Advertisement
ಚಾರಣವೆಂದರೆ ಬರೀ ದುಡ್ಡಿದ್ದರೆ ಸಾಲದು, ಸೂಕ್ತ ಮಾರ್ಗದರ್ಶನವೂ ಬೇಕು. ಇವೆರಡನ್ನೂ ಪೂರೈಸುವ ಏಜೆನ್ಸಿಗಳೂ ಇವೆ. ಅವು ತುಸು ದುಬಾರಿ ಎನಿಸಲೂ ಬಹುದು ಕೆಲವರಿಗೆ. ಸೌಲಭ್ಯ ಆಧರಿಸಿ ಆಯ್ಕೆ ಮಾಡಿ ಕೊಳ್ಳುವ ಜನರೂ ಹಲವರಿದ್ದಾರೆ.
Related Articles
ಸಂಸ್ಥೆ ಹಮ್ಮಿಕೊಳ್ಳುವ ಹತ್ತಾರು ಪ್ರವಾಸ ಸಂಬಂಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳ ಬಹು ದು. ದೇಶದ 150ಕ್ಕೂ ಹೆಚ್ಚು ಪ್ರದೇಶ ಗಳಲ್ಲಿ, ಯೂತ್ ಹಾಸ್ಟೆಲ್‌ಗಳಲ್ಲಿ ರಿಯಾ ಯಿತಿ ವಸತಿ ಸೌಕರ್ಯ ಪಡೆಯ ಬಹುದು. ಈ ಸದಸ್ಯತ್ವ ಅಂತಾರಾಷ್ಟ್ರೀಯ ಕಾರ್ಡ್ ಆಗಿದ್ದು, ಜಗತ್ತಿನಾದ್ಯನ ವಿವಿಧೆಡೆ ಮಾನ್ಯ. ಯಾವುದೇ ಸ್ಪೆಷಲ್ ಆಫರ್‌ಗಳಲ್ಲಿ ಸದ ಸ್ಯರಿಗೆ ಆದ್ಯತೆ. ಇದರ ಸದಸ್ಯರಿಗೆ ಕ್ಯಾಂಪ್ ಲೀಡರ್ ಆಗುವ ಅವಕಾಶವಿದೆ. ಟ್ರೆಕ್ಕಿಂಗ್ ಪ್ಯಾಕೇಜ್‌ಗಳಲ್ಲಿ ರಿಯಾ ಯಿತಿ ಇದೆ. ಫ್ಯಾಮಿಲಿ ಅಥವಾ ಒಬ್ಬರೇ ಹೋಗ ಬಹುದು.
Advertisement
YHAI ಸದಸ್ಯರಾಗುವುದು ಎಂದರೆ ರಿಯಾಯಿತಿ ಸೌಕರ್ಯಗಳನ್ನು ಪಡೆಯು ವುದಕ್ಕಿಂತ ಹೆಚ್ಚಾಗಿ ಅನುಭವಿ ಸಂಘಟಕರು ನಡೆಸುವ ಈ ಸಂಸ್ಥೆಯ ಮೂಲಕ ರಜೆಯನ್ನು ವಿಭಿನ್ನವಾಗಿ ಕುಟುಂಬದವರೊಂದಿಗೆ ಅನು ಭವಿಸಲು ಅವಕಾಶ ನೀಡುತ್ತದೆ.
YHAI ಸಂಸ್ಥೆಯ ಇತಿಹಾಸ20ನೇ ಶತಮಾನದಲ್ಲಿ ಜರ್ಮನಿಯಲ್ಲಿ ಇದು ಅಸ್ತಿತ್ವಕ್ಕೆ ಬಂದಿತು. ಮೊದಲ ಹಾಸ್ಟೆಲ್ ಆರಂಭವಾದದ್ದು 1912 ರಲ್ಲಿ. 1945 ರಲ್ಲಿ ಶಿಮ್ಲಾದಲ್ಲಿ ಹಾಸ್ಟೆಲ್ ಆರಂಭಿಸುವುದ ರೊಂದಿಗೆ ಭಾರತಕ್ಕೂ ಕಾಲಿಟ್ಟಿತು. 1949ರಲ್ಲಿ ಮೈಸೂರಿನಲ್ಲೂ ಈ ಪರಿ ಕಲ್ಪನೆ ಅರಳಿತು. 1956ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವೆಡೆ ತನ್ನ ಚಟುವಟಿಕೆಯನ್ನು ವಿಸ್ತರಿಸಿತು. 1. ವೈಯಕ್ತಿಕ -(ಆನ್‌ಲೈನ್ ಮೂಲಕ ವೈಯಕ್ತಿಕ ಸದಸ್ಯತ್ವಕ್ಕೆ 10ರಿಂದ 18 ವರ್ಷದೊಳಗಿನವರಿಗೆ )ಒಂದು ವರ್ಷಕ್ಕೆ 100 ರೂ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಒಂದು ವರ್ಷಕ್ಕೆ 250 ರೂ., 2 ವರ್ಷಕ್ಕೆ ಆದರೆ 350 ರೂ. ಪೂರ್ಣ ಸದಸ್ಯತ್ವಕ್ಕೆ ಗೆ 2,700 ರೂ.
2. YHAI- IYTC ಕೋ ಬ್ರಾಂಡೆಡ್ ಸದಸ್ಯತ್ವ ಇದು ಒಂದು ವರ್ಷದ ಸದಸ್ಯತ್ವವಾಗಿದ್ದು, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ಸದಸ್ಯತ್ವದೊಂದಿಗೆ ಇಂಟರ್‌ನ್ಯಾಶನಲ್ ಯೂತ್ ಟ್ರಾವೆಲ್ ಕಾರ್ಡ್‌ನ ಸದಸ್ಯತ್ವವನ್ನೂ ಪಡೆಯಬಹುದು. ಇದರಲ್ಲಿ ಹೆಚ್ಚು ರಿಯಾಯತಿಗೆ ಅವಕಾಶವಿದೆ. ಅಷ್ಟೇ ಅಲ್ಲದೆ ಈ ಸದಸ್ಯತ್ವವನ್ನು ಯುನೆಸ್ಕೋ ಅನುಮೋದಿಸಿದೆ. ಈ ಸದಸ್ಯತ್ವಕ್ಕೆ 500 ರೂ. ಇದೆ.
3.ಪಿಯುಸಿ ವರೆಗೆ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ 600 ರೂ. ಇದೆ.