ತುಮಕೂರು: ವಿಶ್ವ ವ್ಯಾಪಿ ಹರಡಿರುವ ಕೊರೊನಾ ಸೋಂಕುಹಿನ್ನೆಲೆ ಒಟ್ಟಿಗೆ ಸೇರಿ ಯೋಗ ಮಾಡಲು ಸಾಧ್ಯವಾಗದೆ, ಸಾಮಾಜಿಕಅಂತರಕಾಪಾಡಿಕೊಂಡು ಮನೆಗಳಲ್ಲಿಯೇ ತಮ್ಮಕುಟುಂಬದೊಂದಿಗೆ ಆನ್‌ಲೈನ್ ಮೂಲಕ ಸೋಮವಾರ ಕಲ್ಪತರುನಾಡಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.
ಬೆಳಗ್ಗೆ 7ರಿಂದ 7.45 ಗಂಟೆಯವರೆಗೆಸಾರ್ವಜನಿಕರು ತಮ್ಮ ಮನೆಯಲ್ಲಿಯೇಯೋಗಾಭ್ಯಾಸ ಮಾಡುವ ಮೂಲಕಯೋಗ ದಿನಾಚರಣೆ ಆಚರಿಸಲು ಜಿಲ್ಲಾಡಳಿತ ಕರೆ ನೀಡಿದ್ದ ಹಿನ್ನೆಲೆ ಅಧಿಕಾರಿಗಳು,ಜನಪ್ರತಿನಿಧಿಗಳು, ನಾಗರಿಕರು ಎಲ್ಲರೂತಮ್ಮ ತಮ್ಮ ಮನೆಗಳಲ್ಲಿಯೇ ಯೋಗ ಮಾಡಿದರು.
ಕಳೆದ 6 ವರ್ಷಗಳಿಂದ ಆಯುಷ್ ಇಲಾಖೆವತಿಯಿಂದಜೂ.21ರಂದು ಅಂತಾ ರಾಷ್ಟ್ರೀಯಯೋಗದಿನಾಚರಣೆ ಹಮ್ಮಿಕೊಂಡು ಬರಲಾಗುತ್ತಿತ್ತು, ಆದರೆ,ಈಬಾರಿಕೋವಿಡ್ ಹಿನ್ನೆಲೆ 7ನೇ ವರ್ಷದ ಯೋಗ ದಿನ ವನ್ನು ಸಾರ್ವಜನಿಕ ಕಾರ್ಯಕ್ರಮವನ್ನಾಗಿಆಚರಿಸಲು ಸಾಧ್ಯವಾ ಗಿಲ್ಲ, ಸಾರ್ವಜನಿಕರುಕುಟುಂಬದ ಸದಸ್ಯರೊಟ್ಟಿಗೆಮನೆಯಲ್ಲಿಯೇಯೋಗಎನ್ನುವ ಘೋಷವಾಕ್ಯದೊಂದಿಗೆ ಯೋಗಾಭ್ಯಾಸ ಮಾಡಿ 7ನೇವರ್ಷದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.
ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಆಯುಷ್ ಅಧಿಕಾರಿ ಡಾ. ಸಂಜೀವಮೂರ್ತಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್ ಬಾಬು, ಯೋಗತಜ್ಞೆ ಡಾ. ಭವ್ಯಾ, ಹಿರೇಹಳ್ಳಿಯ ಯೋಗಶಿಕ್ಷಕ ರಾಮಕೃಷ್ಣಯ್ಯಮಾರ್ಗ ದರ್ಶನದಲ್ಲಿ ಯೋಗ ಮಾಡಿದರು. ಯೋಗಗುರುಗಳ ಮಾರ್ಗ ದರ್ಶನದಲ್ಲಿ ಜನರು ತಮ್ಮ ಕುಟುಂಬದೊಂದಿಗೆ ಮನೆಯಲ್ಲಿಯೇ ಯೋಗ ಮಾಡಿದರು.