Advertisement

6ನೇ ತರಗತಿಯಿಂದ ಯೋಗ: ಶಾಲೆಗಳಿಗೆ ಸೂಚನೆ

06:00 AM Aug 12, 2018 | Team Udayavani |

ನವದೆಹಲಿ: ಆರನೇ ತರಗತಿಯಿಂದ ಎಲ್ಲ ಶಾಲೆಗಳಲ್ಲೂ ಯೋಗ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಶಾಲೆಗಳಿಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) ಸೂಚನೆ ನೀಡಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಎಲ್ಲ ಶಾಲೆಗಳಿಗೆ ಈ ಸೂಚನೆ ನೀಡಲಾಗಿದ್ದು, ಸಿಬಿಎಸ್‌ಇ ಶಾಲೆಗಳು ಕೂಡ ಈ ಮಾರ್ಗಸೂಚಿ ಅನುಸರಿಸುವ ಸಾಧ್ಯತೆಗಳಿವೆ.

Advertisement

ಆದರೆ ರಾಜ್ಯದ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲೆ ಗಳಿಗೆ ಇದು ಅನ್ವಯಿಸುವುದಿಲ್ಲ. 1 ರಿಂದ 10ನೇ ತರಗತಿಯ ವರೆಗೆ ದೈಹಿಕ ಶಿಕ್ಷಣ, ಕ್ರೀಡೆ ಕಡ್ಡಾಯವಾಗಿರಲಿದ್ದು, 6ನೇ ತರಗತಿಯಿಂದ ಯೋಗವನ್ನೂ ಬೋಧಿಸಲು ಸೂಚನೆ ನೀಡಲಾಗಿದೆ. ಈ ಸಂಬಂಧ ಪಠ್ಯಕ್ರಮವನ್ನು ಎಲ್ಲ ಶಾಲೆಗಳಿಗೆ ತಲುಪಿಸಲಾಗಿದೆ ಎಂದು ಎನ್‌ಸಿಇಆರ್‌ಟಿ ಹೇಳಿದೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೂ ಯೋಗ ಮಾಡಬಹುದು. ಆದರೆ 6ನೇ ತರಗತಿಯಿಂದ ಯೋಗದ ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನದ ಪ್ರಾಯೋಗಿಕ, ಥಿಯರಿಯನ್ನೂ ಬೋಧಿಸಬಹುದಾ ಗಿದೆ ಮತ್ತು ಈ ವಯಸ್ಸಿನ ಮಕ್ಕಳು ಥಿಯರಿಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಎನ್‌ಸಿಇಆರ್‌ಟಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next