ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ1989ರಿಂದ ಇದುವರೆಗೆ ಸಾವಿರಾರು ಜನರುಯೋಗ ಕಲಿಯಲು ಆದ್ಯ ಪ್ರವರ್ತಕರಾದವರುಕೊಳ್ಳೇಗಾಲದ ಎಚ್.ಎಸ್.ಪಶುಪತಿ ಮತ್ತು ಎಚ್.ಎಸ್.ನಟರಾಜನ್ ಸೋದರರು.ಪ್ರಸಿದ್ಧ ಸಾಕಮ್ಮಾಸ್ ಕಾಫಿಪುಡಿ ಮಾರಾಟ ಸಂಸ್ಥೆಯಮಾಲಿಕರಾಗಿರುವ ಈ ಸೋದರರು, ಉಚಿತವಾಗಿ ಯೋಗಾಭ್ಯಾಸ ಕಲಿಸುವ ಮೂಲಕಸಾವಿರಾರು ಜನರ ಆರೋಗ್ಯವರ್ಧನೆಗೆಕಾರಣರಾಗಿದ್ದಾರೆ.ಎಚ್.ಎಸ್. ಪಶುಪತಿಯವರು 1989ರಿಂದ ಕೊಳ್ಳೇಗಾಲದಲ್ಲಿ ಉಚಿತವಾಗಿ ಯೋಗಕಲಿಸಲುಆರಂಭಿಸಿದರು.
ಕೊಳ್ಳೇಗಾಲದ ನಾರಾಯಣಸ್ವಾಮಿದೇವಾಲಯದ ಸಮೀಪ ಇರುವ ರಾಮಮಂದಿರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಾಖೆಸ್ಥಾಪಿಸಿದರು. ಅಂದಿನಿಂದ ಕೊಳ್ಳೇಗಾಲದ ಜನರಿಗೆಯೋಗಾಭ್ಯಾಸದ ಶಿಕ್ಷಣ ನೀಡಲು ಆರಂಭಿಸಿದರು.ಯೋಗ ಮಂದಿರಕ್ಕೆ ಜಾಗ ದಾನ: ಕೇವಲ ಯೋಗಕಲಿಸುವುದು ಮಾತ್ರವಲ್ಲ, ಯೋಗ ಅಭ್ಯಾಸಕ್ಕಾಗಿ ಪತಂಜಲಿ ಯೋಗ ಮಂದಿರ ನಿರ್ಮಿಸಲು ಕೊಳ್ಳೇಗಾಲದಮಹದೇಶ್ವರ ಕಾಲೇಜಿನ ಬಳಿ 55×75 ಜಾಗವನ್ನು ಉಚಿತವಾಗಿ ನೀಡಿದ ಉದಾರತನ ಇವರದು. ಈ ಜಾಗದಲ್ಲಿವಿವಿಧ ದಾನಿಗಳಿಂದ ಹಣ ಸಂಗ್ರಹಿಸಿ ಶ್ರೀ ಪತಂಜಲಿಯೋಗ ಮಂದಿರ ನಿರ್ಮಿಸಿದರು.
ರಾಜ್ಯದಲ್ಲಿಪತಂಜಲಿ ಸಂಸ್ಥೆಯ ಪ್ರಪ್ರಥಮ ಸ್ವಂತ ಕಟ್ಟಡ ಇದಾಗಿದೆ.ಇಲ್ಲಿ ನಿತ್ಯ ಬೆಳಗ್ಗೆ 2 ಬ್ಯಾಚ್, ಸಂಜೆ ಒಂದು ಬ್ಯಾಚ್‌ನಲ್ಲಿಯೋಗ ಹೇಳಿಕೊಡಲಾಗುತ್ತದೆ.ಕೊಳ್ಳೇಗಾಲದಲ್ಲಿ ಪತಂಜಲಿ ಶಾಖೆ ಸ್ಥಾಪಿಸಿದ್ದುಮಾತ್ರವಲ್ಲ, ಜಿಲ್ಲೆಯ ವಿವಿಧೆಡೆ ಶಾಖೆಗಳನ್ನುವಿಸ್ತರಿಸಿದರು. 2005ರಲ್ಲಿ ಜಿಲ್ಲಾ ಕೇಂದ್ರಚಾಮರಾಜನಗರಕ್ಕೆ ಪ್ರತಿದಿನ ಬೆಳಗಿನ ಜಾವಬಂದು,ಸ್ವತಃಪಶುಪತಿಯವರೇಉಚಿತವಾಗಿಯೋಗಾಭ್ಯಾಸತರಗತಿ ನಡೆಸುತ್ತಿದ್ದರು.
ನಂತರಚಾಮರಾಜನಗರದಲ್ಲಿಪತಂಜಲಿಯೋಗ ಶಿಕ್ಷಣಸಮಿತಿ ಶಾಖೆ ಸ್ಥಾಪಿಸಿದರು.ತದನಂತರ ಮೈಸೂರು ಜಿಲ್ಲೆಯ ತಿ.ನರಸೀಪುರ,ಚಾಮರಾಜನಗರ ಜಿಲ್ಲೆಯ ಹನೂರು, ಅಜ್ಜೀಪುರದಲ್ಲಿ ಶಾಖೆ ಸ್ಥಾಪಿಸಿದರು. ಅವರು ಸ್ಥಾಪಿಸಿದಶಾಖೆಗಳು ನಿರಂತರವಾಗಿ ನಡೆಯುತ್ತಿವೆ. ಅವರಿಂದಯೋಗ ಕಲಿತವರು, ಗುರುಗಳಾಗಿ ಅನೇಕರಿಗೆಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿದ್ದಾರೆ.2010ರವರೆಗೂ ಅವರೇಕಲಿಸುತ್ತಿದ್ದರು.
ಈಗ ಅವರಶಿಷ್ಯರು ಹೇಳಿಕೊಡುತ್ತಿದ್ದಾರೆ.ಚಾಮರಾಜನಗರ, ತಿ. ನರಸೀಪುರ, ಹನೂರು,ಅಜ್ಜೀಪುರದಲ್ಲಿ ಶಾಖೆ ಸ್ಥಾಪಿಸಿದರು. ಎಚ್.ಎಸ್.ಪಶುಪತಿ ಅವರಿಗೆ 82 ವರ್ಷ ಅವರ ತಮ್ಮನಟರಾಜನ್ ಅವರಿಗೆ 79 ವರ್ಷ. ಸೋದರರಿಬ್ಬರೂಈಗಲೂ ಯೋಗ ಮಾಡುತ್ತಾರೆ. ಅವರ ಶಿಷ್ಯರುಯೋಗ ಪ್ರಶಿಕ್ಷಣ ತರಗತಿಗಳನ್ನು ನಡೆಸುತ್ತಿದಾರೆ.ಇಬ್ಬರೂ ಸೋದರರು ಚಟುವಟಿಕೆ ಯಿಂದತರುಣರಂತೆ ತಮ್ಮ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.ಎಚ್.ಎಸ್.ನಟರಾಜನ್‌ಈಗ ಕೊಳ್ಳೇಗಾಲಪತಂಜಲಿ ಶಿಕ್ಷಣ ಸಮಿತಿ ಅಧ್ಯಕ್ಷರಾಗಿದ್ದಾರೆ.
ಕೆ.ಎಸ್. ಬನಶಂಕರ ಆರಾಧ್ಯ