Advertisement

10ರಿಂದ ಯೋಗ, ಧ್ಯಾನ, ಪ್ರವಚನ ಕಾರ್ಯಕ್ರಮ

10:36 AM Jun 04, 2018 | |

ಬೀದರ: ಅಂತಾರಾಷ್ಟ್ರಿಯ ಯೋಗ ದಿನಾಚಾರಣೆ ಪ್ರಯುಕ್ತ ಜೂ. 10ರಿಂದ 21ರ ವರೆಗೆ ಯೋಗ, ಧ್ಯಾನ ಹಾಗೂ ಪ್ರವಚನ ಕಾರ್ಯಕ್ರಮ ಆಯೋಜನೆ ಹಿನ್ನೆಲೆಯಲ್ಲಿ ನಗರದ ಪ್ರಸಾದ ನಿಲಯದಲ್ಲಿ ಇತ್ತೀಚೆಗೆ ಪೂರ್ವಭಾವಿ ಸಭೆ ನಡೆಯಿತು.

Advertisement

ಭಾಲ್ಕಿ ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದೇವರು ಮಾತನಾಡಿ, ಸಮಾಜದ ಕಲುಷಿತ ವಾತಾವರಣದಲ್ಲಿ
ವ್ಯಕ್ತಿಗೆ ಶಾಂತಿ ದೊರಕಬೇಕಾದರೆ ಯೋಗ, ಧ್ಯಾನ ಹಾಗೂ ಆಧ್ಯಾತ್ಮಕ ಚಿಂತನೆ ಅವಶ್ಯ. ಈ ಪ್ರಯುಕ್ತ ನಗರದಲ್ಲಿ ಜೂ. 10ರಿಂದ 21ರ ವರೆಗೆ ಬೆಳಗ್ಗೆ 5:30ರಿಂದ 6:30ರ ವರೆಗೆ ಯೋಗ, ಧ್ಯಾನ ಕಾರ್ಯಕ್ರಮ, ಸಂಜೆ 7ರಿಂದ 8ರ ವರೆಗೆ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಜಯಪುರ ತೋಂಟದಾರ್ಯ ಮಠದ ಶ್ರೀ ನಿರಂಜನ ಸ್ವಾಮಿಗಳು ಪ್ರವಚನ ನಡೆಸಿಕೊಡುವರು ಎಂದು ತಿಳಿಸಿದರು.

ಶ್ರೀ ಗುರುಬಸವ ಪಟ್ಟದೇವರು ಪ್ರಾಸ್ತಾವಿಕ ಮಾತನಾಡಿ, ಯೋಗ ಮತ್ತು ಆಧ್ಯಾತ್ಮಿಕತೆಯಿಂದ ಮಾನವನ
ಸರ್ವಾಂಗೀಣ ವಿಕಾಸ ಸಾಧ್ಯವಿದೆ. ಭಾರತ ದೇಶದ ಪರಂಪರೆ ಸಂಸ್ಕೃತಿಯು ಯೋಗ ಮತ್ತು ಅಧ್ಯಾತ್ಮಿಕತೆ ನೆಲೆಗಟ್ಟಿನ ಮೇಲೆ ನಿಂತಿದೆ. ಪತಂಜಲಿ ಯೋಗ ಗುರು ಬಾಬಾ ರಾಮದೇವ ಅವರು ಇಡೀ ವಿಶ್ವವೇ ಯೋಗಮಯವಾಗಬೇಕು ಎಂಬ ಆಶಯ ಹೊಂದಿದ್ದಾರೆ ಎಂದರು.

ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ| ಎಸ್‌.ಬಿ. ಬಿರಾದರ, ಭಾರತೀಯ ಬಸವ ಬಳಗದ ಅಧ್ಯಕ್ಷ ಬಾಬುವಾಲಿ, ಮಲ್ಲಿಕಾರ್ಜುನ ಹುಡಗೆ, ಮಹಾಲಿಂಗಪ್ಪಾ ಬೆಲ್ದಾಳೆ, ಶ್ರೀಕಾಂತ ಬಿರಾದರ, ಸಂಗ್ರಾಮಪ್ಪ ಬಿರಾದರ, ಯೋಘೆಂದ್ರ ಯದ್ಲಾಫೂರೆ, ಬಸಔರಾಜ, ಡಾ. ವೈಜನಾಥ ಬಿರಾದರ, ಕಾಮಶೆಟ್ಟಿ ಚಿಕ್ಕಬಸೆ, ವಿಶ್ವನಾಥ ಬಿರಾದರ, ಅಶೋಕ ಮಾನಕರೆ ದಂಪತಿ, ನೀಲಕಂಠ ಬಿರಾದರ ಮುಂತಾದವರು ಪಾಲ್ಗೊಂಡಿದ್ದರು. ಪ್ರೊ| ಉಮಾಕಾಂತ ಮೀಸೆ ನಿರೂಪಿಸಿದರು. ಶ್ರೀಕಾಂತ ಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next