Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾರ್ಥನೆ 1 ನಿಮಿಷ, ಚಲನಕ್ರಿಯೆಗೆ 4 ನಿಮಿಷ ಸೇರಿದಂತೆ ತಾಡಾಸನ, ವೃûಾಸನ, ಪಾದ ಹಸ್ತಾಸನ-1, ಪಾದ ಹಸ್ತಾಸನ-2, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮ ದಂಡಾಸನ, ಭದ್ರಾಸನ, ವಜಾÅಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ ಪ್ರದರ್ಶನಕ್ಕೆ 25 ನಿಮಿಷ ನಿಗದಿಪಡಿಸಲಾಗಿದೆ.
ಬೆಳಗ್ಗೆ 5 ಗಂಟೆಯಿಂದಲೇ ನಗರದ ವಿವಿಧ ಭಾಗಗಳಿಂದ ರೇಸ್‌ಕೋರ್ಸ್‌ಗೆ ನಿರಂತರವಾಗಿ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ನಿಗದಿತ ದರ ನೀಡಿ ಈ ಸೇವೆ ಬಳಸಿಕೊಳ್ಳಬಹುದು.
Related Articles
Advertisement
ಕಾರ್ಯಕ್ರಮ ಮುಗಿದ ನಂತರ ಪ್ರವೇಶಿಸಿದ ದ್ವಾರದಿಂದಲೇ ಹೊರನಡೆದು ಅಲ್ಲಿ ನೀಡುವ ಅಧಿಕೃತ ಗಿನ್ನಿಸ್ ದಾಖಲೆ ಪ್ರಯತ್ನದ ಭಾಗವಹಿಸುವಿಕೆ ಪ್ರಮಾಣ ಪತ್ರ, ಲಘು ಉಪಾಹಾರ ಮತ್ತು ನೀರಿನ ಬಾಟಲಿಗಳನ್ನು ಪಡೆದುಕೊಂಡು ಹೋಗುವಂತೆ ತಿಳಿಸಿದರು.
ಪ್ರವೇಶ ದ್ವಾರಗಳು: ರೇಸ್‌ಕೋರ್ಸ್ ಪ್ರವೇಶಿಸಲು ಒಟ್ಟು ಏಳು ಪ್ರವೇಶದ್ವಾರಗಳಿದ್ದು, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ 16 ಸಾವಿರ ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಭಾಗವಹಿಸುವುದರಿಂದ ಮಹಾರಾಣ ಪ್ರತಾಪ್ ವೃತ್ತದ ಗೇಟ್-1ಅನ್ನು ಅವರಿಗೆ ಮೀಸಲಿಡಲಾಗಿದೆ.
ಗೇಟ್ -2ರಲ್ಲಿ ಯೋಗ ಸಂಸ್ಥೆಗಳು, ಸಿಬಿಎಸ್‌ಇ ಶಾಲೆಗಳು ಹಾಗೂ ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರವೇಶಿಸಬಹುದು. ಗೇಟ್ -3 (ಪಂಟರ್ ಗೇಟ್), ಗೇಟ್-4 ಹಾಗೂ ಗೇಟ್-6ರಲ್ಲಿ ಸಾರ್ವಜನಿಕರು ಪ್ರವೇಶಿಸಬಹುದು. ಗೇಟ್-5ರಲ್ಲಿ (ಲಾರಿ ಟರ್ಮಿನಲ್ ಗೇಟ್) ಡಿಡಿಪಿಐ, ಡಿಡಿಪಿಯು ಅಧೀನದಲ್ಲಿ ಬರುವ ವಿದ್ಯಾರ್ಥಿಗಳು, ಬಿಸಿಎಂ, ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಹಾಗೂ ಮೈಸೂರು ವಿವಿ ವಿದ್ಯಾರ್ಥಿಗಳು ಪ್ರವೇಶಿಸಬಹುದು. ಗೇಟ್-7ರಲ್ಲಿ ಗಣ್ಯರು, ಅಧಿಕಾರಿಗಳು, ಸಂಘಟಕರು ಪ್ರವೇಶಿಸಬಹುದು ಎಂದು ವಿವರಿಸಿದರು.
ಯೋಗ ಪ್ರದರ್ಶಕರು ನೀಡುವ ಸೂಚನೆಯಂತೆ ಎಲ್ಲರೂ ಕಡ್ಡಾಯವಾಗಿ ಯೋಗಾಸನ ಮಾಡಬೇಕು. ಪ್ರದರ್ಶನದಲ್ಲಿ ಭಾಗವಹಿಸುವವರಲ್ಲಿ ಶೇ.10ಕ್ಕಿಂತ ಹೆಚ್ಚು ಜನರು ಯೋಗ ಮಾಡದಿದ್ದರೆ, ಗಿನ್ನಿಸ್ ದಾಖಲೆಗೆ ನಮ್ಮ ಪ್ರಯತ್ನ ತಾಂತ್ರಿಕವಾಗಿ ಮಾನ್ಯವಾಗುವುದಿಲ್ಲ.-ಡಿ.ರಂದೀಪ್, ಜಿಲ್ಲಾಧಿಕಾರಿ ಯೋಗ ದಿನ: ಸಂಚಾರ ಮಾರ್ಪಾಡು
ಮೈಸೂರು: ನಗರದ ರೇಸ್‌ಕೋರ್ಸ್‌ನಲ್ಲಿ ಬುಧವಾರ ನಡೆಯಲಿರುವ 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಅಂದು ಬೆಳಗ್ಗೆ 5 ರಿಂದ 10 ಗಂಟೆವರೆಗೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಯೋಗಪಟುಗಳ ವಾಹನಗಳನ್ನು ಹೊರತುಪಡಿಸಿ, ನಂಜನಗೂಡು ರಸ್ತೆಯಲ್ಲಿ ಜೆಎಸ್‌ಎಸ್ ಕಾಲೇಜು ಜಂಕ್ಷನ್‌ನಿಂದ-ಎಂ.ಆರ್.ಸಿ ವೃತ್ತದವರೆಗೆ. ಲಲಿತಮಹಲ್ ರಸ್ತೆಯಲ್ಲಿ ಕುರುಬರಹಳ್ಳಿ ವೃತ್ತದಿಂದ-ಎಂಆರ್‌ಸಿ ವೃತ್ತದವರೆಗೆ, ಮಿಜಾìರಸ್ತೆಯಲ್ಲಿ ಮಿಜಾìವೃತ್ತದಿಂದ ದಕ್ಷಿಣಕ್ಕೆ ಮೃಗಾಲಯದ ರಸ್ತೆಯಲ್ಲಿ ರೇಸ್‌ಕೋರ್ಸ್ ವೃತ್ತದವರೆಗೆ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗಗಳು: ನಂಜನಗೂಡು ರಸ್ತೆಯಿಂದ ನಗರದ ಕಡೆಗೆ ಪ್ರವೇಶಿಸುವ ವಾಹನಗಳು ನಂಜನಗೂಡು ರಸ್ತೆ ಜೆಎಸ್‌ಎಸ್ ಜಂಕ್ಷನ್ ಬಳಿ ಕಡ್ಡಾಯವಾಗಿ ಎಡಕ್ಕೆ ತಿರುಗಿ ಜೆಎಲ್‌ಬಿ ರಸ್ತೆ ಮೂಲಕ ಮುಂದೆ ಸಾಗಬೇಕು. ಲಲಿತಮಹಲ್ ರಸ್ತೆಯಲ್ಲಿ ಕುರುಬರಹಳ್ಳಿ ವೃತ್ತದಿಂದ ರೇಸ್‌ಕೋರ್ಸ್ ವೃತ್ತದ ಕಡೆಗೆ ಸಾಗುತ್ತಿದ್ದ ವಾಹನಗಳು ಕುರುಬರಹಳ್ಳಿ ವೃತ್ತದಲ್ಲಿ ಬಲಕ್ಕೆ ತಿರುಗಿ ವಾಯುವಿಹಾರ ರಸ್ತೆ ಮೂಲಕ ಎಂಎಂ ರಸ್ತೆ ತಲುಪಿ ಮುಂದೆ ಸಾಗಬೇಕು. ಮಿಜಾ ರಸ್ತೆಯಿಂದ ಮೃಗಾಲಯದ ಕಡೆಗೆ ಸಾಗುತ್ತಿದ್ದ ವಾಹನಗಳು ನೇರವಾಗಿ ಮಿಜಾ ರಸ್ತೆಯಲ್ಲಿ ಸಾಗಿ ನಜರ್‌ಬಾದ್ ವೃತ್ತ ತಲುಪಿ ಮುಂದೆ ಸಾಗಬೇಕು. ನಂಜನಗೂಡು ಕಡೆಗೆ ಸಂಚರಿಸಬೇಕಾದ ಕೆಎಸ್‌ಆರ್‌ಟಿಸಿ ಬಸ್ಸುಗಳು ಹಾರ್ಡಿಂಜ್ ವೃತ್ತ ತಲುಪಿ ಬಿ.ಎನ್. ರಸ್ತೆ-ಪಾಠಶಾಲಾ ವೃತ್ತ-ಚಾಮರಾಜ ಜೋಡಿ ರಸ್ತೆ ಮೂಲಕ ರಾಮಸ್ವಾಮಿ ವೃತ್ತ-ಎಡತಿರುವು-ಜೆಎಲ್‌ಬಿ ರಸ್ತೆ- ನಂಜನಗೂಡು ರಸ್ತೆ ತಲುಪಿ ಮುಂದೆ ಸಾಗಬೇಕು. ಕೊಳ್ಳೇಗಾಲ- ತಿ.ನರಸೀಪುರ ಕಡೆಗೆ ಸಂಚರಿಸಬೇಕಾದ ಕೆಎಸ್‌ಆರ್‌ಟಿಸಿ ಬಸ್ಸುಗಳು ಬಸ್ ನಿಲ್ದಾಣದಿಂದ ಫೈವ್‌ಲೈಟ್ ವೃತ್ತ-ಸರ್ಕಾರಿ ಭವನದ ಉತ್ತರದ್ವಾರ-ಪೊಲೀಸ್ ವೃತ್ತ-ಸ್ಟೇಡಿಯಂ ರಸ್ತೆ-ನಜರ್‌ಬಾದ್.