Advertisement

ಯೋಗದಿಂದ ಹೃದಯ ಸದೃಢ

01:06 AM Jun 22, 2019 | Lakshmi GovindaRaj |

ಬೆಂಗಳೂರು: ಯೋಗಾಭ್ಯಾಸದಿಂದ ದೈಹಿಕ ಸಾಮರ್ಥ್ಯ ಹೆಚ್ಚುವ ಜತೆಗೆ ಹೃದಯ ಸದೃಢವಾಗುತ್ತದೆ ಎಂದು ರಾಜ್ಯಪಾಲ ವಿ.ಆರ್‌.ವಾಲಾ ಅಭಿಪ್ರಾಯಪಟ್ಟರು.

Advertisement

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿರಂತರ ಯೋಗ ಮಾಡುವುದರಿಂದ ಶ್ವಾಸಕೋಶದಲ್ಲಿರುವ ಆಮ್ಲಜನಕ ಹೃದಯಕ್ಕೆ ತಲುಪಿ, ಆಮ್ಲಜನಕಯುಕ್ತ ರಕ್ತ ನಮ್ಮ ಶರೀರಕ್ಕೆ ಹರಿದು ಶರೀರದ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದರು.

ಕೇವಲ ಆಸನಗಳನ್ನು ಮಾಡುವುದರಿಂದ ಯೋಗ ಮಾಡಿದಂತಾಗುವುದಿಲ್ಲ. ಯೋಗದ ಪ್ರಮುಖ ಭಾಗಗಳಾದ ಸತ್ಯ, ಅಂಸ, ಅಸ್ತೇಯ, ಅಪರಿಗ್ರ ಹಾಗೂ ಬ್ರಹ್ಮಚರ್ಯಗಳನ್ನು ಪಾಲಿಸುವುದರಿಂದ ಯೋಗವನ್ನು ಪರಿಪೂರ್ಣವಾಗಿ ಮಾಡಿದಂತಾಗುತ್ತದೆ. ಪತಂಜಲಿ ಹೇಳಿದ ಯೋಗದ ಮಹತ್ವ ಇಂದು ವಿಶ್ವದಾದ್ಯಂತ ಪ್ರಚಲಿತವಾಗಿದೆ ಎಂದರು.

ಜೀವನದಲ್ಲಿ ಸದಾ ಸತ್ಯವನ್ನು ಪಾಲಿಸಬೇಕು. ಅಂಸೆಯನ್ನು ಅಳವಡಿಸಿಕೊಳ್ಳಬೇಕು, ಅಗತ್ಯವಿದ್ದಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ದಾನ ಮಾಡಬೇಕು. ಬೇರೆಯವರ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ಆಲೋಚನೆ ಮಾಡಬಾರದು. ಕಾಯಾ, ವಾಚಾ, ಮನಸಾ ಬ್ರಹ್ಮರ್ಚರ್ಯ ಪಾಲನೆ ಹಾಗೂ ಉತ್ತಮ ಆಲೋಚನೆ ಯೋಗದ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.

ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌, ಕುಲಸಚಿವ ಪ್ರೊ.ಬಿ.ಕೆ.ರವಿ, ಮೌಲ್ಯಮಾಪನ ಕುಲಸಚಿವ ಡಾ.ಸಿ.ಶಿವರಾಜ್‌, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಂಯೋಜಿತ ಕಾಲೇಜುಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಜನರು ಯೋಗಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next