Advertisement

ರಾಜ್ಯದೆಲ್ಲೆಡೆ ಯೋಗ ದಿನಾಚರಣೆ ಸಂಭ್ರಮ

10:57 PM Jun 21, 2019 | Lakshmi GovindaRaj |

ಬೆಂಗಳೂರು: ಒಂದೆಡೆ ಸೂರ್ಯೋದಯ, ಇನ್ನೊಂದೆಡೆ ಜಾತಿ, ಧರ್ಮ, ವಯಸ್ಸಿನ ಭೇದವಿಲ್ಲದೆ ಆ ಸೂರ್ಯನಿಗೆ ನಮಸ್ಕರಿಸಿದ ಸಾವಿರಾರು ಮಂದಿ. ಬಳಿಕ ಯೋಗದ ವಿವಿಧ ಆಸನಗಳು, ಪ್ರಾಣಾಯಾಮ, ಧ್ಯಾನ… ಇದು 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಮುಂಜಾನೆ ರಾಜ್ಯದೆಲ್ಲೆಡೆ ನಡೆದ ಸಾಮೂಹಿಕ ಯೋಗದ ವೇಳೆ ಕಂಡು ಬಂದ ದೃಶ್ಯಗಳು.

Advertisement

ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್‌ ಇಲಾಖೆ, ರಾಜ್ಯ ಒಲಿಂಪಿಕ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ಆಯೋಜಿಸಿತ್ತು. ಇಲ್ಲಿ ಬೆಂಗಳೂರಿನ ವಿವಿಧ ಯೋಗ ಸಂಸ್ಥೆಗಳ 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

“ಹೃದಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಯೋಗದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್‌.ಪಾಟೀಲ್‌, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್‌ ಹಾಗೂ ಇತರರು ಪಾಲ್ಗೊಂಡಿದ್ದರು. ಜಗತ್ತಿನ ಹಿರಿಯ ವ್ಯಕ್ತಿ ಮತ್ತು ಯೋಗ ಸಾಧಕರಾದ 123 ವರ್ಷದ  ಸ್ವಾಮಿ ಶಿವಾನಂದ ಅವರು ಪ್ರದರ್ಶನದ ಕೇಂದ್ರ ಬಿಂದುವಾಗಿದ್ದರು. ಅರ್ಜಂಟೀನಾದ ಏಕಾರಾ ದೇವಿನಾಥ ಕೂಡ ಪಾಲ್ಗೊಂಡಿದ್ದರು.

ಇದೇ ವೇಳೆ, ಉತ್ತಮ ಆರೋಗ್ಯಕ್ಕಾಗಿ 642211 ಆರೋಗ್ಯ ಸೂತ್ರ ಬಿಡುಗಡೆ ಮಾಡಲಾಯಿತು. ಇದರ ವಿಸ್ತೃತರೂಪ, “ಮನುಷ್ಯ ನಿತ್ಯ 6 ಗಂಟೆ ನಿದ್ರೆ, 4 ಲೀ. ನೀರು, ದಿನಕ್ಕೆ 2 ಸಲ ಆಹಾರ ಸೇವನೆ, 2 ಸಲ ಪ್ರಾರ್ಥನೆ, ಒಂದು ಗಂಟೆ ಯೋಗಾಭ್ಯಾಸ, ವಾರಕ್ಕೆ ಒಂದು ದಿನ ಉಪವಾಸ ಮಾಡಬೇಕು ಎಂಬುದಾಗಿದೆ’.

Advertisement

Udayavani is now on Telegram. Click here to join our channel and stay updated with the latest news.

Next