Advertisement

ಉಭಯ ಜಿಲ್ಲೆಗಳಲ್ಲಿ ವಿಶ್ವ ಯೋಗ ದಿನಾಚರಣೆ

11:20 AM Jun 22, 2019 | Team Udayavani |

ಉಡುಪಿ/ ಮಂಗಳೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಯಲ್ಲಿ ಶುಕ್ರವಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಿಲ್ಲಾ ಪಂಚಾಯತ್‌, ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಸಾಮೂಹಿಕ ಯೋಗ ನಡೆಯಿತು.

Advertisement

ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಆಯುಷ್‌ ಇಲಾಖೆ, ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ, ಅಜ್ಜರಕಾಡು ಮಹಿಳಾ ಕಾಲೇಜು ಸಹಭಾಗಿತ್ವ ವಹಿಸಿದ್ದವು. ಜಿ.ಪಂ. ಅಧ್ಯಕ್ಷ ದಿನಕರ ಬಾಬು ಕಾರ್ಯಕ್ರಮ ಉದ್ಘಾಟಿಸಿದರು. ಯೋಗ ಶಿಕ್ಷಕಿ ಜೋತ್ಸಾ$° ಅವರು ಯೋಗಾಭ್ಯಾಸ ನಡೆಸಿಕೊಟ್ಟರು.

ಉಡುಪಿ ಜಿಲ್ಲಾ ಬಿಜೆಪಿ ಘಟಕ, ಮಣಿಪಾಲದ ಮಾಹೆ ಮತ್ತು ವಿವಿಧ ಸಂಘ-ಸಂಸ್ಥೆಗಳಿಂದಲೂ ಯೋಗ ದಿನ ನಡೆಯಿತು. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀವರ್ಚನ ನೀಡಿದರು. ನೂರಾರು ಮಂದಿ ಪಾಲುಗೊಂಡರು.

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್‌ ಉದ್ಘಾಟಿಸಿ ಇಡೀ ವಿಶ್ವವೇ ಯೋಗಾಭ್ಯಾಸವನ್ನು ಮಾಡುತ್ತಿರುವುದು ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಅಭಿಪ್ರಾಯಪಟ್ಟರು.
ಯೋಗ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಯೋಗರತ್ನ ಗೋಪಾಲ ಕೃಷ್ಣ ದೇಲಂಪಾಡಿ ಯೋಗಾ ಭ್ಯಾಸ ನಡೆಸಿಕೊಟ್ಟರು.

ಯೋಗ ಅನಿವಾರ್ಯ: ಡಾ| ಸಜಿತ್‌
ಕಾಸರಗೋಡು: ಮಾನಸಿಕ ಒತ್ತಡ ಮತ್ತು ಖನ್ನತೆ, ಜೀವನ ಶೈಲಿ, ಅನಾರೋಗ್ಯಗಳ ಬಿಗಿಮುಷ್ಟಿಯಿಂದ ನಮ್ಮನ್ನು ಪಾರು ಮಾಡುವ ನಿಟ್ಟಿನಲ್ಲಿ ಯೋಗ ಈ ಕಾಲಘಟ್ಟದ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅಭಿಪ್ರಾಯಪಟ್ಟರು.

Advertisement

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಜಿಲ್ಲಾ ಆಯುಷ್‌ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಯೋಗ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಕಿನಾನೂರು – ಕರಿಂದಳಂನಲ್ಲಿ ಸ್ಥಾಪಿಸಲಾಗುವ ಕೇಂದ್ರ ಯೋಗ- ಪ್ರಕೃತಿ ಚಿಕಿತ್ಸೆ ಇನ್‌ಸ್ಟಿಟ್ಯೂಟ್‌ ಲೋಕಾ ರ್ಪಣೆ ಮೂಲಕ ಜಿಲ್ಲೆ ಯೋಗದ ಕೇಂದ್ರ ಸ್ಥಾನವಾಗಿ ಮಾರ್ಪಡಲಿದೆ ಎಂದವರು ತಿಳಿಸಿದರು.ಜಿಲ್ಲಾ ಹೋಮಿಯೋ ವೈದ್ಯಾಧಿಕಾರಿ ಡಾ| ಕೆ. ರಾಮಸುಬ್ರಹ್ಮಣ್ಯಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ ಡಾ| ಪಿ.ಆರ್‌. ಸಲೋಜ ಕುಮಾರಿ, ಕಲೆಕ್ಟರೇಟ್‌ ಸ್ಟಾಫ್‌ ಕೌನ್ಸಿಲ್‌ ಅಧ್ಯಕ್ಷ ನಾರಾಯಣನ್‌, ಪದ್ಮೇಶನ್‌, ಕೊಯೊಂಕರ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ| ಟಿ.ಕೆ. ವಿಜಯಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next