ಬೀದರ: ಮಾನಸಿಕ, ಶಾರರೀಕವಾಗಿ ಚೈತನ್ಯ ನೀಡುವ ಸಾಧನ ಯೋಗವಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ಎಸ್.ಎಸ್.ವಿ. ಗಾದಾ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಪತಂಜಲಿ ಯೋಗ ಸಮಿತಿ ಏರ್ಪಡಿಸಿದ್ದ ಯೋಗ ಸಾಧಕರಿಗೆ “ಯೋಗ ವಾರಿಯರ್’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತ ಜೀವನ ಸಾಗಿಸಲು ದಿನಾಲು ಯೋಗವನ್ನು ದೈನಂದಿನ ದಿನಚರಿಯಾಗಿ ಅಳವಡಿಸಿಕೊಳ್ಳಬೇಕು. ಇದಕ್ಕೆ ಯಾವುದೇ ವಯಸ್ಸು, ಲಿಂಗ ಬೇಧವಿಲ್ಲ. ಇಡೀ ವಿಶ್ವಕ್ಕೆ ಯೋಗ ಮತ್ತು ಆಯುರ್ವೇದಿಕ ನೀಡಿದ ಭಾರತದ ಕೊಡುಗೆ ಬಹಳ ಅಪಾರವಾಗಿದೆ ಎಂದರು.
ರಾಜ್ಯ ಪಂತಂಜಲಿ ಯೋಗ ಸಮಿತಿ ಅಧ್ಯಕ್ಷ ಭವರಲಾಲ್ ಆರ್ಯ ಮಾತನಾಡಿ, ಇಂದಿನ ಯಾಂತ್ರಿಕ ಜೀವನದಲ್ಲಿ ಒತ್ತಡಕ್ಕೆ ಒಳಗಾಗಿ ಮನುಷ್ಯ ವಿವಿಧ ರೋಗಗಳಿಗೆ ಬಲಿಯಾಗುತಿದ್ದಾನೆ. ಇಂದು ಅಹಾರ, ಗಾಳಿ, ನೀರು ಮಾಲಿನ್ಯವಾಗಿದೆ. ಇದಕ್ಕೆ ಯೋಗ ಮಾತ್ರ ಪರಿಹಾರ ಒದಗಿಸಬಲ್ಲದು. ಯೋಗ ಕೇವಲ ಆಸನವಲ್ಲ. ಉತ್ತಮ ಜೀವನದ ಶ್ರೇಷ್ಠ ವಿಧಾನವಾಗಿದೆ. ಆತ್ಮ ಪರಮಾತ್ಮನೊಂದಿಗೆ ಬೆರಿಸಬಲ್ಲ ಶಕ್ತಿ ಇದರಲ್ಲಿದೆ. ಇದರಲ್ಲಿ ತೊಡಗಿಸಿಕೊಂಡವರು ಯೋಗಿಗಳಾಗಿ ಬದುಕುತ್ತಾರೆ ಎಂದು ಹೇಳಿದರು.
ಡಾ| ಮಹೇಶ ಬಿರಾದಾರ, ಹಿರಿಯ ಸಾಧಕರಾದ ಗಣಪತರಾವ ಖೂಬಾ, ಶಿವಶರಣಪ್ಪಾ ವಾಲಿ, ಉಷಾಕುಮಾರ ಭಗತ, ಗುತ್ತಿಗೆದಾರರಾದ ಗುರುನಾಥ ಕೊಳ್ಳುರ, ಜಗದೀಶ ಖೂಬಾ, ಧನರಾಜ ತಾಡಂಪಳ್ಳಿ, ಶಂಕರರಾವ್ ಕೊಟ್ಟರ್ಕಿ, ರಾಮತೇರೆ, ಸುಭಾಶ ಅಷ್ಟಗಿ, ಧೋಂಡಿರಾಮ ಚಾಂದಿವಾಲೆ, ಅಜಯಕುಮಾರ ದುಬೆ, ರಾಜಶೇಖರ ಗಾದಾ, ಡಾ| ನಂದಕುಮಾರ ತಾಂಡಳೆ, ಬಸವರಾಜ ಶೆಟಕಾರ ಇನ್ನಿತರರಿದ್ದರು. ಯೋಗಸಾದಕರನ್ನು ಹಾಗೂ ಸಹಾಯ ಸಹಕಾರ ನೀಡಿದ ಪ್ರಮುಖ ಮಹಿನಿಯರಿಗೆ ಯೋಗ ವಾರಿಯರ್ ಪದಕ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ರಾಜಶೇಖರ ಗಾದಾ ವಂದಿಸಿದರು.