Advertisement

ಯೋಗವೇ ನನ್ನ ಯಶಸ್ಸಿಗೆ ಕಾರಣ: ಪ್ರಧಾನಿ ಮೋದಿ

11:32 AM Jul 29, 2017 | |

ನವದೆಹಲಿ: ವಿಶ್ವಕಪ್‌ ಏಕದಿನ ಕ್ರಿಕೆಟ್‌ನಲ್ಲಿ ರನ್ನರ್‌ಅಪ್‌ ಆಗಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರ ಎದುರು ಪ್ರಧಾನಿ ನರೇಂದ್ರ ಮೋದಿ ತಮ್ಮ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ್ದಾರೆ. ಗುರುವಾರ ಮಹಿಳಾ ತಂಡ ಮೋದಿಯನ್ನು ಭೇಟಿ ಮಾಡಿದ ವೇಳೆ ಆಪ್ತ ಮಾತುಕತೆ ನಡೆಯಿತು. ಆಗ ತಮ್ಮ ಜೀವನದಲ್ಲಿ ಯೋಗದ ಪಾತ್ರವನ್ನು ಬಹಿರಂಗಪಡಿಸಿದ್ದಾರೆ.

Advertisement

ಯೋಗದಿಂದ ಮನಸ್ಸು, ಶರೀರ, ಕ್ರಿಯೆಯಲ್ಲಿ ಸಂತುಲನ ಸಾಧಿಸಬಹುದು. ನಿರ್ಮೋಹಿಗಳಾಗಿರಬಹುದು. ಇದರಿಂದ ಒತ್ತಡ ನಿವಾರಣೆ ಸಾಧ್ಯ ಎಂದು ಮೋದಿ ಹೇಳಿದ್ದಾರೆ. ಸೋಲಿನಿಂದ ನೊಂದಿರುವ ಮಹಿಳೆ ಆಟಗಾರ್ತಿಯರಿಗೆ ಸಾಂತ್ವನದ ಮಾತುಗಳನ್ನಾಡಿದ್ದಾರೆ. ನಿಮ್ಮ ಸೋಲನ್ನು ಇಡೀ ಭಾರತ ತನ್ನದೆಂದು ಭಾವಿಸಿದೆ. ಆದ್ದರಿಂದ ಇದು ಸೋಲಲ್ಲ ನಿಮ್ಮ ದಿಗ್ವಿಜಯ ಎಂದು ಹುರಿದುಂಬಿಸಿದ್ದಾರೆ.

ಭಾರತ ತಂಡ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾಗ ಪ್ರಧಾನಿ ಮೋದಿ ಖಾಸಗಿಯಾಗಿ ಪ್ರತಿ ಆಟಗಾರ್ತಿಯರಿಗೂ ಶುಭ ಹಾರೈಸಿದ್ದರು. ಮಹಿಳಾ ತಂಡದ ಯಶಸ್ಸನ್ನು ಸಂಭ್ರಮಿಸಿದ ಭಾರತ ಮೊದಲ ಪ್ರಧಾನಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. 

ಪ್ರಾಯೋಜಕರ ನಿರೀಕ್ಷೆಯಲ್ಲಿ ಮಹಿಳಾ ಕ್ರಿಕೆಟಿಗರು
ನವದೆಹಲಿ: ಇಂಗ್ಲೆಂಡ್‌ನ‌ಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ತಂಡ ರನ್ನರ್‌ ಅಪ್‌ ಸ್ಥಾನ ಪಡೆಯುವ ಮೂಲಕ ರಾತ್ರಿ ಬೆಳಗಾಗುವುದರೊಳಗಾಗಿ ಜನಪ್ರಿಯವಾಗಿದೆ. ಆರ್ಥಿಕ ಸಮಸ್ಯೆಯಲ್ಲಿದ್ದ ಆಟಗಾರ್ತಿಯರು ಈಗ ಪ್ರಾಯೋಜಕರ ನಿರೀಕ್ಷೆಯಲ್ಲಿದ್ದಾರೆ.
ವಿಶ್ವಕಪ್‌ ತಂಡದಲ್ಲಿದ್ದ 10 ಆಟಗಾರ್ತಿಯರು ಮಾತ್ರ ರೈಲ್ವೇಸ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಉಳಿದವರಿಗೆ ಉದ್ಯೋಗದ ಭದ್ರತೆ ಇಲ್ಲ. ಇವರಿಗೆ ಪ್ರಾಯೋಜಕರು ಇರಲಿಲ್ಲ. ಆದರೆ ಬಿಸಿಸಿಐನ ವೇತನ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದರಿಂದ ಸ್ವಲ್ಪ ಮಟ್ಟಿಗೆ ಅನುಕೂಲವಿತ್ತು. ಇದೀಗ
ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತೀಯರ ಹೃದಯ ಗೆದ್ದಿರುವ ಹಿನ್ನೆಲೆಯಲ್ಲಿ ಕಂಪನಿಗಳ ಪ್ರಯೋಜಕರ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ವಿವಿಧ ಆಟಗಾರ್ತಿಯರಿಗೆ ಕೆಲವು ಖಾಸಗಿ ಕಂಪನಿಗಳು ಪ್ರಾಯೋಜಕತ್ವ ನೀಡಲು ಮುಂದೆ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next