Advertisement

ಅಂತರಗಂಗೆ ಪ್ರಕೃತಿ ಮಡಿಲಲ್ಲಿ  ಯೋಗ ದಿನ

04:24 PM Jun 08, 2022 | Team Udayavani |

ಕೋಲಾರ: ನಗರ ಸಮೀಪದ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ಬಾರಿಯಂತೆ ಅರ್ಥ ಪೂರ್ಣವಾಗಿ ಆಚರಿಸಲಾಗುವುದು ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂ ಗಣದಲ್ಲಿ ಹಮ್ಮಿಕೊಂಡಿದ್ದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ಇಲಾಖೆ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಈ ಬಾರಿ ಯೋಗ ದಿನಾಚರಣೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಯ 15 ಸಾವಿರ ಮಕ್ಕಳು ಭಾಗವಹಿಸಲಿದ್ದು, ಅವರಿಗೆ ಸೂಕ್ತ ರೀತಿಯ ಸಾರಿಗೆ ವ್ಯವಸ್ಥೆ, ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ಸೂಕ್ತ ಭದ್ರತೆ ಒದಗಿಸಿ: ಯೋಗ ಕಾರ್ಯಕ್ರಮವು ಜೂ.21ರ ಬೆಳಗ್ಗೆ 7ರಿಂದ 9 ಗಂಟೆಯವರೆಗೂ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು. ಅರಣ್ಯ ಇಲಾಖೆಯವರು ಬೆಟ್ಟದಲ್ಲಿ ಯಾವುದೇ ಪ್ರಾಣಿ ಗಳಿಂದ ಯಾರಿಗೂ ಹಾನಿಯಾಗದಂತೆ ಸೂಕ್ತ ಭದ್ರತೆ ಯನ್ನು ನೀಡಬೇಕು ಎಂದು ಹೇಳಿದರು.

ಸ್ಕೌಟ್ಸ್‌, ಗೈಡ್ಸ್‌ ವಿದ್ಯಾರ್ಥಿಗಳು ಭಾಗಿ: ಜಿಲ್ಲೆಯ ಎಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ. ಮುಂಬರುವ ವರ್ಷಕ್ಕೆ ಗಿನ್ನಿಸ್‌ ದಾಖಲೆ ಮಾಡುವಂತೆ ನಮ್ಮ ಜಿಲ್ಲೆ ಮುಂದಾಗಬೇಕು. ಕಾರ್ಯಕ್ರಮದಲ್ಲಿ 4 ಆ್ಯಂಬುಲೆನ್ಸ್‌, 1 ಆಗ್ನಿಶಾಮಕದಳ ವಾಹನ, 40 ವೈದ್ಯಕೀಯ ಸಿಬ್ಬಂದಿ, 200 ಎನ್‌ಸಿಸಿ ವಿದ್ಯಾರ್ಥಿಗಳು, 200 ಹೋಮ್‌ಗಾರ್ಡ್ಸ್‌, 150 ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Advertisement

10 ಸಾವಿರ ಜನರ ಕಾಲ್ನಡಿಗೆ: ನಗರಸಭೆಯವರು 20 ಮೊಬೈಲ್‌ ಶೌಚಾಲಯ, 10 ನೀರಿನ ಟ್ಯಾಂಕರ್‌, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಪೊಲೀಸ್‌ ಇಲಾಖೆಯವರು ಸೂಕ್ತ ಭದ್ರತೆ ಒದಗಿಸಬೇಕು. 800 ಯೋಗ ತರಬೇತಿದಾರರಿಂದ ದಿನಾಚರಣೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಯೋಗವನ್ನು ಒದಗಿಸಲಾಗುವುದು. ಯೋಗ ಮಾಡುವುದರಿಂದ ನಮ್ಮ ಆರೋಗ್ಯವು ರೋಗ ಮುಕ್ತವಾಗಿದೆ. ಸಂಸದರ ನೇತೃತ್ವದಲ್ಲಿ 10 ಸಾವಿರ ಜನರು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ತಲುಪಲಿದ್ದಾರೆ ಎಂದು ತಿಳಿಸಿದರು.

ಯೋಗದ ದಿನಾಚರಣೆಯಲ್ಲಿ ಭಾಗವಹಿಸೋಣ: ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮಾತನಾಡಿ, ಅಂತಾ ರಾಷ್ಟ್ರೀಯ ಯೋಗ ದಿನವನ್ನು ಜೂ.21ರಂದು ಆಚರಣೆ ಮಾಡುತ್ತಿದ್ದು, ಯೋಗದ ಬಗ್ಗೆ ಎಲ್ಲರಿಗೂ ತಿಳಿವಳಿಕೆ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು. ಜಿಲ್ಲೆಯ ಬೆಟ್ಟದಲ್ಲಿ ಯೋಗ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುವುದು. ಎಲ್ಲರೂ ಜವಾ ಬ್ದಾರಿಯಿಂದ ಭಾಗವಹಿಸೋಣ ಎಂದು ತಿಳಿಸಿದರು.

ಕಟ್ಟುನಿಟ್ಟಾಗಿ ಪಾಲಿಸಿ: ಜಿಪಂ ಸಿಇಒ ಯುಕೇಶ್‌ ಕುಮಾರ್‌ ಮಾತನಾಡಿ, ಪ್ರತಿಯೊಬ್ಬ ಸರ್ಕಾರಿ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಯೋಗದ ಮಹತ್ವವನ್ನು ಜನರಿಗೆ ತಿಳಿಸಬೇಕು. ತಮ್ಮ ಇಲಾಖೆಗಳಿಗೆ ವಹಿಸಿದ ಜವಾಬ್ದಾರಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕೋಲಾರ ತಹಶೀಲ್ದಾರ್‌ ನಾಗರಾಜ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಜಗದೀಶ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್‌ ಕುಮಾರ್‌, ಜಿಲ್ಲಾ ಆಯುಷ್‌ ಅ ಧಿಕಾರಿಗಳಾದ ರಾಘವೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರಪ್ಪ, ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಸಹಾ ಯಕ ನಿರ್ದೇಶಕ ಶಶಿಕಲಾ ಸೇರಿ ಜಿಲ್ಲಾ, ತಾಲೂಕು ಮಟ್ಟದ ಅ ಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next