Advertisement
ಶಿವಾನಂದ ಜನಿವಾರ ಧರಿಸುವ ಪಂಚಾಳ ಸಮಾಜಕ್ಕೆ ಸೇರಿದ್ದು ಸಂಪ್ರದಾಯದಂತೆ ಶವವನ್ನು ಚಿತೆಗೆ ಏರಿಸಬೇಕಿತ್ತು.ಆದರೆ ಊರಿನ ಹಿರಿಯರು ಮತ್ತು ದೈವದವರ ಸಲಹೆಗೆ ಗೌರವ ನೀಡಿದ ಕುಟುಂಬಸ್ಥರು ಅಪಾರ ದುಃಖದ ನಡುವೆಯೂ
ಸ್ಥಳೀಯ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ಪಾರ್ಥೀವ ಶರೀರ ಸಮಾಧಿಗೆ ಒಪ್ಪಿಗೆ ನೀಡಿ ಮಗನ ಸಾವಿನಲ್ಲೂ
ಸಾರ್ಥಕತೆ ಕಂಡುಕೊಂಡರು.
ಹಾಗೂ ಏಳು ಪೊಲೀಸರ ತಂಡ ಪ್ರತ್ಯೇಕವಾಗಿ ತಲಾ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾಸಿ ಬ್ಯೂಗಲ್ ನುಡಿಸಿ ಗಾರ್ಡ್ ಆಫ್ ಆನರ್ ಸಲ್ಲಿಸಿದರು. ಈ ವೇಳೆ ಊರ ಗೌಡರ, ನಾಡಗೌಡರ ಮನೆತನಕ್ಕೆ ಸೀಮಿತವಾಗಿದ್ದ ಬಿಲ್ಲಿದಾರ (ತಳವಾರ, ವಾಲೀಕಾರ) 12 ಜನರ ತಂಡ ಖಡ್ಗ, ಕೊಡಲಿ, ಬಂದೂಕು ಸಮೇತ ಆಗಮಿಸಿ ಅಂತಿಮ ನಮನ ಸಲ್ಲಿಸಿ ವಿಶೇಷತೆ ತೋರಿದರು. ಊರ ಗೌಡರಾದ ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲರು ಸಿಂಗಲ್ ಬ್ಯಾರಲ್ ಬಂದೂಕಿನಿಂದ ಒಂದು ಸುತ್ತು ಗುಂಡು ಹಾರಿಸಿ ಸಂಪ್ರದಾಯ ಪಾಲಿಸಿದರು.
Related Articles
ಪವಾರ ಅಂತಿಮ ನಮನ ಸಲ್ಲಿಸಿದರು. ಊರ ಗೌಡರು, ನಾಡಗೌಡರ ಪರವಾಗಿ ಮಲ್ಲಿಕಾರ್ಜುನ (ಚಿನ್ನು) ನಾಡಗೌಡ,
ಅಪ್ಪುಧಣಿ ನಾಡಗೌಡ, ಮಾಜಿ ಸೈನಿಕರ ಪರವಾಗಿ ನಾನಪ್ಪ ನಾಯಕ ಮತ್ತಿತರರು ಗೌರವ ಸಲ್ಲಿಸಿದರು.
Advertisement
ಶಡ್ಲಗೇರಿಯ ವಿಶ್ವಕರ್ಮ ಏಕದಂಡಗಿ ಮಠದ ಸೂರ್ಯನಾರಾಯಣ ಸ್ವಾಮೀಜಿ, ಸಾಸನೂರಿನ ಶ್ರೀಶೈಲ ಸ್ವಾಮೀಜಿ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್, ಸೋಮನಗೌಡ ಪಾಟೀಲ ನಡಹಳ್ಳಿ, ಶಾಂತಗೌಡ ಪಾಟೀಲ ನಡಹಳ್ಳಿ, ಡಾ| ಪರಶುರಾಮ ಪವಾರ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಡಾ| ಬಸವರಾಜ ಅಸ್ಕಿ, ಶ್ರೀಶೈಲ ಮೇಟಿ ಸೇರಿದಂತೆ ಹಲವು ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.
ಶಿವಾನಂದನ ತಂದೆ ಜಗನ್ನಾಥ, ತಾಯಿ ರತ್ನಾಬಾಯಿ, ಸಹೋದರರಾದ ಕಾಶಪ್ಪ, ಮೌನೇಶ, ಶ್ರೀಶೈಲ, ಸಹೋದರಿ ಶಶಿಕಲಾ, ಪತ್ನಿ ಪುಷ್ಪಾ (ವೀಣಾ), ಬಡಿಗೇರ ಬಂಧುಗಳ ಗೋಳಾಟ ಎಲ್ಲರ ಕಣ್ಣಾಲಿಗಳಲ್ಲಿ ನೀರು ಬರುವಂತೆ ಮಾಡಿತ್ತು.
ಪಾರ್ಥೀವ ಶರೀರವನ್ನು ಸಮಾಧಿ ಮಾಡುವುದಕ್ಕೂ ಮೊದಲು ಶವಪೆಟ್ಟಿಗೆ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ತಾಯಿ, ಪತ್ನಿಗೆ ಹಸ್ತಾಂತರಿಸಲಾಯಿತು.
ಯೋಧರು ತ್ಯಾಗ-ಬಲಿದಾನದ ಸಂಕೇತಮುದ್ದೇಬಿಹಾಳ: ವೀರಯೋಧರೆಲ್ಲ ಪ್ರೀತಿ, ತ್ಯಾಗ, ಬಲಿದಾನದ ಸಂಕೇತವಾಗಿರುತ್ತಾರೆ. ಬಸರಕೋಡದ ಬಿಎಸ್‌ಎಫ್ ಯೋಧ ಶಿವಾನಂದ ಬಡಿಗೇರ ಕೂಡ ಅಂಥವರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಸ್ವಾಮೀಜಿ ಹೇಳಿದರು. ಪಟ್ಟಣದ ಸೈನಿಕ ಮೈದಾನದಲ್ಲಿನ ಕಾರ್ಗಿಲ್ ವೀರಯೋಧರ ಸ್ಮಾರಕದಲ್ಲಿ ಬುಧವಾರ ಏರ್ಪಡಿಸಿದ್ದ ಶಿವಾನಂದನ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಶಡ್ಲಗೇರಿ ವಿಶ್ವಕರ್ಮ ಏಕದಂಡಗಿ ಮಠದ ಸೂರ್ಯನಾರಾಯಣ ಸ್ವಾಮೀಜಿ
ಮಾತನಾಡಿ,ಯೋಧ ಶಿವಾನಂದನ ತ್ಯಾಗ ಯಾರೂ ಮರೆಯುವಂತಾಗಬಾರದು ಎಂದರು. ಬಸವರಾಜ ನಂದಿಕೇಶ್ವರಮಠ, ಶಾಂತಗೌಡ ಪಾಟೀಲ ನಡಹಳ್ಳಿ, ವೈ.ಎಚ್. ವಿಜಯಕರ್, ನಾನಪ್ಪ ನಾಯಕ, ಮಾಜಿ ಸೈನಿಕರ ಸಂಘದ ಪದಾಧಿಕಾರಿ ಹಿರೇಮಠ ಯೋಧನ ಸ್ಮರಿಸಿ ಮಾತನಾಡಿದರು. ಡಾ| ಪರಶುರಾಮ ಪವಾರ, ಕಿರಣಗೌಡ ಪಾಟೀಲ, ಸದ್ದಾಂ ಕುಂಟೋಜಿ, ಸೋಮನಗೌಡ ಪಾಟೀಲ ನಡಹಳ್ಳಿ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಚಿನ್ನು ನಾಡಗೌಡ, ಬಸವರಾಜ ಗುಳಬಾಳ, ರಾಜಶೇಖರ ಹೊಳಿ, ಶ್ರೀಕಾಂತ ಹಿರೇಮಠ, ಮಹಾಂತೇಶ
ಬೂದಿಹಾಳಮಠ, ಪುನೀತ್ ಹಿಪ್ಪರಗಿ, ಸಂಜು ಬಾಗೇವಾಡಿ, ರಾಜಶೇಖರ ಮ್ಯಾಗೇರಿ, ಶಿವನಗೌಡ ಬಿರಾದಾರ, ಚಂದ್ರಶೇಖರ ಕಲಾಲ ಇದ್ದರು. ಸ್ವಾಗತ-ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಹುನಗುಂದ ಮಾರ್ಗವಾಗಿ ಬೆಂಗಳೂರಿನಿಂದ ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿದ ಯೋಧನ ಪಾರ್ಥೀವ ಶರೀರ ಹೊತ್ತ ಮಿಲಿಟರಿ ವಾಹನಕ್ಕೆ ಹುನಗುಂದ ತಾಲೂಕಿನ ತಾಲೂಕಿನ ಗಡಿಭಾಗ ಧನ್ನೂರ
ಗ್ರಾಮದಲ್ಲಿ, ಮುದ್ದೇಬಿಹಾಳ ತಾಲೂಕಿನ ಗಡಿಭಾಗ ತಂಗಡಗಿಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ಗ್ರಾಮಸ್ಥರು ಶವಪೆಟ್ಟಿಗೆಗೆ ಹೂಮಾಲೆ ಹಾಕಿ ಶ್ರದ್ದಾಜಲಿ ಅರ್ಪಿಸಿದರು.