Advertisement
ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಯೋಗ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ದೇಶದ ನಾಗರಿಕರಲ್ಲಿ ಸಹೋದರತ್ವ ಮೂಡಿಸಿ ಸಹಬಾಳ್ವೆಯಿಂದ ಒಂದಾಗಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.
Related Articles
Advertisement
ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕನಾಯ್ಕ ಮಾತನಾಡಿ, ಯೋಗದಿಂದ ಮಾನವ ಸಹಜವಾದ ಸ್ನೇಹ, ಪ್ರೀತಿ, ಶಾಂತಿ, ನಿಸ್ವಾರ್ಥ ಸೇವಾ ಮನೋಭಾವ, ವಿಶ್ವಬ್ರಾತೃತ್ವದ ಶ್ರೇಷ್ಠಭಾವನೆ ಬೆಳೆದು ಬರುತ್ತದೆ. ಸುಖ-ಶಾಂತಿ-ಸಮೃದ್ಧಿ ಹಾಗೂ ಆರೋಗ್ಯವಂತ ವ್ಯಕ್ತಿ, ಸಮಾಜ ಮತ್ತು ವಿಶ್ವದ ನಿರ್ಮಾಣಕ್ಕೆ ಯೋಗಶಕ್ತಿ ಭದ್ರಬುನಾದಿಯಾಗಲಿದೆ.
ದೇಹದ ಆಂತರಿಕ ಭಾಗಗಳನ್ನು ಯೋಗದಿಂದ ನಿಯಂತ್ರಿಸಬಹುದಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುನ್ನ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಂತರ ಸಾರ್ವಜನಿಕರಲ್ಲಿ ಯೋಗದ ಅರಿವು ಮೂಡಿಸಲು ಜಾಥಾ ಏರ್ಪಡಿಸಲಾಗಿತ್ತು.
ಜಾಥಾದಲ್ಲಿ ಆಯುರ್ವೇದ ವೈದ್ಯರು, ಸಿಬ್ಬಂದಿಗಳು, ವಿವಿಧ ಆಯುರ್ವೇದ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು,ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ಯೋಗ ಸಂಘ-ಸಂಸ್ಥೆಗಳ ಯೋಗಪಟುಗಳು
ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಜಿಪಂ ಉಪ ಕಾರ್ಯದರ್ಶಿ ಎ.ಎಸ್. ಮಣಿ, ಡಾ| ರಂಗಸ್ವಾಮಿ, ಉದ್ಯಮಿ ಡಿ.ಎಸ್. ಅರುಣ್, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಆಯುಷ್ ಅಧಿಕಾರಿ ಡಾ| ಹರ್ಷಪುತ್ರಾಯ ಇದ್ದರು.