Advertisement
ತಂಪಾದ ಮತ್ತು ಶಾಂತವಾದ ಸಮಯದಲ್ಲಿ ಯೋಗ ನಡಿಗೆ ಮಾಡುವುದು ಉತ್ತಮ. ನಡಿಗೆಯ ಮೂಲಕ ಮನಸ್ಸಿನ ಗಮನವನ್ನು ದೇಹದ ಮೇಲೆ ಇರಿಸಿ ದೇಹ ದೊಂದಿಗೆ ನಾವು ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ. ಉಸಿ ರಾಟವನ್ನು ನಮ್ಮ ಕಾಲುಗಳ ಚಲನೆಯ ಮೇಲೆ ಜೋಡಿಸುವು ದರಿಂದ ಮನಸ್ಸು ಶಾಂತ ಸ್ಥಿತಿಗೆ ತಲುಪಲು ಪ್ರೇರಣೆಯಾಗುತ್ತದೆ. ಇದರಿಂದ ಆಲೋಚನೆಗಳು, ಚಿಂತೆಗಳು, ನಕಾ ರಾತ್ಮಕತೆಯು ದೂರವಾಗಿ ನಾವು ಒತ್ತಡಮುಕ್ತ ರಾಗಲು ಸಾಧ್ಯ. ನಿಯಮಿತವಾಗಿ ಯೋಗ ನಡಿಗೆ ಯನ್ನು ಅಭ್ಯಾಸ ಮಾಡಿದರೆ ದೇಹದ ತೂಕ ಇಳಿ ಯುತ್ತದೆ, ರೋಗಗಳು ಬಾಧಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ.ಯೋಗದ ಮುಖ್ಯ ಉದ್ದೇಶವೇ ಚಿತ್ತವೃತ್ತಿ ಯನ್ನು ಕಡಿಮೆ ಮಾಡುವುದು. ಯೋಗ ನಡಿಗೆಯಿಂದ ದೇಹದ ಎಲ್ಲ ಚಟುವಟಿಕೆಗಳನ್ನೂ ಸರಿ ಯಾಗಿರಿಸಲು ಸಾಧ್ಯವಾಗುತ್ತದೆ. ಕೆಲವರು ವಾಕಿಂಗ್ ಮಾಡಿದ ಮೇಲೆ ಏದುಸಿರು ಬಿಡುತ್ತಾರೆ. ಇದು ಹೃದಯದ ಕಾರ್ಯದಲ್ಲಾಗಿ ರುವ ವ್ಯತ್ಯಾಸದ ಸೂಚಕವಾಗಿದೆ. ವಾಕಿಂಗ್ ಮಾಡಿದ ಮೇಲೂ ಹೃದಯದ ಕಾರ್ಯ ಸ್ಥಿರವಾಗಿರಬೇಕಾದರೆ ಮನ ಸ್ಸನ್ನು ಶಾಂತವಾಗಿರಿಸುವುದು ಬಹುಮುಖ್ಯವಾಗು ತ್ತದೆ. ಯೋಗ ನಡಿಗೆಯಿಂದ ಹೃದಯ, ಶ್ವಾಸಕೋ ಶದ ದಕ್ಷತೆ ಹೆಚ್ಚಾಗುತ್ತದೆ. ಮನಸ್ಸು ಸಂಪೂರ್ಣ ಶಾಂತವಾಗಿ ಯೋಗಾಭ್ಯಾಸಕ್ಕೆ ಪೂರಕವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರಬೇಕು, ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳ ಬೇಕು ಎಂಬುದು ಎಲ್ಲರ ಧ್ಯೇಯವಾಗಿ ಬಿಟ್ಟಿದೆ. ಇದಕ್ಕಾಗಿ ನಾವು ಮೂರು ಮುಖ್ಯ ವಿಷಯಗಳನ್ನು ಅರಿತಿರಬೇಕು. 1- ಅಷ್ಟಾಂಗದಲ್ಲಿ ಶೌಚಾದಿಕ್ರಿಯೆ ಗಳನ್ನು ಪಾಲಿಸಬೇಕು. 2- ಮನಸ್ಸು ಶಾಂತವಾಗಿ ರಬೇಕು. 3- ದೇಹದ ಅಂಗಾಂಗಗಳ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಮುಖ್ಯ ಕಾರಣವೇ ಜೀರ್ಣ ಕ್ರಿಯೆಯಲ್ಲಿನ ಸಮಸ್ಯೆ. ಯೋಗ ನಡಿಗೆ, ಆಸನ, ಪ್ರಾಣಾಯಾಮದ ಮೂಲಕ ಇದನ್ನು ಸುಸ್ಥಿತಿಯ ಲ್ಲಿಟ್ಟು ಕೊಳ್ಳಬಹುದು. ಯೋಗ ನಡಿಗೆಯು ದೇಹದ ಅಂಗಾಂಗಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಇದರಿಂದ ಉಳಿದ ಕ್ರಿಯೆಗಳೂ ಉತ್ತಮವಾಗಿರುತ್ತವೆ. ಶ್ವಾಸಕೋಶದ ಸಾಮರ್ಥ್ಯ ಕುಗ್ಗಿದಾಗ ಕಫ, ಜ್ವರ, ನೆಗಡಿ ಸೇರಿದಂತೆ ಕೆಲವೊಂದು ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ. ಇದಕ್ಕೆ ಮುಖ್ಯ ಕಾರಣ ನಮ್ಮ ಎರಡೂ ಮೂಗಿನ ಹೊಳ್ಳೆಗಳಿಂದ ಉಸಿರಾಟ ಪ್ರಕ್ರಿಯೆ ಸರಿಯಾಗಿ ಆಗದೇ ಇರುವುದು. ಇದನ್ನು ಅನುಲೋಮ, ವಿಲೋಮ, ಉಜ್ರಾಯಿ, ಭಾÅಮರಿ ಪ್ರಾಣಾಯಾಮದ ಮೂಲಕ ಸರಿಪಡಿಸಿಕೊಳ್ಳ ಬಹುದು. ಜತೆಗೆ ಧ್ಯಾನ ಮಾಡುವುದರಿಂದಲೂ ಸ್ವಯಂ ಜಾಗೃತಿ ಉಂಟಾಗಿ ಮನಸ್ಸನ್ನು ಶಾಂತವಾ ಗಿರಿಸಿಕೊಳ್ಳಲು ಸಾಧ್ಯವಿದೆ. ಪ್ರತಿ ಸಾರ ನಡಿಗೆ (ಹಿಂದಕ್ಕೆ ನಡೆಯುವುದು)
ಯೋಗ ನಡಿಗೆಯಲ್ಲಿ ಇದು ಬರುವುದಿಲ್ಲ. ಇದು ಇತ್ತೀಚಿನ ಕಲ್ಪನೆಯಷ್ಟೇ. ಇದರ ಪ್ರಯೋಜನ ಒಂದೇ ರೀತಿ ಆಗಿರುತ್ತದೆ. ವ್ಯಾಯಾಮದಲ್ಲಾಗುವ ಬೇಸರವನ್ನು ತಪ್ಪಿಸಲು ಇಂಥ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇದು ನಿಧಾನ ನಡಿಗೆಯಾದ್ದರಿಂದ ದೇಹ ಮತ್ತು ಮನಸ್ಸಿನ ವಿಶ್ರಾಂತಿಗೆ ಪ್ರಯೋಜನಕಾರಿಯಾಗಿದೆ ಮಾತ್ರವಲ್ಲದೆ ಉತ್ತಮ ನಿದ್ರೆಗೂ ಸಹಕಾರಿ. ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸಲು, ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಇದು ಪೂರಕ.
Related Articles
Advertisement
– ಕುಶಾಲಪ್ಪ ಗೌಡ ಎನ್., ಯೋಗ ಚಿಕಿತ್ಸಕ, ಆವಿಷ್ಕಾರ ಯೋಗ/ ಯೋಗ ವಿಜ್ಞಾನ ಜೂನಿಯರ್ ರಿಸರ್ಚ್ ಫೆಲೋ, ಯೇನಪೊಯ ಡೀಮ್ಡ್ ಯುನಿವರ್ಸಿಟಿ, ಮಂಗಳೂರು