Advertisement

ಸದೃಢತೆಗೆ ಯೋಗ ಲಾಭಕಾರಿ: ಡಾ|ರಾಜಾ

06:54 AM Jun 22, 2020 | Suhan S |

ಕಲಬುರಗಿ: ಶಾರೀರಿಕ ಸ್ವಾಸ್ಥ್ಯ ದೃಷ್ಟಿಯಿಂದ ಪತಂಜಲಿ ಆಸನ ಹಾಗೂ ಪ್ರಾಣಾಯಾಮ ಬಹಳ ಲಾಭಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಡಾ| ಪಿ. ರಾಜಾ ಹೇಳಿದರು.

Advertisement

ನಗರದ ಬ್ರಹ್ಮಾಕುಮಾರಿಸ್‌ನ ಆದರ್ಶನಗರ ರಾಜಯೋಗ ಕೇಂದ್ರದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಮಾನಸಿಕ ಒತ್ತಡ ನಿರ್ವಹಣೆ ನಿಟ್ಟಿನಲ್ಲಿ ಆಡಳಿತ ವಿಭಾಗದವರಿಗೂ ಯೋಗ ಅತ್ಯವಶ್ಯಕವಾಗಿ ಬೇಕು ಎಂದರು.

ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಮಾತನಾಡಿ, ಭಾರತ ಹಾಗೂ ವಿಶ್ವದಲ್ಲಿ ಮಾನಸಿಕ ಒತ್ತಡದ ಘಟನೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದರು.

ಕರ್ನಾಟಕ ಆಡಳಿತ ಟ್ರಿಬ್ಯುನಲ್‌ ಸದಸ್ಯರಾದ ನ್ಯಾಯಮೂರ್ತಿ ಆರ್‌.ಬಿ. ಸತ್ಯನಾರಾಯಣ ಸಿಂಗ್‌ ಮಾತನಾಡಿದರು. ಬ್ರಹ್ಮಕುಮಾರಿ ವಲಯ ಮುಖ್ಯಸ್ಥರಾದ ರಾಜಯೋಗಿನಿ ಬಿ.ಕೆ. ವಿಜಯಾ ಪತಂಜಲಿ ಯೋಗಪದ್ಧತಿಯಲ್ಲಿರುವ ಧ್ಯಾನದ ಕುರಿತು ವಿವರಿಸಿದರು. ರಾಜಯೋಗಿ ಬಿ.ಕೆ ಪ್ರೇಮಣ್ಣ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ದಿನೇಶಕುಮಾರ ಆಸನ-ಪ್ರಾಣಾಯಾಮದ ಪ್ರಾತ್ಯಕ್ಷಿಕತೆ ಪ್ರದರ್ಶಿಸಿದರು. ಶಿವಲೀಲಾ ನಿರೂಪಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next