Advertisement
ಈ ಸಮಸ್ಯೆಯ ಮೂಲ ಕಾರಣಬಾಹ್ಯ ಜಗತ್ತು ಒಡ್ಡುವ ಆಮಿಷಗಳು. ಇದರಿಂದ ಮನಸ್ಸು ಚಂಚಲಕ್ಕೆ ಒಳಗಾಗಿ ಏಕಾಗ್ರತೆಗೆ ಭಂಗ ಒದಗುತ್ತದೆ. ಅದರಿಂದ ಓದಿದ್ದಾಗಲೀ, ಅಭ್ಯಾಸ ಮಾಡಿದ್ದಾಗಲೀ ನೆನಪಿನಲ್ಲಿರದು. ಇದನ್ನೇ ಗಮನಿಸಿಯೇ ಕ್ರಮೇಣ ಸ್ಮರಣ ಶಕ್ತಿ ಕಡಿಮೆ ಎಂಬ ಅಭಿಪ್ರಾಯಕ್ಕೆ ಪೋಷಕರು ಬರುವುದು.
ನಮ್ಮ ದೇಹ ಸಾತ್ವಿಕ ಮತ್ತು ತಾಮಸಿಕ ಆಹಾರ ಪದ್ಧತಿಗೆ ಪೂರಕ. ಸೇàವಿಸಿದ ಆಹಾರದಂತೆ ಬುದ್ಧಿ ಮತ್ತು ವರ್ತನೆ ಎನ್ನುವುದು ಹಿರಿಯರ ಉಕ್ತಿ. ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ದೂರ ಮಾಡಿ ಸಾತ್ವಿಕ ಆಹಾರವನ್ನು ಸೇವಿಸುವುದರಿಂದ ಮನಸ್ಸೂ ಶಾಂತ, ಬದುಕಿಗೂ ನೆಮ್ಮದಿ. ಇದನ್ನೇ ಸಾತ್ವಿಕ ಜೀವನ ಎಂದು ಕರೆಯುವುದು. ಇದೇ ಹೆಚ್ಚು ಅನುಕೂಲಕರವಾದುದು. ಇದನ್ನೂ ಗಮನಿಸಿ
ಸಾಮಾನ್ಯ ಅಭಿಪ್ರಾಯವೆಂದರೆ, ಆಸನ, ಪ್ರಾಣಾಯಾಮ, ಧ್ಯಾನ- ಇವಿಷ್ಟೇ ಯೋಗ. ವಾಸ್ತವ ಹಾಗಲ್ಲ.ಯೋಗ ಜೀವನದಲ್ಲಿ ಅದಕ್ಕಿಂತ ಪ್ರಾಮುಖ್ಯವಾದ ಇನ್ನೆರಡು ಹೆಜ್ಜೆಗಳಿವೆ. ಅವೇ ಯಮ ಮತ್ತು ನಿಯಮ. ಏನು ಮಾಡಬೇಕು ಮತ್ತು ಏನು ಮಾಡಬಾರದು; ಯಾವುದು ಸ್ವೀಕಾರಾರ್ಹ ಮತ್ತು ಯಾವುದಲ್ಲ ಎಂಬುದನ್ನು ಸೂಚಿಸುವಂಥದ್ದು ಇವು. ಇವೇ ಆದರ್ಶ ಬದುಕಿಗೊಂದು ಚೌಕಟ್ಟು ಹಾಕಿ ಕೊಡುವಂಥವು. ಯೋಗ ಜೀವನದ ಮುಖ್ಯ ಗುರಿಯೇ ಯಮ ಮತ್ತು ನಿಯಮವನ್ನು ಪಾಲಿಸುವುದು. ಆಸನ, ಪ್ರಾಣಾಯಾಮ, ಧ್ಯಾನ ಮೊದಲಾದವು ಶಾರೀರಿಕ, ಮಾನಸಿಕ ಅಭಿವೃದ್ಧಿಗಾಗಿ ಇರುವಂತಹವು. ಈ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಯೋಗಾಭ್ಯಾಸ ಮಾಡಿದರೆ ಫಲಿತಾಂಶ ಅಧಿಕ.
Related Articles
Advertisement
ಎನ್. ರಾಧಾಕೃಷ್ಣ ಪ್ರಭುಕಾಪು ಕಲ್ಯ ನಿವಾಸಿ ಎನ್. ರಾಧಾಕೃಷ್ಣ ಪ್ರಭು 25 ವರ್ಷಗಳಿಂದ ಯೋಗ ತರಗತಿ ನಡೆಸುತ್ತ ಬರುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನಿಂದ ತರಬೇತಿ ಪಡೆದ ಅವರು, 2009ರಲ್ಲಿ ಹರಿದ್ವಾರದಲ್ಲಿ ಯೋಗಗುರು ಬಾಬಾ ರಾಮದೇವ್ ಅವರಿಂದ ಉನ್ನತ ತರಬೇತಿ ಪಡೆದರು. ಇವರು ಪತಂಜಲಿ ಯೋಗ ಸಮಿತಿಯ ಕಾರ್ಯಕರ್ತರೂ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಶ್ರೀ ಗುರು ಯೋಗ ಸಂಘದ ಅಧ್ಯಕ್ಷರಾಗಿ ನಿರಂತರ ಯೋಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ರಾಧಾಕೃಷ್ಣ ಪ್ರಭುಗಳು.