Advertisement
ನಿರಂತರವಾದ ಯೋಗಾಭ್ಯಾಸದಿಂದ ದೇಹದ ಸಕಲ ಅಂಗಗಳು ಉತ್ತಮ ವ್ಯಾಯಾಮ ಪಡೆಯುತ್ತವೆ. ಜತೆಗೆ ಆ ಕ್ಷಣದಲ್ಲಿ ದೇಹದ ಧನಾತ್ಮಕ ಶಕ್ತಿ ಸಂಗ್ರಹವಾಗಿ ನಿಮ್ಮ ಚೈತನ್ಯವನ್ನು ಹೆಚ್ಚಿಸುತ್ತವೆ. ಆದರೆ ಜಿಮ್‌ಗಳಲ್ಲಿ ದೇಹದ ಸ್ನಾಯುಗಳನ್ನು ಹುರಿಗಟ್ಟಿಸಲು ಮಾಡುವಂತಹ ಬಲವಂತದ ವ್ಯಾಯಾಮ ಚೈತನ್ಯವನ್ನು ಹುರಿದುಂಬಿಸುವುದಿಲ್ಲ.
Related Articles
Advertisement
ನಮ್ಮ ಆರೋಗ್ಯ ಚೆನ್ನಾಗಿರಬೇಕೆಂದರೆ ಸಕಲ ಅಂಗಗಳು ಸರಿಯಾಗಿ ತಮ್ಮ ಕೆಲಸ ಮಾಡುತ್ತಿರಬೇಕು. ಅಂಗಗಳು ಸರಿಯಾಗಿ ಕೆಲಸ ಮಾಡಲು ಅವುಗಳಿಗೆ ಆಮ್ಲಜನಕ ಪೂರೈಕೆಯಾಗುತ್ತಿರಬೇಕು. ಆಮ್ಲಜನಕ ಪೂರೈಕೆಯಾಗಲು ರಕ್ತ ಪರಿಚಲನೆ ಚೆನ್ನಾಗಿರಬೇಕು. ಈ ರಕ್ತ ಪರಿಚಲನೆ ಏರುಪೇರಾದರೆ ರಕ್ತ ಹೆಪ್ಪುಗಟ್ಟುವಿಕೆ, ನರ-ಸಂಬಂಧಿ ಸಮಸ್ಯೆಗಳು, ಕಾಲು ಊದಿಕೊಳ್ಳುವಿಕೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ನಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಹಲವಾರು ಚಿಕಿತ್ಸೆಗಳು ಲಭ್ಯವಿವೆ. ಆದರೂ ಎಲ್ಲಾ ಔಷಧಗಳ ಜತೆಗೆ ಯೋಗವನ್ನು ತಪ್ಪದೇ ಮಾಡಬೇಕಾಗುತ್ತದೆ. ಅದರಲ್ಲೂ ಅಧೋ ಮುಖ ವೃûಾಸನವನ್ನು ತಪ್ಪದೆ ಮಾಡಬೇಕಾಗುತ್ತದೆ. ಇದು ರಕ್ತ ಪರಿಚಲನೆಯನ್ನು ವರ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಹಾರ್ಮೋನ್‌ನ ಸಮತೋಲನ ಕಾಪಾಡಲು ಯೋಗದ ಮೊರೆಹೋಗಬಹುದಾಗಿದೆ. ಇವುಗಳಿಂದ ಪುರುಷರು ಮತ್ತು ಮಹಿಳೆಯರು ಇಬ್ಬರೂ ಪ್ರಯೋಜನ ಪಡೆಯಬಹುದು. ಕೆಲವು ತಾಯಿಯರು ಮಗು ಹುಟ್ಟಿದ ಅನಂತರ ಕಾಣಿಸಿಕೊಳ್ಳುವ ಖನ್ನತೆಯನ್ನು ತಡೆಯಲು ಈ ಭಂಗಿಗಳನ್ನು ಬಳಸಬಹುದು.
ದೇಹವನ್ನು ನಿರ್ನಾಳ ಗ್ರಂಥಿ ನಿಯಂ ತ್ರಿಸುತ್ತದೆ. ಹಾರ್ಮೋನ್‌ಗಳು ದೇಹದ ಒಳಗೆ ವಿಶೇಷ ಸಂಯುಕ್ತವನ್ನು ಉತ್ಪತ್ತಿ ಮಾಡಿದರೆ, ಅದನ್ನು ಹತೋಟಿಯಲ್ಲಿ ಇಡುವ ಕೆಲಸ ನಿರ್ನಾಳ ಗ್ರಂಥಿಗಳದ್ದು. ನಿರಂತರ ಅಭ್ಯಾಸದ ಮೂಲಕ ಹಾರ್ಮೋನ್‌ಗಳ ಸಮತೋಲನ ಕಾಪಾಡಲು ಸಾಧ್ಯ.
ಮೊಲದ ಭಂಗಿ ಅಥವಾ ಸಾಸಂಗಾಸನ ಇದು ಥೈರಾಯಿಡ್ ಮತ್ತು ಪ್ಯಾರಥೈರಾಯಿಡ್ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಮಾತ್ರವಲ್ಲದೇ ಖನ್ನತೆ ಹೋಗಲಾಡಿಸಬಹುದು. ಹಿಮ್ಮಡಿ ಮೂಲಕ ಕುಳಿತುಕೊಂಡು, ಕೈಗಳನ್ನು ಅಗಲಿಸಿ ಪಾದದ ಅಡಿಗೆ ತರಬೇಕು. ಗಲ್ಲವನ್ನು ಎದೆಯ ಭಾಗಕ್ಕೆ ಬಗ್ಗಿಸಿ, ಸೊಂಟವನ್ನು ಮೇಲಕ್ಕೆ ಎತ್ತಿ ತಲೆಯನ್ನು ನೆಲಕ್ಕೆ ತಾಗಿಸಿ, ಹಣೆ ಕಾಲನ್ನು ತಾಗುತ್ತಿರಬೇಕು. ತಲೆ ನೆಲಕ್ಕೆ ತಾಗುತ್ತಿದ್ದಂತೆ ನಿಮ್ಮ ಹಿಂಬದಿಯನ್ನು ಮೇಲಕ್ಕೆ ಎತ್ತಿ, ಸರಾಗವಾಗಿ ಉಸಿರಾಡಬೇಕು.
ಸುಲಭಾಸನ ಅಥವಾ ಸುಖಾಸನಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಮಗು ಜನನವಾದ ಅನಂತರದ ಕಂಡು ಬರುವ ಖನ್ನತೆಯನ್ನು ಹೋಗಲಾಡಿಸುತ್ತದೆ. ಹಾರ್ಮೋನುಗಳನ್ನು ಸಮತೋಲನದಲ್ಲಿ ಇಡುತ್ತದೆ. ಎರಡು ಇಂಚು ದಪ್ಪ ಇರುವ ಬ್ಲಾಂಕೆಟ್ ಹಾಸಿಕೊಂಡು ಕುಳಿತುಕೊಳ್ಳಿ. ನಿಮ್ಮ ಕಾಲುಗಳನ್ನು ಮಡಿಚಿ ಕುಳಿತುಕೊಳ್ಳಿ ಮತ್ತು ನಿಮ್ಮ ಅಂಗೈ ಮೇಲ್ಮುಖವಾಗಿ ತೊಡೆಯ ಮೇಲಿರಲಿ. ನಿಮ್ಮ ಬೆನ್ನು ನೇರವಾಗಿರಲಿ ಆದರೆ ವಿಶ್ರಾಂತಿ ಇರಲಿ. ಉಚ್ಛಾ ಮತ್ತು ನಿಶ್ವಾಸ ಸರಾಗವಾಗಿರಲಿ. ಮುದ್ರೆಗಳು
ಇದು ಪಿಟ್ಯುಟರಿ ಮತ್ತು ಪೈನಿಯಲ್ ಗ್ರಂಥಿಗಳ ಉತ್ತೇಜನಕ್ಕೆ ಸಹಾಯಕವಾಗುತ್ತದೆ. ಎರಡು ಕೈಗಳನ್ನು ಜೋಡಿಸಿ ಪ್ರಾಣ ಮುದ್ರೆಯನ್ನು ಮಾಡಿ ನಿಮ್ಮ ಹೆಬ್ಬೆರಳು ಎದೆ ಮೂಳೆಯನ್ನು ಒತ್ತುತ್ತಿರಲಿ. ನಿಮ್ಮ ಹೆಬ್ಬೆರಳನ್ನು ಎಡ-ಬಲ ಮತ್ತು ಮಧ್ಯದಲ್ಲಿ ತಿರುಗಿಸಿ. ಮತ್ತೆ ಪುನರಾವರ್ತಿಸಿ. ಅನಂತರ ಕೈಗಳನ್ನು ಪ್ರತ್ಯೇಕಿಸಿ, ಹೆಬ್ಬೆರಳು ಮತ್ತು ತೋರು ಬೆರಳು ಜತೆಗೂಡಿಸಿ ಜ್ಞಾನ ಮುದ್ರೆ ಮಾಡಿ. ಎರಡೂ ಬೆರಳುಗಳನ್ನು ಒಟ್ಟಿಗೆ ಒತ್ತಿ. ಅನಂತರ ಮಧ್ಯ ಮತ್ತು ಹೆಬ್ಬೆರಳನ್ನು ಒಟ್ಟಿಗೆ ಒತ್ತಿ, ಅದೇ ರೀತಿ ಉಂಗುರ ಬೆರಳು ಮತ್ತು ಹೆಬ್ಬೆರಳು, ಕಿರುಬೆರಳು ಮತ್ತು ಹೆಬ್ಬೆರಳು ನಂತರ ಮತ್ತೆ ತೋರುಬೆರಳು ಮತ್ತು ಹೆಬ್ಬೆರಳು ಪುನರಾವರ್ತಿಸಿ. ನಿಮ್ಮ ಚಲನೆ ನಿಮ್ಮ ಉಸಿರಾಟವನ್ನು ಗಮನಿಸುತ್ತಿರಲಿ. ಇದೇ ರೀತಿ ಎರಡು ನಿಮಿಷಗಳ ಕಾಲ ಮುಂದುವರಿಸಿ.