Advertisement

ಎತ್ತಿನಹೊಳೆ: ಪರಿಸರ ಸಚಿವಾಲಯಕ್ಕೆ ಹಸಿರುಪೀಠ ಪ್ರಶ್ನೆ

12:15 AM Apr 28, 2017 | Team Udayavani |

ಹೊಸದಿಲ್ಲಿ: ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನ ಸೇರಿದಂತೆ ಎತ್ತಿನಹೊಳೆ ಯೋಜನೆಯನ್ನು ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಮಾಡುವುದು ಸರಿಯೇ ಎಂದು ಎನ್‌ಜಿಟಿ ಕೇಂದ್ರ ಪರಿಸರ ಸಚಿವಾಲಯವನ್ನು ಪ್ರಶ್ನಿಸಿದೆ. ಎತ್ತಿನಹೊಳೆ ಯೋಜನೆ ವಿರೋಧಿಸಿ ಮಂಗಳೂರಿನ ಪುರುಷೋತ್ತಮ ಚಿತ್ರಾಪುರ ಸಲ್ಲಿಸಿದ ಅರ್ಜಿಯ ವಿಚಾರಣೆ ಗುರುವಾರ ದಿಲ್ಲಿಯ ರಾಷ್ಟ್ರೀಯ ಹಸಿರು ಪೀಠದಲ್ಲಿ ನಡೆಯಿತು. ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳ ನಿರ್ಣಯಕ್ಕೆ ಮುನ್ನ ಯಾವ ರೀತಿಯ ಕಟ್ಟುಪಾಡು, ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯವನ್ನು ಅಧ್ಯಯನ ನಡೆಸಲಾಗಿದೆಯೇ. ಈ ನಿಟ್ಟಿನಲ್ಲಿ ಪರಿಸರ ಹಾಗೂ ಅರಣ್ಯ ಸಚಿವಾಲಯದ ನಿಲುವೇನು. ಎತ್ತಿನಹೊಳೆಯಂತಹ ಯೋಜನೆಗಳನ್ನು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಡೆಸಬಹುದೇ ಎಂಬ ಕುರಿತು ಕೂಡ ಸಚಿವಾಲಯ ತನ್ನ ಅಭಿಪ್ರಾಯ ಸೂಚಿಸಬೇಕು ಎಂದು ಪೀಠ ಹೇಳಿತು. ಮೇ 29ಕ್ಕೆ ಮುಂದಿನ ವಿಚಾರಣಾ ದಿನ ನಿಗದಿ ಮಾಡಿದ್ದು ಈ ಸಂದರ್ಭ ಸಚಿವಾಲಯ ತನ್ನ ನಿಲುವು ಹೇಳಬೇಕೆಂದು ಸೂಚಿಸಿತು.

Advertisement

ಈ ಸಂದರ್ಭ ನೀರಾವರಿ ನಿಗಮದ ವಕೀಲ ನವೀನ್‌ ಕುಮಾರ್‌ ವಾದ ಮಂಡಿಸಿ ಅವಧಿ ಬಾಧ್ಯತೆ ಮೇರೆಗೆ ಅರ್ಜಿಯ ವಿಚಾರಣೆಗೆ ಇರುವ ಅಡೆತಡೆ ಹಾಗೂ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳ ವಿಚಾರಣೆ ಏಕಕಾಲದಲ್ಲಿ ನಡೆಸುವ ಕುರಿತು ಪೀಠದ ಗಮನ ಸೆಳೆದರು. ಆದರೆ ಎರಡೂ ಕಡೆಯವರ ವಾದ ಆಲಿಸಿಯೇ ಪ್ರತ್ಯೇಕ ವಿಚಾರಣೆ ನಡೆಸಲಾಗುತ್ತಿದೆ. ಇದು ಹೀಗೆಯೇ ಪ್ರತ್ಯೇಕವಾಗಿಯೇ ಮುಂದುವರಿಯಲಿದೆ ಎಂದು ಪೀಠ ಸ್ಪಷ್ಟಪಡಿಸಿತು. ಅರ್ಜಿದಾರರ ಪರ ಎಂ.ಸಿ. ಮೆಹ್ತಾ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next