Advertisement

ಶಿಕ್ಷಣದಲ್ಲಿ ಯೋಗದ ಪಾತ್ರ

01:40 PM Jun 07, 2020 | sudhir |

ಯೋಗ ಮೂಲತಃ ಅತ್ಯಂತ ಪ್ರಾಚೀನ ಕಲೆ ಇದು ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಆದೂದರಿಂದ ಯೋಗವನ್ನು ದೇಹ, ಮನಸ್ಸು ಮತ್ತು ಆತ್ಮವನ್ನು ಪುನರ್ ಯೌವ್ವನಗೊಳಿಸುವ ಸಾಮರಸ್ಯ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಇದು ಮಾನವ ದೇಹದ ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ನಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಕೆಲವು ಪ್ರಮುಖ ತತ್ವಗಳ ಆಧಾರದ ಮೇಲೆ ಅಭ್ಯಾಸ ಮಾಡಲಾಗುತ್ತದೆ.

Advertisement

– ಮನಸ್ಸು ಮತ್ತು ದೇಹವನ್ನು ನಿಯಂತ್ರಿಸಲು ಇದು ಒಂದು ರೀತಿಯ ತಂತ್ರವಾಗಿದೆ.

– ನಮ್ಮಲ್ಲಿನ‌ ಗುರಿಯನ್ನು ಸಾಧಿಸಲು ಇದು ಶಿಸ್ತುಬದ್ಧ ಮತ್ತು ಸುಸಂಘಟಿತ ವಿಧಾನವಾಗಿದೆ.

– ಯೋಗ ಜೀವನದ ತಾತ್ವಿಕ ಭಾಗವನ್ನು ಪ್ರತಿಬಿಂಬಿಸುತ್ತದೆ.

– ಜತೆಗೆ ಇದು ನಿರ್ದಿಷ್ಟ ತಂತ್ರಗಳ ಕೆಲವು ಸಾಂಪ್ರದಾಯಿಕ ವಿಶೇಚತೆಗಳನ್ನು ಸಂಕೇತಿಸುತ್ತದೆ.

Advertisement

ಶಿಕ್ಷಣವನ್ನು ಪರಿಗಣಿಸಿದಾಗ ಯೋಗವು ಅದರ ವಿವಿಧ ಪ್ರಮುಖ ಪರಿಣಾಮಗಳನ್ನು ಬೀರುತ್ತದೆ, ಆ ಕಾರಣಕ್ಕಾಗಿ ವಿವಿಧ ಶಾಲೆಗಳು ಯೋಗವನ್ನು ಅಭ್ಯಾಸ ಮಾಡಲಾರಂಭಿಸಿವೆ. ಮಕ್ಕಳು ಎದುರಿಸುತ್ತಿರುವ ಕೆಲವೊಂದು ತೊಂದರೆಗಳು, ಘರ್ಷಣೆಗಳು, ಗೊಂದಲ, ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವು ಮಕ್ಕಳ ಮನೋವಿಜ್ಞಾನದ ಬೆಳವಣಿಗೆಗೆ ಕಾರಣವಾಗುತ್ತದೆ ಆದೂದರಿಂದ ಶಾಲೆಗಳಲ್ಲಿ ಪಠ್ಯಕ್ರಮಗಳ ಜತೆಗೆ ಯೋಗ ಕಲಿಕೆಯನ್ನು ಆರಂಭಿಸಲಾಗಿದೆ.

ಯೋಗ ಕಲಿಕೆಯಿಂದ ಮಕ್ಕಳಲ್ಲಿ ವೈಚಾರಿಕತೆ, ಭಾವನಾತ್ಮಕ ರಚನೆ ಮತ್ತು ಸೃಜನ ಶೀಲತೆಯನ್ನು ಗಮನಿಸಬಹುದಾಗಿದೆ.

ಆಧ್ಯಾತ್ಮಿಕ ಅಂಶಕ್ಕೆ ಅನುಗುಣವಾಗಿ ಶಿಕ್ಷಣದಲ್ಲಿ ಯೋಗದ ಪಾತ್ರವು ವಿದ್ಯಾರ್ಥಿಗಳಿಗೆ ದಿನನಿತ್ಯದ ಜೀವನದಲ್ಲಿ ತಮ್ಮ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.ಆದೂದರಿಂದ ಶಿಕ್ಷಣದ ಸಮಯದಲ್ಲಿ ಮಕ್ಕಳ ಮೇಲೆ

ಸಕಾರಾತ್ಮಕ ಪರಿಣಾಮ ಬೀರಲು ಸಹಾಯ ಮಾಡುವ ಯೋಗದ ವಿಶಿಷ್ಟ ಲಕ್ಷಣಗಳೆಂದೆರೆ:
– ಇದು ಮಕ್ಕಳಲ್ಲಿ ಆತ್ಮಸಾಕ್ಷಾತ್ಕಾರ ಅಥವಾ ಸ್ವಯಂ ಅರಿವನ್ನು ಹೆಚ್ಚಿಸುತ್ತದೆ.
– ದೈಹಿಕ , ಮಾನಸಿಕ ಮತ್ತು ಆಧ್ಯಾತ್ಮಿಕ ಗುಣಲಕ್ಷಣಗಳು ತೆರೆದುಕೊಳ್ಳಲು ಸಹಾಯ ಮಾಡುತ್ತದೆ.ಮತ್ತು ಪರಿಸರ ಜಾಗೃತಿಯನ್ನು ಮೂಡಿಸುತ್ತದೆ.
– ಹಾಗೆಯೇ ಇದು ಮನಸ್ಸಿನ ಅತಿತೇಂದ್ರಿಯ ಸ್ಥಿತಿಯ ಅನ್ವೇಷಣೆಗೆ ಮಕ್ಕಳಿಗೆ ಸಹಾಯ ಮಾಡುತ್ತದೆ.
– ಇದು ವಿದ್ಯಾರ್ಥಿಗಳಲ್ಲಿ ಅನನ್ಯತೆಯನ್ನು ಮತ್ತು ಇಚ್ಛಾಶಕ್ತಿಯನ್ನು ಉತ್ತೇಜಿಸುತ್ತದೆ.
– ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರಜ್ಞೆಯನ್ನು ಬಿಚ್ಚಿಡಲು ಸಹಾಯ ಮಾಡುತ್ತದೆ.
– ದಿನನಿತ್ಯ ಯೋಗ ಅಭ್ಯಾಸವು ಒತ್ತಡ ಕಾಯಿಲೆಗಳನ್ನು ನಿರ್ವಹಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next