Advertisement
ಜೆಡಿಎಸ್‌ನಲ್ಲಂತೂ ಸದ್ಯಕ್ಕೆ ಈ “ಹುಡುಕಾಟ’ದ ಚಿಂತೆ ಇಲ್ಲ. ಈಗಾಗಲೇ ಅಭ್ಯರ್ಥಿಯ ಆಯ್ಕೆ ಆಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದ್ದು, ಒಕ್ಕಲಿಗರ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಟಿ.ಎನ್. ಜವರಾಯಿಗೌಡ ಅವರನ್ನು ಮತ್ತೆ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೊಡ್ಡಲು ಆ ಪಕ್ಷ ಉದ್ದೇಶಿಸಿದೆ. ಆದರೆ ಉಳಿದೆರಡೂ ರಾಷ್ಟ್ರೀಯ ಪಕ್ಷಗಳ ಮುಂದೆ ತತ್‌ಕ್ಷಣಕ್ಕೆ ಇರುವ ಆಯ್ಕೆಯೊಂದೇ. ಅದು- ಎಸ್.ಟಿ. ಸೋಮಶೇಖರ್!
Related Articles
Advertisement
ಈ ಮಧ್ಯೆ ಮೂರು ಬಾರಿ ಪೈಪೋಟಿ ನೀಡಿ ಸೋತಿರುವ ಜೆಡಿಎಸ್ ಈ ಬಾರಿ ಪುಟಿದೇಳುವ ತವಕದಲ್ಲಿದೆ. ಕಳೆದ ಬಾರಿಗೆ ಹೋಲಿಸಿದರೆ ಮೂರು ಬಾರಿ ಸೋತಿರುವ ಬಗ್ಗೆ ಸ್ಥಳೀಯವಾಗಿ ಅನುಕಂಪ ಇದೆ. ಇದೆಲ್ಲವೂ ಜೆಡಿಎಸ್ ಕೈಹಿಡಿಯಬಹುದು ಎಂಬ ಲೆಕ್ಕಾಚಾರ ನಡೆದಿದೆ. ಆದರೆ ಕೋವಿಡ್ ಸಂದರ್ಭವೂ ಸಹಿತ ಕಳೆದ ನಾಲ್ಕು ವರ್ಷಗಳಲ್ಲಿ ಅವರು ಕಾಣಿಸಿಕೊಂಡಿದ್ದು ತುಂಬಾ ಕಡಿಮೆ ಎನ್ನಲಾಗಿದೆ. ಇನ್ನು ಆಮ್ ಆದ್ಮಿ ಪಕ್ಷದಿಂದ (ಎಎಪಿ) ಶಶಿಧರ್ ಆರಾಧ್ಯ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. 2018ರ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಯಶವಂತಪುರ ಬಿಬಿಎಂಪಿ ವಾರ್ಡ್‌ಗಳು, ಜಿಲ್ಲಾ ಪಂಚಾಯತ್‌ಗಳು, ಗ್ರಾಮ ಪಂಚಾಯತ್‌ಗಳು ಬರುವ ವಿಶಿಷ್ಟ ಕ್ಷೇತ್ರ. ಐದು ವಾರ್ಡ್‌ಗಳಲ್ಲಿ ನಾಲ್ಕು ಬಿಜೆಪಿಯಲ್ಲಿದ್ದರೆ, ಉಳಿದೊಂದು ಕಾಂಗ್ರೆಸ್ ತೆಕ್ಕೆಗಿತ್ತು. ಆದರೆ ಪಾಲಿಕೆ ಸದಸ್ಯರ ಅವಧಿ ಮುಗಿದೇ ಎರಡು ವರ್ಷಗಳಾಗಿವೆ. ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸ್ಥಳೀಯವಾಗಿರುವ ಅಪಸ್ವರಗಳನ್ನು ಶಮನಗೊಳಿಸುವ ಕೆಲಸ ಈಗಿನಿಂದಲೇ ನಡೆದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸ್ಥಳೀಯ ಕಾರ್ಯಕ ರ್ತರ ಪಕ್ಷಾಂತರ ಕಾರ್ಯಕ್ರಮಗಳು ಮಾತ್ರ ನಿರಂತರವಾಗಿವೆ.
ಮೊದಲು ಅರಳಿದ್ದು ಕಮಲಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಈಗ 15 ವರ್ಷದ ಪ್ರಾಯ. ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದೊಳಗಿದ್ದ ಈ ಕ್ಷೇತ್ರವು 2008ರಲ್ಲಿ ಮರುವಿಂಗಡಣೆ ಬಳಿಕ ಯಶವಂತಪುರ ವಿಧಾನಸಭಾ ಕ್ಷೇತ್ರವಾಯಿತು. ಹೀಗೆ ಕ್ಷೇತ್ರ ರಚನೆಯಾದ ಬಳಿಕ ಇಲ್ಲಿ ಮೊದಲು ಅರಳಿದ್ದು ಕಮಲ. 2008ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಬಿಜೆಪಿಯಿಂದ ಗೆದ್ದುಬಂದರು. ಅನಂತರದ ಎರಡು ಚುನಾವಣೆಗಳಲ್ಲಿ “ಕೈ’ ಸೇರಿತು. ಅದನ್ನು ಪ್ರತಿನಿಧಿಸಿದವರು ಎಸ್.ಟಿ. ಸೋಮಶೇಖರ್. 2019ರಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಪಾಲಾಯಿತು. ಆಗ ಬಿಜೆಪಿ ಪ್ರತಿನಿಧಿಸಿದವರೂ ಸೋಮಶೇಖರ್. ಹೆಸರಿಗೆ ಇದು ಯಶವಂತಪುರ ವಿಧಾನಸಭಾ ಕ್ಷೇತ್ರ. ಅತ್ತ ತುಮಕೂರು ರಸ್ತೆಯ ಚಿಕ್ಕಬಿದರಕಲ್ಲಿನಿಂದ ಆರಂಭವಾಗಿ ಮೈಸೂರು ರಸ್ತೆ ದಾಟಿ ಕನಕಪುರ ರಸ್ತೆ ಕಗ್ಗಲಿಪುರವರೆಗೆ, ಇತ್ತ ಮೈಸೂರು ರಸ್ತೆಯಲ್ಲಿ ಬಿಡದಿವರೆಗೆ, ಮಾಗಡಿ ರಸ್ತೆಯಲ್ಲಿ ತಿಪ್ಪಗೊಂಡನಹಳ್ಳಿ ಹತ್ತಿರಕ್ಕೆ ಈ ಕ್ಷೇತ್ರ ವ್ಯಾಪಿಸಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಿಕೊಂಡಿರುವ ದೊಡ್ಡ ಕ್ಷೇತ್ರಗಳಲ್ಲಿ ಇದೂ ಒಂದು. -ವಿಜಯಕುಮಾರ್ ಚಂದರಗಿ