Advertisement

ಯೋಗ ಗೀತೆ ಲೋಕಾರ್ಪಣೆ

10:57 PM Jun 21, 2019 | Lakshmi GovindaRaj |

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇದೇ ಮೊದಲ ಬಾರಿಗೆ “ಜಯತೀ ಯೋಗ ವಿದ್ಯಾ’ ಎಂಬ ರಾಷ್ಟ್ರೀಯ ಯೋಗ ಗೀತೆಯನ್ನು ಲೋಕಾರ್ಪಣೆ ಮಾಡಲಾಗಿದ್ದು, ಮೈಸೂರಿನಲ್ಲಿಯೂ ಗೀತೆಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಪ್ರಪಂಚದ 2,000ಕ್ಕೂ ಹೆಚ್ಚು ವೇದಿಕೆಗಳಲ್ಲಿ ಏಕಕಾಲಕ್ಕೆ ಯೋಗ ಗೀತೆ ಮಾಡಿ ಧನ್ಯತೆ ಮೆರೆಯಲಾಯಿತು.

Advertisement

ಈ ಗೀತೆಯನ್ನು ಖ್ಯಾತ ವಯೋಲಿನ್‌ ವಾದಕ ಮೈಸೂರು ಮಂಜುನಾಥ್‌ ಸಂಯೋಜಿಸಿದ್ದು, ಅಂತಾರಾಷ್ಟ್ರೀಯ ಗಾಯಕರಾದ ವಿಜಯ ಪ್ರಕಾಶ್‌, ಬಾಂಬೆ ಜಯಶ್ರೀ, ಪಂಡಿತ್‌ ಸಂಜೀವ್‌ ಅಭ್ಯಂಕರ್‌ ಕಂಠದಾನ ಮಾಡಿದ್ದಾರೆ. ಪಂಡಿತ್‌ ರೋನು ಮಜುಂದಾರ್‌ ಬಾನ್ಸುರಿ, ಮೈಸೂರು ಮಂಜುನಾಥ್‌ ಪಿಟೀಲು, ರಫಿಕ್‌ ಖಾನ್‌ ಸಿತಾರ್‌ ನುಡಿಸಿ ಗೀತೆಗೆ ರಂಗು ತಂದಿದ್ದಾರೆ.

ಇವರೊಟ್ಟಿಗೆ ಜಪಾನ್‌, ಕೆನಡಾ, ಅಮೆರಿಕ, ನೆದರ್‌ಲ್ಯಾಂಡ್‌ ಸೇರಿ ವಿವಿಧ ದೇಶಗಳ ಶ್ರೇಷ್ಠ ಕಲಾವಿದರಿಂದ ಹಿನ್ನೆಲೆ ಸಂಗೀತವೂ ಮೇಳೈಸಿದೆ. ಯೋಗ ಗೀತೆಗಾಗಿಯೇ ಹೊಸ ರಾಗ ಅನ್ವೇಷಣೆಯಾಗಿದ್ದು, ಹೊಸ ರಾಗಕ್ಕೆ ದೇಶದ ಮೊದಲ ಚಕ್ರವರ್ತಿ “ಭರತನ’ ಹೆಸರಿಟ್ಟು ಸಂಗೀತಜ್ಞರು ಕೃತಾರ್ಥರಾಗಿದ್ದಾರೆ.

ಇಡೀ ಆಡಿಯೋ 5 ನಿಮಿಷದ ಅವಧಿಯದ್ದಾಗಿದ್ದು, ಮುಂದಿನ ದಿನಗಳಲ್ಲಿ ವಿಡಿಯೋ ಸಾಂಗ್‌ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಇದೇ ವೇಳೆ ಯೋಗಪಟುಗಳಿಗೆ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next