Advertisement
ಸಂಸದ ನಳಿನ್ ಕುಮಾರ್ ಕಟೀಲು ಅವರೊಂದಿಗೆ ಬಿಜೆಪಿ ಸದಸ್ಯರಾಗಿರುವ ಜಿ.ಪಂ., ನಗರಸಭೆ, ಗ್ರಾ.ಪಂ., ಮನಪಾ ಪ್ರತಿನಿಧಿಗಳು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ.
ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘವೂ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಜಿಲ್ಲೆಯಲ್ಲಿರುವ 3 ಲಕ್ಷ ಕುಲಾಲ, ಕುಂಬಾರ, ಮೂಲ್ಯ, ಹಾಂಡ ಸಮುದಾಯದವರು ಉಪವಾಸ ಸತ್ಯಾಗ್ರಹ ಬೆಂಬಲಿಸಲಿದ್ದಾರೆ. ನೇತ್ರಾವತಿ ಪರ ಹೋರಾಟದಲ್ಲಿ ಆರಂಭದಿಂದಲೂ ತೊಡಗಿಸಿಕೊಂಡಿರುವ ನಾರಾಯಣ ಬಂಗೇರ ಅವಧಿರೊಂದಿಗೆ ಸಮುದಾಯದ ಹಲವು ಮಂದಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ಕುಲಾಲ ಕುಂಬಾರರ ಯುವ ವೇದಿಕೆ ಸ್ಥಾಪಕಾಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್ ಉಳೂ¤ರು ತಿಳಿಸಿದ್ದಾರೆ. ಜೀವನದಿ ನೇತ್ರಾವತಿ ಉಳಿಸಿಕೊಳ್ಳಲು ಕನ್ನಡ ಕಟ್ಟೆ ಹಾಗೂ ಕ.ರ.ವೇ. ಕರಾವಳಿ ಸಂಘಟನೆಯೂ ಭಾಗವಹಿಸಲಿದೆ ಎಂದು ಅಧ್ಯಕ್ಷ ಜಗದೀಶ್ ಬಿಜೈ ತಿಳಿಸಿದ್ದಾರೆ.