚ್ಚು ಉಚಿತ ಯೋಗ ಶಿಬಿರವನ್ನು ಮಾಡಿದ್ದಾರೆ. ಇವರು ಪಾಂಡಿತ್ಯವನ್ನು ಗುರುತಿಸಿ ”ಸರಳ ಜೀವನ” ವಾಹಿನಿಯ ಇವರಿಗೆ ಬೆಳಿಗ್ಗೆ 6:45 ಕ್ಕೆ ಯೋಗ ಗುರುವಾಗಿ ಸರಳ ಯೋಗ ಕಾರ್ಯಕ್ರಮ ನಡೆಸಿಕೊಡಲು ಅವಕಾಶ ನೀಡಿತ್ತು. ದಿಗ್ವಿಜಯ್‌ ವಾಹಿನಿಯಲ್ಲಿ ಕಲಿಯೋಗ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿತ್ತು. ಇಲ್ಲಿಯವರೆಗೆ 25,000ಕ್ಕಿಂತ ಹೆಚ್ಚು ಜನರಿಗೆ ಯೋಗವನ್ನು ಕಲಿಸಿದ್ದಾರೆ. ಡಾ| ಸಂಗಮೇಶ ಸವದತ್ತಿಮಠ ಅವರು ಓದಿದ್ದು ಇಂಜಿನಿಯರಿಂಗ್‌ ಆದರೂ ಯೋಗ ಮತ್ತು ನಿಸರ್ಗ ಚಿಕಿತ್ಸೆಯಲ್ಲಿ ಆಸಕ್ತಿ ತಾಳಿ ಯೋಗಾ ಕೋರ್ಸ್‌ಗಳನ್ನು ಮಾಡಿ ಯೋಗ ಹಾಗೂ ನಿಸರ್ಗ ಚಿಕಿತ್ಸೆ ಅಲ್ಲಿ ಪರಿಣತಿ ಸಾಧಿಸಿದ್ದಾರೆ. ಇಷೇr ಅಲ್ಲದೆ ಇನ್ನೂ ಹೆಚ್ಚಿನ ಯೋಗ ಅಧ್ಯಾತ್ಮ ಆಚಾರ ವಿಚಾರ ಹಾಗೂ ಸಂಸ್ಕಾರಗಳನ್ನು ತಿಳಿದುಕೊಳ್ಳಲು ದೇಶದ ಉದ್ದಗಲಕ್ಕೂ ಹಲವು ಆಧ್ಯಾತ್ಮ ಶಕ್ತಿ ಕೇಂದ್ರಗಳಾದ ಹರಿದ್ವಾರ, ಹೃಷಿಕೇಶ, ಮೌಂಟ್ ಅಬು ಹಿಮಾಲಯ ಮುಂತಾದವುಗಳಲ್ಲಿ ಸಂಚರಿಸಿ ಜ್ಞಾನ ಪಡೆದುಕೊಂಡಿದ್ದಾರೆ.

 

•ಸಿ.ವೈ.ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next