Advertisement
‘ನಗರ ಪ್ರದೇಶಗಳಿಂದ ಯೋಗವನ್ನು ಗ್ರಾಮ, ಬುಡಕಟ್ಟು ಪ್ರದೇಶದವರೆಗಿನ ಜನರಿಗೆ ತಲುಪಿಸಬೇಕಾಗಿದೆ. ಯೋಗ ಎಲ್ಲ ಜಾತಿ, ಧರ್ಮ, ಲಿಂಗ, ಪ್ರಾದೇಶಿಕತೆಯನ್ನು ಮೀರಿದ್ದು. ಹಲವು ಶತಮಾನಗಳಿಂದ ಯೋಗ ಇದೆ. ಆರೋಗ್ಯಯುತ ದೇಹ, ಸ್ಥಿರವಾದ ಮನಸ್ಸು, ಏಕತೆಯ ಪ್ರತೀಕಕ್ಕೆ ಯೋಗದ ಕೊಡುಗೆ ಮಹತ್ವದ್ದಾಗಿದೆ. ಜ್ಞಾನ, ಕರ್ಮ ಮತ್ತು ಭಕ್ತಿಗೆ ಅದರ ಕೊಡುಗೆಯೂ ಮಹತ್ವದ್ದು. ಹೀಗಾಗಿ ಅದು ಜೀವನದ ಅವಿಭಾಜ್ಯ ಅಂಗವಾಗಬೇಕು’ ಎಂದು ಮೋದಿ ಹೇಳಿದ್ದಾರೆ.
Related Articles
•ಚೀನದ ಖ್ಯಾತ ಶಾವೋಲಿನ್ ದೇಗುಲದಿಂದ ಹಿಡಿದು ಬ್ರಿಟನ್‌ನ ಸೈಂಟ್. ಪೌಲ್ಸ್ ಕ್ಯಾಥಡ್ರಲ್ವರೆಗೆ ವಿಶ್ವದ ಮೂಲೆ ಮೂಲೆಗಳಲ್ಲೂ ನಡೆಯಿತು ಯೋಗ ಸಂಭ್ರಮ.
Advertisement
•ಇಂಡೋ-ಚೀನ ಗಡಿಯಲ್ಲಿ ಇದೇ ಮೊದಲ ಬಾರಿಗೆ ಚೀನ ಸೇನೆಯ ಯೋಧರು ಹಾಗೂ ಭಾರತೀಯ ಯೋಧರಿಂದ ಜಂಟಿ ಯೋಗಾಭ್ಯಾಸ.
•ಪೋರ್ಟ್‌ಬ್ಲೇರ್‌ನಲ್ಲಿ ಅಧ್ಯಾತ್ಮ ಗುರು ಸದ್ಗುರು ನೇತೃತ್ವದಲ್ಲಿ ಅಂಡಮಾನ್-ನಿಕೋಬಾರ್ ಕಮಾಂಡ್‌ನ 500 ಸಿಬಂದಿ ಹಾಗೂ ಕುಟುಂಬ ಸದಸ್ಯರಿಂದ ಯೋಗ.
•ಜನರಲ್ಲಿ ಯೋಗವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಯೋಗ ಮಂಡಳಿ ಸ್ಥಾಪನೆ: ಗುಜರಾತ್ ಸರಕಾರ ಘೋಷಣೆ.
•ಕೇರಳದಲ್ಲಿ ಯೋಗ ದಿನಕ್ಕೆ ಸಿಎಂ ಪಿಣರಾಯಿ ಚಾಲನೆ. ಯೋಗವು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದ ಪಿಣರಾಯಿ.
•ಯೋಗವು ಪ್ರಧಾನಿ ಮೋದಿ ಅವರ ಕಾರ್ಯಕ್ರಮವಲ್ಲ. ನಿಮ್ಮ ನಿಮ್ಮ ಆರೋಗ್ಯಕ್ಕಾಗಿ ಯೋಗ ಮಾಡಿ. ಶಾಲಾ ಪಠ್ಯಕ್ರಮಗಳಲ್ಲೂ ಯೋಗವನ್ನು ಸೇರಿಸಿ ಎಂದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.
•ಸಂಸತ್‌ನಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ನೇತೃತ್ವದಲ್ಲಿ ಯೋಗ ದಿನ ಆಚರಣೆ. 400ಕ್ಕೂ ಹೆಚ್ಚು ಮಂದಿ ಭಾಗಿ.
•ದಿಲ್ಲಿಯ ಯೋಗ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಭಾಗಿ, ರಾಷ್ಟ್ರಪತಿ ಭವನದ ಹಾಲ್ನಲ್ಲಿ ರಾಷ್ಟ್ರಪತಿ ಕೋವಿಂದ್ ಯೋಗ.
•ಹರ್ಯಾಣದ ರೋಹrಕ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಯೋಗಾಭ್ಯಾಸ. ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದೇ ಪ್ರಧಾನಿ ಮೋದಿ ಎಂದು ಶ್ಲಾಘನೆ.
•ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಭಾಂಗಣದಲ್ಲೂ ನಡೆಯಿತು ಯೋಗಾಸನ.
ಶಾಲೆಯಲ್ಲಿ ಮಕ್ಕಳಿರುವಂತೆಯೇ, ಸಂಸತ್‌ನಲ್ಲಿ ಕೆಲವು ‘ಮಕ್ಕಳು’ (ರಾಹುಲ್) ಇದ್ದಾರೆ. ಮಕ್ಕಳಂತೆ ವರ್ತಿಸುವ ಇಂಥವರಿಗೆ ಯೋಗದಿಂದ ಸಾಕಷ್ಟು ಪ್ರಯೋಜನವಾಗಲಿದೆ.ರಾಮ್‌ಮಾಧವ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಸಶಸ್ತ್ರ ಪೊಲೀಸ್ ಪಡೆಗಳಿಂದ ವಿಶಿಷ್ಟ ‘ಡೋಗಾ’, ‘ಹೋಗಾ’!
ಇಡೀ ಜಗತ್ತೇ ಶುಕ್ರವಾರ ‘ಯೋಗ’ದಲ್ಲಿ ತಲ್ಲೀನವಾಗಿದ್ದರೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸುಮಾರು 5 ಲಕ್ಷ ಸಿಬಂದಿ ಮಾತ್ರ ‘ಡೋಗಾ’ ಹಾಗೂ ‘ಹೋಗಾ’ದಲ್ಲಿ ನಿರತರಾಗಿದ್ದರು. ಇದೇನಿದು ಎಂದು ಯೋಚಿಸುತ್ತಿದ್ದೀರಾ?
ಇಡೀ ಜಗತ್ತೇ ಶುಕ್ರವಾರ ‘ಯೋಗ’ದಲ್ಲಿ ತಲ್ಲೀನವಾಗಿದ್ದರೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸುಮಾರು 5 ಲಕ್ಷ ಸಿಬಂದಿ ಮಾತ್ರ ‘ಡೋಗಾ’ ಹಾಗೂ ‘ಹೋಗಾ’ದಲ್ಲಿ ನಿರತರಾಗಿದ್ದರು. ಇದೇನಿದು ಎಂದು ಯೋಚಿಸುತ್ತಿದ್ದೀರಾ?
ಇದು ವಿಶಿಷ್ಟ ರೀತಿಯ ಯೋಗ! ಅರುಣಾಚಲ ಪ್ರದೇಶದ ಗಡಿಯಲ್ಲಿನ ಲೋಹಿತ್‌ಪುರದಲ್ಲಿರುವ ಐಟಿಬಿಪಿ ಘಟಕವು, ತಮ್ಮ ಶ್ವಾನಗಳ ಜೊತೆಗೆ ಯೋಗ ಮಾಡಿದ್ದು, ಅದನ್ನು ‘ಡೋಗಾ'(ಡಾಗ್ ಯೋಗ) ಎಂದು ಕರೆದಿದೆ. ಇನ್ನು ತಮ್ಮ ಕುದುರೆಗಳ ಮೇಲೆ ನಡೆಸಿದ ಯೋಗಾಸನವನ್ನು ‘ಹೋಗಾ'(ಹಾರ್ಸ್ ಯೋಗ) ಎಂದು ಬಣ್ಣಿಸಿದೆ.
ಒಟ್ಟಿನಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಿಂದ ಹಿಡಿದು ಪಾಕ್ ಹಾಗೂ ಚೀನದೊಂದಿಗಿನ ಗಡಿ ಭಾಗದಂಥ ಪ್ರದೇಶಗಳವರೆಗೆ ಕೇಂದ್ರ ಸಶಸ್ತ್ರ ಪಡೆಯ ಯೋಧರು ಯೋಗ ಮಾಡಿದರು. ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್, ಐಟಿಬಿಪಿ, ಎಸ್‌ಎಸ್‌ಬಿ, ಎನ್‌ಎಸ್‌ಜಿ ಹಾಗೂ ಎನ್‌ಡಿಆರ್‌ಎಫ್ನ ಸಿಬಂದಿ ತಾವು ನಿಯೋಜನೆಯಾಗಿರುವ ಸ್ಥಳಗಳಲ್ಲೇ ‘ಯೋಗ ದಿನ’ವನ್ನು ಆಚರಿಸಿದರು.