Advertisement
ಖಿನ್ನತೆ ಒಂದು ರೀತಿಯ ಮಾನಸಿಕ ಕಾಯಿಲೆ. ಪ್ರೀತಿ ಪಾತ್ರರಿಂದ ದೂರವಾಗುವುದು, ಹೆತ್ತವರಿಂದ ಅಥವಾ ಮಕ್ಕಳಿಂದ ದೂರವಾಗುವುದು, ಜೀವನದಲ್ಲಿ ಸಂಭವಿಸಿದ ನೋವಿನ ಘಟನೆಗಳು, ಸ್ನೇಹಿತರು ದೂರವಾಗುವುದು, ಜೀವನದಲ್ಲಿನ ಬೀಳುಗಳು..ಹೀಗೆ ಖಿನ್ನತೆ ಆವರಿಸಲು ಹಲವು ಕಾರಣಗಳು. ನೆಟ್ಟ ದೃಷ್ಟಿ ಸರಿಸದಿರುವುದು, ದಿನಂಪ್ರತಿ ಏನಾದರೊಂದು ಯೋಚನೆಯಲ್ಲಿರುವುದು, ಇನ್ನೊಬ್ಬರೊಂದಿಗೆ ಬೆರೆಯಲು ಮನಸ್ಸಿಲ್ಲದೆ ಒಂಟಿಯಾಗಿರುವುದು, ದಿನಾ ಕಾಡುವ ಆತ್ಮಹತ್ಯೆ ಯೋಚನೆ, ಸಿಟ್ಟು, ದುಡುಕು ಸ್ವಭಾವ, ತಾನೇನು ಮಾಡಿದೆನೆಂದು ಕ್ಷಣಮಾತ್ರದಲ್ಲಿ ಮರೆತು ಬಿಡುವುದು..ಇವೇ ಮುಂತಾದವು ಖಿನ್ನತೆಯ ಲಕ್ಷಣಗಳಾಗಿವೆ. ಒಂದು ಬಾರಿ ಖಿನ್ನತೆ ಆವರಿಸಿತೆಂದಾರೆ, ಅದನ್ನು ತತ್‌ಕ್ಷಣವೇ ಗುರುತಿಸಿ ಆ ವ್ಯಕ್ತಿಯ ಮನಃಸ್ಥಿತಿಯನ್ನರಿತುಕೊಂಡು ಅವನನ್ನು ಸರಿದಾರಿಗೆ ತರಲು ಯತ್ನಿಸಬೇಕು. ಒಂದು ವೇಳೆ ಸಾಧ್ಯವಾಗದಿದ್ದರೆ, ಮನಃಶಾಸ್ತ್ರಜ್ಞರಲ್ಲಿ ಕರೆದೊಯ್ದು ಆತನ ಮನಸ್ಸಿನೊಳಗೆ ಕಾಡುವ ಆತಂಕಗಳಿಗೆ ಅಂತ್ಯ ಹಾಡಲು ಪ್ರಯತ್ನಿಸಬೇಕು. ಆದರೆ ಇವೆಲ್ಲಕ್ಕಿಂತ ಅತ್ಯುತ್ತಮ ಪರಿಹಾರ ಮಾರ್ಗವೆಂದರೆ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು.
ಸೂರ್ಯ ನಮಸ್ಕಾರ, ಸ್ವಸ್ತಿಕಾಸನ, ವೃಕ್ಷಾಸನ, ವೀರಭದ್ರಾಸನ-1, 11, ವಜ್ರಾಸನ ಮತ್ತು ಸುಸ್ತ ವಜ್ರಾಸನ, ಪವನಮುಕ್ತಾಸನ, ಭುಜಂಗಾಸನ ಮತ್ತು ಧನುರಾಸನ, ಸರ್ವಾಂಗಾಸನ, ಮತ್ಸಾéಸನ ಸಹಿತ ವಿವಿಧ ಆಸನಗಳು ಖನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ಯಲು ಸಹಕಾರಿ. ಸೂರ್ಯ ನಮಸ್ಕಾರದಲ್ಲಿ ಸೂರ್ಯ ಭೇದನ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಆಸನಗಳನ್ನು ನಿರಂತರ ಅಭ್ಯಾಸ ಮಾಡುವುದರಿಂದ ಸುಮಾರು ನಾಲ್ಕು ವಾರಗಳಲ್ಲಿ ಫಲಿತಾಂಶ ತಿಳಿಯಲು ಆರಂಭವಾಗುತ್ತದೆ. 3 ತಿಂಗಳ ವೇಳೆಗೆ ಸಂಪೂರ್ಣವಾಗಿ ಫಲಿತಾಂಶ ಗೊತ್ತಾಗುತ್ತದೆ.
Related Articles
ಯೋಚನೆ ಮತ್ತು ಮನಸ್ಸನ್ನು ನಿಯಂತ್ರಿಸಿ ರಿಲ್ಯಾಕ್ಸ್ ಆಗುವ ಮೂಲಕ ಪ್ರಾಣಾಯಾಮ ಮಾಡಿದರೆ ಉತ್ತಮ ಪರಿಹಾರ ಸಿಗುತ್ತದೆ. ಉಸಿರಾಟವನ್ನು ನಿಯಂತ್ರಿಸುವ ಮೂಲಕ ಶ್ವಾಸೋಚ್ಛಾ$Ìಸದ ಮೇಲೆ ಏಕಾಗ್ರತೆ ಕೇಂದ್ರೀಕರಿಸಲು ಪ್ರಾಣಾಯಾಮ ಸಹಕಾರಿ. ಪ್ರಾಣಾಯಾಮವು ಕೇವಲ ಖನ್ನತೆಯಷ್ಟೇ ಅಲ್ಲ, ತಲೆನೋವು, ಏಕಾಗ್ರತೆಯ ಕೊರತೆ ನಿವಾರಣೆಗೂ ಉತ್ತಮ ಮದ್ದು. ಯೋಗ ತರಬೇತಿಗೆ ಸಂಬಂಧಿಸಿ ಕನಿಷ್ಠ ಒಂದು ತಿಂಗಳ ತರಗತಿ ತೆಗೆದುಕೊಳ್ಳಬೇಕಾಗುತ್ತದೆ. ಮನುಷ್ಯನ ಆರೋಗ್ಯಕರ ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಆತನಿಗಿರುವ ತೊಂದರೆಗಳನ್ನು ಗಮನಿಸಿಕೊಂಡು ಯೋಗ ತರಬೇತಿ ನೀಡಲಾಗುತ್ತದೆ.
Advertisement
ಮಾರ್ಗದರ್ಶನ ಅಗತ್ಯಯಾವುದೇ ವಿದ್ಯೆ, ಔಷಧ ತೆಗೆದುಕೊಳ್ಳುವುದನ್ನು ಸಂಬಂಧಪಟ್ಟ ತಜ್ಞರೊಂದಿಗೆ ಸಮಾಲೋಚಿಸಿಯೇ ಮುಂದುವರಿಯಬೇಕಾಗುತ್ತದೆ. ಹಾಗೆಯೇ ಯೋಗವೂ. ಯೂಟ್ಯೂಬ್ ವೀಡಿಯೋಗಳನ್ನು ನೋಡಿಯೋ ಅಥವಾ ಸ್ನೇಹಿತರ ಸಲಹೆಯ ಮೇರೆಗೋ ಯೋಗಗುರುಗಳ ಮಾರ್ಗದರ್ಶನವಿಲ್ಲದೆ, ಯೋಗಾಭ್ಯಾಸ ಮಾಡುವುದು ಸಲ್ಲ. ಯಾವ ಕಾಯಿಲೆ ನಿವಾರಣೆಗೆ ಯಾವ ಯೋಗಾಭ್ಯಾಸ ಅಳವಡಿಸಿಕೊಂಡರೆ ಸೂಕ್ತ ಮತ್ತು ಅದನ್ನು ಮಾಡುವ ಕ್ರಮಗಳ ಬಗ್ಗೆ ವೃತ್ತಿಪರ ಯೋಗ ಥೆರಪಿಸ್ಟ್‌ಗಳಿಂದ ತಿಳಿದುಕೊಂಡು ಮುಂದುವರಿಯಬೇಕು.
-ಕುಶಾಲಪ್ಪ ಗೌಡ, ಯೋಗಗುರು - ಧನ್ಯಾ ಬಾಳೆಕಜೆ