Advertisement

ಯೋಗ-ಧ್ಯಾನ-ಸುದರ್ಶನ ಕ್ರಿಯಾ ಶಿಬಿರ

12:30 PM Dec 11, 2021 | Team Udayavani |

ಯಾದಗಿರಿ: ಯೋಗ, ಧ್ಯಾನ ಮತ್ತು ಸುದರ್ಶನ ಕ್ರಿಯೆಯಿಂದ ಶಾಂತಿ-ನೆಮ್ಮದಿ ಸಿಗಲು ಸಾಧ್ಯ. ಹೀಗಾಗಿ ಪ್ರತಿದಿನ ಯೋಗಾಸನ ಮಾಡಿ, ಅಪರಾಧಕ್ಕೆ ಕೊನೆಯಿಲ್ಲ. ಅದಕ್ಕಾಗಿ ಪರಿವರ್ತನೆಯಾಗೋದು ಬಹಳಮುಖ್ಯ. ನಾವು ಬದಲಾವಣೆಯಾದರೆ ಮಾತ್ರ ಜಗತ್ತು ಬದಲಾವಣೆ ಆಗುತ್ತದೆ. ಎಲ್ಲರೂ ಪರಿವರ್ತನೆಯಾದರೆ ಮಾತ್ರ ಕುಟುಂಬದಲ್ಲಿನ ಸದಸ್ಯರು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಹಿರಿಯ ಸಿವಿಲ್‌ ನ್ಯಾಯಾಧಿಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಸಾಹಿಲ್‌ ಅಹ್ಮದ್‌ ಕುನ್ನಿಭಾವಿ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಸಹಯೋಗದಲ್ಲಿ ನಡೆದ ಯೋಗ, ಧ್ಯಾನ ಮತ್ತು ಸುದರ್ಶನ ಕ್ರಿಯಾ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ ಎಂದು ಬಸವಣ್ಣನವರ ವಚನವನ್ನು ನ್ಯಾಯಾಧಿಧೀಶರು ಗುಣಗಾನ ಮಾಡಿ ಶರಣರ ತತ್ವಗಳನ್ನು ಎಲ್ಲರೂ ಮೈಗೂಡಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ ವೇದಮೂರ್ತಿ ಮಾತನಾಡಿ, ಸಿಟ್ಟು ಮಾನವನ ಸಹಜವಾದ ಗುಣ. ಆದರೆ ಕೋಪ, ಆವೇಶದ ಕೈಗೆ ಬುದ್ದಿ ಕೊಟ್ಟರೆ ಆಗಬಾರದ ಅನಾಹುತಗಳು ನಡೆಯುವ ಸಂಭವವಿದೆ. ಅದಕ್ಕಾಗಿ ಸಿಟ್ಟು ಬಂದಾಗ ಅಂಕಿ-ಅಂಶಗಳನ್ನು ಎಣಿಸಿ ಅಥವಾ ದೀರ್ಘ‌ವಾದ ಉಸಿರು ಎಳೆದುಕೊಂಡು ದೇವರನ್ನು ಪ್ರಾರ್ಥಿಸಿ, ಯಾವುದೇ ಅಪರಾಧಗಳಲ್ಲಿ ಭಾಗಿಯಾಗುವುದಿಲ್ಲವೆಂದು ಪಣ ತೊಡಬೇಕು ಎಂದರು.

ಯೋಗ ಗುರು ಎಸ್‌.ಎಚ್‌ ರೆಡ್ಡಿ ಮಾತನಾಡಿ, ಪ್ರತಿಯೊಬ್ಬರೂ ಮಾನಸಿಕವಾಗಿ ಸದೃಢರಾಗಬೇಕು, ಆರೋಗ್ಯಕರ ಸಮಾಜದ ನಿರ್ಮಾಣದ ಗುರಿಯೇ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಗುರಿಯಾಗಿದೆ. ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಮಾಡುತ್ತಾ ಮಾನಸಿಕ ಒತ್ತಡದಿಂದ ನಾವು ಹೊರಬರಬೇಕಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಕಾರಾಗೃಹದ ಅಧೀಕ್ಷಕ ಎಸ್‌.ಜಿ ರಾಠೊಡ್‌ ಮತ್ತು ಕಾರಾಗೃಹದ ಸಿಬ್ಬಂದಿ ಮತ್ತು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next