ಚಿಕ್ಕೋಡಿ: ಪ್ರಧಾನಿ ನರೇಂದ್ರ ಮೋದಿ ಭಾರತದ ಯೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ದಿನನಿತ್ಯದಲ್ಲಿ ಯೋಗ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ನಿಪ್ಪಾಣಿ ನಗರದ ಶಿರಪೇವಾಡಿ ಜೊಲ್ಲೆ ಉದ್ಯೋಗ ಸಮೂಹದ ಸಿಬಿಎಸ್ ಸಿ ಶಾಲೆಯ ಮೈದಾನದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯೋಗ ಮನುಷ್ಯನ ಆರೋಗ್ಯದ ಜೊತೆಗೆ ಮನಸ್ಸು ಶಾಂತಿಗೊಳಿಸುತ್ತದೆ ಎಂದರು.
ಪಥಂಜಲಿ ಯೋಗ ಪೀಠದ ಕಾರ್ನಾಟಕ ಅಧ್ಯಕ್ಷ ಬಾಬರಲಾಲ ಆರ್ಯ ಅವರು. ಯೋಗದ ಮಹತ್ವ ತಿಳಿಸಿ ಶಿಬಿರಾರ್ಥಿಗಳಿಗೆ ಯೋಗ ಹೇಳಿಕೊಟ್ಟರು.
ವೇದಿಕೆ ಮೇಲೆ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ.ಡಿಡಿಪಿಐ ಮೋಹನಕುಮಾರ ಹಂಚ್ಯಾಟೆ. ಎಡಿಎಚ್ ಒ ಡಾ.ಎಸ್.ಎಸ್.ಗಡೇದ, ಡಿವೈಎಸ್ ಪಿ ಬಸವರಾಜ ಎಲಿಗಾರ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ. ಬೀರೇಶ್ವರ ಸೊಸಾಯಿಟಿ ಚೇರಮನ್ ಜಯಾನಂದ ಜಾಧವ, ತಹಶೀಲ್ದಾರ ಮೋಹನ ಭಸ್ಮೆ,ಪ್ರಗತಿಪರ ಕೃಷಿಕ ಶಿವಮೂರ್ತಿ ಫಡಲಾಳೆ, ನ್ಯಾಯವಾದಿ ಅಶೋಕ ಹರಗಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ ಮುಂತಾದವರು ಇದ್ದರು.