Advertisement

ಯೋಗ ಶಿಕ್ಷಣ ಬದುಕಿಗೊಂದು ದಾರಿ

09:44 AM Mar 19, 2020 | mahesh |

ಯೋಗ ಕೇವಲ ಆಚರಣೆಯಲ್ಲ. ಅದು ಬದುಕನ್ನು ಕಟ್ಟಿಕೊಡುವ ಕ್ಷೇತ್ರವೂ ಹೌದು. ಯೋಗ ಶಿಕ್ಷಣವು ಇಂದು ವೃತ್ತಿಶಿಕ್ಷಣಗಳ ಸಾಲಿನೊಂದಿಗೆ ಗುರುತಿಸಿಕೊಂಡಿದೆ.

Advertisement

ಯೋಗದ ಕುರಿತು ದೇಶ-ವಿದೇಶಗಳಲ್ಲಿ ಭರವಸೆ-ವಿಶ್ವಾಸಗಳು ಹೆಚ್ಚಾಗಿವೆ. ಈ ಕಾರಣಕ್ಕೆ ಯೋಗದ ಕಲಿಕೆಯೂ ಮೌಲ್ಯವನ್ನು ಸಂಪಾದಿ ಸಿಕೊಳ್ಳುತ್ತಿವೆ. ಸರ್ಟಿಫಿಕೇಟ್‌ ಕೋರ್ಸ್‌ಗಳಿಂದ ಹಿಡಿದು ಪಿಎಚ್‌.ಡಿ. ವರೆಗೂ ಯೋಗವನ್ನು ಹೇಳಿಕೊಡುವ ಕಾಲೇಜುಗಳಿವೆ. ಯೋಗದಲ್ಲಿ ಕೋರ್ಸ್‌ ಮಾಡಿರುವವರಿಗೆ ಬೇಡಿಕೆಯೂ ಇದೆ.

ಖನ್ನತೆ, ಏರುಪೇರಿನ ರಕ್ತದೊತ್ತಡ, ಬೆನ್ನು ನೋವು, ಏಕಾಗ್ರತೆಯ ಕೊರತೆ, ತೂಕ ಹೆಚ್ಚಳ, ಸಕ್ಕರೆ ಕಾಯಿಲೆ, ಥೈರಾಯ್ಡ, ಪಿಸಿಓಡಿ, ಮಂಡಿ ನೋವು, ನಿದ್ರಾಹೀನತೆಗಳಿಂದ ನಲುಗಿ ಹೋಗುತ್ತಿರುವವರಿಗೆ ಯೋಗ ಸಂಜೀವಿನಿಯಾಗಿದೆ. ರಾಜಯೋಗ, ಭಕ್ತಿ ಯೋಗ, ಕರ್ಮಯೋಗ, ಜ್ಞಾನ ಯೋಗಗಳ ಜತೆ ಇಂದಿನ ಕಾಲದ ಮುಖ ಯೋಗ, ನಗೆ ಯೋಗ, ಮ್ಯೂಸಿಕ್‌ ಯೋಗ, ನೃತ್ಯ ಯೋಗ, ಪರ್ವ ಯೋಗಗಳೂ ಸೇರಿಕೊಂಡು ಯೋಗ ಎಂಬ ಕಾನ್ಸೆಫ್ಟ್ ಗೆ ಬೇಡಿಕೆ ಹೆಚ್ಚಾಗಿವೆ.

ಯೋಗದ ಮಹತ್ವವನ್ನರಿತ ಅನೇಕ ಶಿಕ್ಷಣ ಸಂಸ್ಥೆಗಳು ತಮ್ಮ ಕಾಲೇಜುಗಳಲ್ಲಿ ಸರಕಾರಗಳಿಂದ ಅಂಗೀಕೃತವಾದ ಯೋಗದ ಹಲವು ಹಂತ-ಬಗೆಯ ಕೋರ್ಸ್‌ಳನ್ನೂ ಪ್ರಾರಂಭಿಸಿವೆ.

ಉದ್ಯೋಗಗಳೂ ಇವೆ
ಯೋಗ ತರಬೇತುದಾರ, ಯೋಗ ಶಿಕ್ಷಕರಾಗಿ ಹೋಗಬಹುದು. ಪ್ರಸ್ತುತ ಯೋಗ ಥೆರಪಿಸ್ಟ್‌ , ಯೋಗ ಆ್ಯಂಡ್‌ ನ್ಯಾಚುರೋಪತಿ ರಿಸರ್ಚ್‌ ಆಫೀಸರ್‌, ಯೋಗ ಏರೊಬಿಕ್‌ ಇನ್‌ಸ್ಪೆಕ್ಟರ್‌, ಪರ್ಸನಲ್‌ ಯೋಗ ಟ್ರೆನರ್‌ ಅಂತೆಲ್ಲ ಶುರುವಾಗಿದೆ. ಬಹುತೇಕ ಖಾಸಗಿ – ಸರಕಾರಿ ಶಾಲೆಗಳು, ಜಿಮ್‌ಗಳು, ಚಿಕಿತ್ಸಾ ಕೇಂದ್ರಗಳು, ಆಸ್ಪತ್ರೆಗಳಿಗೆ ಯೋಗ ಪದವೀಧರರು ಬೇಕಾಗಿ¨ªಾರೆ. ರೆಸಾರ್ಟ್‌ಗಳು, ಹೌಸಿಂಗ್‌ ಸೊಸೈಟಿಗಳು, ಸರಕಾರಿ ಸ್ವಾಮ್ಯದ ಕ್ರೀಡಾ ಶಾಖೆಗಳು, ಕ್ರೀಡಾ ತರಬೇತಿ ಸಂಸ್ಥೆಗಳು, ಐಟಿ ಕಂಪೆನಿಗಳು, ಆರ್ಮಿ ಪಬ್ಲಿಕ್‌ ಸ್ಕೂಲ್‌ಗ‌ಳಿಗೂ ಇವರ ಅವಶ್ಯಕತೆ ಇದೆ.

Advertisement

ಸರಕಾರದ ಸಹಾಯ
ಕೇಂದ್ರ ಸರಕಾರ ಸ್ಥಾಪಿಸಿರುವ “ಕ್ವಾಲಿಟಿ ಕೌನ್ಸಿಲ್‌ ಆಫ್ ಇಂಡಿಯಾ’ – ಸಂಸ್ಥೆಯು ಯೋಗ ತರಬೇತುದಾರರಿಗೆ ನಾಲ್ಕು ಹಂತದ ಶ್ರೇಣಿಗಳಾದ ತರಬೇತುದಾರ, ಶಿಕ್ಷಕ, ಗುರು ಹಾಗೂ ಆಚಾರ್ಯ ಎಂಬ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಇವರು ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತದ ವಿದೇಶಾಂಗ ಇಲಾಖೆಯ ದೂತಾವಾಸದಲ್ಲಿ ಕೆಲಸ ನಿರ್ವಹಿಸಲು ಅರ್ಹರಾಗಿರುತ್ತಾರೆ.

ಪದವಿ ಕೋರ್ಸ್‌ಗಳು
ಬ್ಯಾಚುಲರ್‌ ಆಫ್ ಆರ್ಟ್ಸ್ ಇನ್‌ ಯೋಗ
ಆ್ಯಂಡ್‌ ನ್ಯಾಚುರೋಪತಿ, ಬ್ಯಾಚುಲರ್‌ ಆಫ್ ಆರ್ಟ್ಸ್
ಇನ್‌ ಯೋಗ ಶಾಸ್ತ್ರ , ಬಿ.ಎಸ್ಸಿ ಒಂದರಲ್ಲೇ, ಬಿ.ಎಸ್ಸಿ ಇನ್‌ ಯೋಗ ಆ್ಯಂಡ್‌ ಎಜುಕೇಶನ್‌, ಯೋಗ ಆ್ಯಂಡ್‌ ಮ್ಯಾನೇಜ್ಮೆಂಟ್‌, ಯೋಗ ಆ್ಯಂಡ್‌ ಕಾನ್ಶಿಯಸ್‌ನೆಸ್‌ ಅಂತ ಮೂರು ವಿಧದ ಅಧ್ಯಯನಗಳಿವೆ.

ಸ್ನಾತಕೋತ್ತರ
ಎಂ.ಎಸ್ಸಿ ಇನ್‌ ಯೋಗ ಆ್ಯಂಡ್‌ ಹೆಲ್ತ್‌
ಎಂ.ಎಸ್ಸಿ ಇನ್‌ ಯೋಗ ಆ್ಯಂಡ್‌ ನ್ಯಾಚುರೋಪತಿ,
ಎಂ.ಎಸ್ಸಿ. ಇನ್‌ ಯೋಗಿಕ್‌ ಸೈನ್ಸ್‌ ಆ್ಯಂಡ್‌ ಹೋಲಿಸ್ಟಿಕ್‌ ಹೆಲ್ತ್‌, ಎಂ.ಎಸ್ಸಿ ಇನ್‌ ಯೋಗ ಆ್ಯಂಡ್‌ ಮ್ಯಾನೇಜ್ಮೆಂಟ್‌ ಎಂ.ಎಸ್ಸಿ ಇನ್‌ ಯೋಗ ಆ್ಯಂಡ್‌ ಜರ್ನಲಿಸಂ, ಎಂ.ಎಸ್ಸಿ ಇನ್‌ ಯೋಗ ಆ್ಯಂಡ್‌ ಕೌನ್ಸೆಲಿಂಗ್‌ ಸರ್ಟಿಫಿಕೇಟ್‌ ಕೋರ್ಸ್‌ಗಳಿವೆ.

ಕೋರ್ಸ್‌ ಎಲ್ಲೆಲ್ಲಿ ಲಭ್ಯ?
ಬೆಳಗಾವಿಯ ಕೆಎಲ್ಇ ಕಾಲೇಜ್‌ ಆಫ್ ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸ್‌, ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ಮಹಿಳಾ ವಿಶ್ವ ವಿದ್ಯಾಲಯ, ಮೈಸೂರಿನ ಸಂಮ್ಯಕ್‌, ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಮೂಡಬಿದಿರೆಯ ಆಳ್ವಾಸ್‌ ಕಾಲೇಜ್‌ ಆಫ್ ನ್ಯಾಚುರೋಪತಿ ಆ್ಯಂಡ್‌ ಯೋಗ, ಉಜಿರೆಯ ಎಸ್‌ಡಿಎಂ ಕಾಲೇಜ್‌ ಆಫ್ ನ್ಯಾಚುರೋಪತಿ ಆ್ಯಂಡ್‌ ಯೋಗಿಕ್‌ ಸೈನ್ಸ್‌, ಪುಣೆಯ ಕೈವಲ್ಯಧಾಮ, ಹೆಬಾrಳದ ವಿವೇಕಾನಂದ ಸ್ಕೂಲ್‌ ಆಫ್ ಯೋಗ, ದಿಲ್ಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಯೋಗ, ಮುಂಬಯಿಯ ಸಾಂತಾಕ್ರೂಜ್‌ ಬಳಿಯ ಯೋಗ ಇನ್‌ಸ್ಟಿಟ್ಯೂಟ್‌, ಹರಿ ದ್ವಾರದ ದೇವ ಸಂಸ್ಕೃತಿ ವಿಶ್ವವಿದ್ಯಾಲಯ, ಭುವನೇಶ್ವರದ ಇನ್‌ಸ್ಟಿಟ್ಯೂಟ್‌ ಆಫ್ ಯೋಗಿಕ್‌ ಸೈನ್ಸ್‌ ಆ್ಯಂಡ್‌ ರಿಸ ರ್ಚ್‌ ಮತ್ತು ಗುಜರಾತ್‌ಗಳಲ್ಲಿ ಯೋಗದ ಹಲವು ಕೋರ್ಸ್‌ಗಳಿವೆ.

ಯಾವ್ಯಾವ ಕೋರ್ಸ್‌ಗಳು ಲಭ್ಯ?
ಸರ್ಟಿಫಿಕೇಟ್‌ ಕೋರ್ಸ್‌ಗಳಿಂದ ಹಿಡಿದು ಪಿಎಚ್‌.ಡಿ.ವರೆಗೂ ಯೋಗವನ್ನು ಹೇಳಿಕೊಡಲಾಗುತ್ತಿದೆ. ಎಸೆಸ್ಸೆಲ್ಸಿ, ಪಿಯುಸಿ ಅನಂತರ – ಫೌಂಡೇಶನ್‌ ಕೋರ್ಸ್‌ ಇನ್‌ ಯೋಗ, ಪಿಜಿ ಡಿಪ್ಲೊಮಾ ಇನ್‌ ಯೋಗ ಆ್ಯಂಡ್‌ ಹೋಲಿಸ್ಟಿಕ್‌ ಹೆಲ್ತ್‌, ಪಿಜಿ ಡಿಪ್ಲೊಮಾ ಇನ್‌ ಯೋಗ ಥೆರಪಿ, ಪಿಜಿ ಡಿಪ್ಲೊಮಾ ಇನ್‌ ಯೋಗ ನ್ಯಾಚುರೋಪತಿ, ಯೋಗಿಕ್‌ ಸೈನ್ಸ್‌, ಯೋಗ ಆ್ಯಂಡ್‌ ಆಲ್ಟರ್‌ನೆಟ್‌ ಥೆರಪಿ ಇದೆ. ಇನ್ನು ಸರ್ಟಿಫಿಕೆಟ್‌ ಕೋರ್ಸುಗಳಲ್ಲಿ ಅಡ್ವಾನ್ಸ್‌ಡ್‌ ಕೋರ್ಸ್‌ ಇನ್‌ ಯೋಗ ಡಿಪ್ಲೊಮಾ ಕೋರ್ಸ್‌ ಇನ್‌ ಯೋಗ ಎಜುಕೇಶನ್‌, ಯೋಗ ಟೀಚರ್‌ ಟ್ರೈನಿಂಗ್‌, ಯೋಗ ಆ್ಯಂಡ್‌ ಹೆಲ್ತ್‌ ಎಜುಕೇಶನ್‌ಗಳಿವೆ.

  ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next