ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ ಚಿಕ್ಕಬಳ್ಳಾಪುರ ತಾಲ್ಲೂಕಿನ ಸೂಸೆಪಾಳ್ಯಾ ಬಳಿ ಪೋಲಿಸರ ಸರ್ಪಗಾವಲಿನಲ್ಲಿ ಜಿಲ್ಲಾಡಳಿತ ಯೇಸು ಶಿಲುಬೆ ತೆರವುಗೊಳಿಸಿದೆ.
ಚಿಕ್ಕಬಳ್ಳಾಪುರ ಎ.ಸಿ. ರಘುನಂದನ್ ನೇತೃತ್ವದಲ್ಲಿ ಪ್ರಭಾರ ತಹಶೀಲ್ದಾರ್ ತುಳಸಿ ಮತ್ತು ಅವರ ತಂಡ ಪೋಲಿಸರ ಸಹಯೋಗದೊಂದಿಗೆ ತೆರವು ಕಾರ್ಯಚರಣೆ ನಡೆಸಿದ್ದಾರೆ.
ಅಕ್ರಮವಾಗಿ ಸರ್ಕಾರಿ ಜಮೀನಿನಲ್ಲಿ ಯೇಸುವಿನ ಶಿಲುಬೆ ಪ್ರತಿಷ್ಠಾನ ಮಾಡಿದ್ದಾರೆ ಎಂಬ ವಿಚಾರ ಹೈಕೋರ್ಟ್ ಮೆಟ್ಟಲೇರಿತು ಇದೀಗ ಹೈಕೋರ್ಟ್ ನಿರ್ದೇಶನ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಶಿಲುಬೆಯನ್ನು ತೆರವು ಗೊಳಿಸಿದೆ.
ತೆರವು ಕಾರ್ಯಾಚರಣೆಗೆ ಕ್ರೈಸ್ತ ಸಮುದಾಯ ವಿರೋಧ ವ್ಯಕ್ತಪಡಿಸಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯ ಹೈಕೋರ್ಟ್ ಆದೇಶದಂತೆ ಸರ್ಕಾರಿ ಜಮೀನಿನಲ್ಲಿ ಪ್ರತಿಷ್ಠಾಪನೆ ಮಾಡಿದ್ಧ ಶಿಲುಬೆಯನ್ನು ತೆರವುಗೊಳಿಸಿದ್ದೇವೆ ಇದರ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸುತ್ತೇವೆ ಎಂದು ಎಸಿ ರಘುನಂದನ್ ಉದಯವಾಣಿಗೆ ತಿಳಿಸಿದ್ದಾರೆ.