ಗಂಗಾವತಿ: ವಿಶ್ವ ಯೋಗ ದಿನದ ನಿಮಿತ್ತ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಕಿಷ್ಕಿಂದ ಅಂಜನಾದ್ರಿಯಲ್ಲಿ ಯೋಗ ಪಟುಗಳ ಕಲರವ ಕಂಡುಬಂತು. ಕಿಷ್ಕಿಂದಾ ಅಂಜನಾದ್ರಿ ಕೆಳಗಡೆ ಇರುವ ಪಂಪಾಪತಿ ಬಂಡೆಯ ಮೇಲೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಯೋಗ ಕಾರ್ಯಕ್ರಮವನ್ನು ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಕೇಂದ್ರ ಹರಿದ್ವಾರದಿಂದ ಆಗಮಿಸಿದ್ದ ಹನುಮಾನ ದೇವರು ಯೋಗಪಟು ಅವರು ನೆರೆದ ಯೋಗಪಟುಗಳಿಗೆ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಪ್ರೋಟಕಾಲ್ ಯೋಗವನ್ನು ಹೇಳಿಕೊಟ್ಟರು.
ಆನೆಗೊಂದಿ ಭಾಗದ ನೂರಾರು ಶಾಲಾ ಮಕ್ಕಳು ಜನಪ್ರತಿನಿಧಿಗಳು ಮತ್ತು ಯೋಗಪಟುಗಳು ಯೋಗದಲ್ಲಿ ಪಾಲ್ಗೊಂಡು ವಿವಿಧ ಯೋಗ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಯೋಗ ಇಡೀ ಜಗತ್ತಿಗೆ ಪರಿಚಯಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗ ನಮ್ಮ ಸನಾತನ ಆರೋಗ್ಯ ಕಾಪಾಡುವಲ್ಲಿ ಇರುವಂತಹ ಮಾರ್ಗವಾಗಿದೆ .ಸನಾತನ ಋುಷಿಮುನಿಗಳು ಯೋಗ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಸದೃಡವಾಗಿ ಇಟ್ಟುಕೊಳ್ಳುತ್ತಿದ್ದರು. ಇದೀಗ ವಿಶ್ವಸಂಸ್ಥೆ ಸಹ ಯೋಗವನ್ನು ಅಂತಾರಾಷ್ಟ್ರೀಯಗೊಳಿಸಿದ್ದು ಪ್ರತಿ ಜೂನ್ 21 ರಂದು ವಿಶ್ವ ಯೋಗ ದಿನ ಎಂದು ನಿಗದಿ ಮಾಡಿದೆ. ಪ್ರತಿಯೊಬ್ಬರು ನಿತ್ಯವೂ ಯೋಗ ಮಾಡಿ ಆರೋಗ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಬಸವಣ್ಣೆಪ್ಪ ತಹಸೀಲ್ದಾರ್ ಯು .ನಾಗರಾಜ, ಜಿಪಂ ಮಾಜಿ ಸದಸ್ಯ ಸಿದ್ದರಾಮಯ್ಯ ಸ್ವಾಮಿ, ಯೋಗಪಟು ಮರಿಸ್ವಾಮಿ ಸಿದ್ದಾಪುರ, ಸೇರಿದಂತೆ ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.