ಕುದ್ರೋಳಿ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಾಮೂಹಿಕ ಯೋಗಾಸನ ಸಹಿತ ಹನುಮಾನ್ ನಮಸ್ಕಾರ ಹಾಗೂ ಹನುಮಾನ್ ಚಾಲೀಸಾ ಪಠಣ ಹಾಗೂ ಅರ್ಚಣೆ ಕಾರ್ಯಕ್ರಮ ಕಾರ್ಯಕ್ರಮ ಎಸ್.ಪಿ.ವೈ.ಎಸ್.ಎಸ್ ಯೋಗ ಸಮಿತಿಯ ವತಿಯಿಂದ ರವಿವಾರ ಮುಂಜಾನೆ ನಡೆಯಿತು.
ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಎಸ್.ಪಿ.ವೈ.ಎಸ್.ಎಸ್ ಜಿಲ್ಲಾ ಸಂಚಾಲಕರಾದ ಅಶೋಕ್ ಕುಮಾರ್ ಜೈನ್, ಪ್ರಾಂತ ಸಂಚಾಲಕರಾದ ರವೀಶ್ ಕುಮಾರ್, ವಲಯ ಸಂಚಾಲಕರಾದ ಗೋಕುಲ್‌ನಾಥ್ ಶೆಣೈ, ರಮಣಿ ಶೆಟ್ಟಿ ಮೊದಲಾಮುಂತಾದವರು ಉಪಸ್ಥಿತರಿದ್ದರು.
ಮುಂಜಾನೆ 4.45ರಿಂದ 7 ಗಂಟೆಯವರೆಗೆ ಕಾರ್ಯಕ್ರಮ ನಡೆಯಿತು. ಹನುಮಾನ್ ನಮಸ್ಕಾರ, ಹನುಮಾನ್ ಚಾಲಿಸ ಮಹತ್ವವನ್ನು ಕಾವೂರು ನಗರ ಸಂಚಾಲಕರಾದ ಕನಕ ಅಮೀನ್ ಅವರು ತಿಳಿಸಿದರು. ಸಾವಿರಾರು ಯೋಗಪಟುಗಳು ಸಾರ್ವ ಜನಿಕರೊಂದಿಗೆ ಭಕ್ತಿಭಾವದಿಂದ ದೇವಾಲಯದ ಸುತ್ತಲೂ ಶಿಸ್ತುಬದ್ಧವಾಗಿ ಸಾಲಾಗಿ ಕುಳಿತು ಹನುಮಾನ್ ಚಾಲಿಸ ಪಠಿಸಿದರು.
ಪ್ರಾಂತ ಸಂಚಾಲಕರಾದ ಹರೀಶ್ ಕೋಟ್ಯಾನ್, ಕ್ಷೇತ್ರದ ಕಾರ್ಯದರ್ಶಿ ಮಾಧವ, ವ್ಯವಸ್ಥಾಪಕ ವಿನೀತ್, ಜಿಲ್ಲಾ ಸಹಸಂಚಾಲಕರಾದ ಲಕ್ಷ್ಮೀನಾರಾಯಣ, ಪ್ರತಾಪ್ ರಾವ್, ಜಿಲ್ಲಾ ಪ್ರಮುಖರಾದ ನಾರಾಯಣ ಶಬರಾಯ, ಚಂದ್ರಶೇಖರ, ನಗರ ಪ್ರಮುಖರಾದ ಹರೀಶ್ ಅಂಚನ್, ಆನಂದ ಕುಂಟಿನಿ, ಪ್ರಶಾಂತ್ ಈಶ್ವರ್ ಕೊಟ್ಟಾರಿ ಉಮೇಶ್, ವಸಂತ, ಪ್ರಸಾದ್ ಸಿದ್ದಕಟ್ಟೆ ಲೋಕೇಶ್ ಪೊಳಲಿ, ರೇಖಾ, ಜಯಂತಿ ಕಟೀಲು, ಗೀತಾ ಶೆಟ್ಟಿ, ಜಯರಾಮ ಜೆಂಬುಗುಡ್ಡೆ ಪ್ರಭಾವತಿ ಭಾಗವಹಿಸಿದ್ದರು.
ದಯಾನಂದ ಕಟೀಲು ಹಾಗೂ ತಂಡದವರು ಹನುಮಾನ್ ಚಾಲಿಸ ಪಠಣ ಮಾಡಿಸಿದರು. ಚೈತನ್ಯ ನಾಯಕ್ ನಿರೂಪಿಸಿದರು. ಕದ್ರಿ, ಕಂಕನಾಡಿ, ಉಳ್ಳಾಲ, ಕಾವೂರು, ಸುರತ್ಕಲ್, ಪೊಳಲಿ, ಬಿ.ಸಿ.ರೋಡ್, ಕಲ್ಲಡ್ಕದಿಂದ ಯೋಗಪಟುಗಳು ಭಾಗವಹಿಸಿದ್ದರು.