Advertisement

ಕೂದಲು ಉದುರುವಿಕೆ ತಡೆಗಟ್ಟಲು ಯೋಗ ಉತ್ತಮ…

01:55 PM Oct 19, 2020 | Nagendra Trasi |

ತಲೆಕೂದಲಿನ ಮೇಲೆ ಎಲ್ಲರಿಗೂ ಪ್ರೀತಿ. ಆದರೆ ಬದಲಾದ ಜೀವನ, ಆಹಾರ ಕ್ರಮ, ಮಾನಸಿಕ ಒತ್ತಡ, ಆರೈಕೆಯ ಕೊರತೆ, ಪರಿಸರ ಮಾಲಿನ್ಯ ಇವೆಲ್ಲ ತಲೆಕೂದಲಿನ ವಿವಿಧ ಸಮಸ್ಯೆಗಳಿಗೆ ಪ್ರಮುಖ ಕಾರಣಗಳಾಗಿವೆ. ಇದಕ್ಕಾಗಿ ನಾನಾ ಬಗೆಯ ಶ್ಯಾಂಪು, ಕಂಡಿಷನರ್‌ ಪ್ರಯೋಗ ಮಾಡಿದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ. ಹೀಗಾಗಿ ಮನೆ ಮದ್ದಿನ ಜತೆಗೆ ಯೋಗದ ಮೂಲಕವೂ ಪರಿಹಾರ ಸಾಧ್ಯವಿದೆ.

Advertisement

ಕೂದಲು ಉದುರುವುದನ್ನು ತಡೆಗಟ್ಟಲು ಯೋಗ
ಯಾವುದೇ ಅಡ್ಡ ಪರಿಣಾಮವಿಲ್ಲದ ಅತ್ಯುತ್ತಮ ಪರಿಹಾರವೆಂದೇ ಹೇಳಬಹುದು. ಆರಂಭದ ಹಂತದಲ್ಲೇ ಕೂದಲು ಉದುರುವುದನ್ನು ತಡೆಗಟ್ಟಲು ಯೋಗ ಸಹಾಯ ಮಾಡು ತ್ತದೆ. ಆದರೆ ವಿಳಂಬವಾದರೆ ಉತ್ತಮ ಫ‌ಲಿತಾಂಶ ಸಿಗು ವುದು ಕಷ್ಟ. ಆದರೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸಾಧ್ಯವಿದೆ.

ದಿನಕ್ಕೆ 75ರಿಂದ 100 ಕೂದಲು ಉದುರುವುದು ಸಾಮಾನ್ಯ. ಆದರೆ ಅದ ಕ್ಕಿಂತ ಹೆಚ್ಚಿನ ಕೂದಲು ಉದು ರುತ್ತದೆ ಎಂದಾದರೆ ಸಮಸ್ಯೆಯನ್ನು ಗಂಭೀರವಾಗಿ ಪರಿಗ ಣಿಸಲೇಬೇಕು. ಕೂದಲು ಸೊಂಪಾಗಿ ಬೆಳೆಯಬೇಕಾದರೆ ಬೇರುಗಳು ಬಲಿಷ್ಠವಾಗಿರಬೇಕು.  ಇದಕ್ಕಾಗಿ ಕೆಲವು ಆಸ ನಗಳನ್ನು ಮಾಡಬಹುದು.

ಅಧೋಮುಖ ಶ್ವಾನಾಸನ
ಹೆಸರೇ ಹೇಳುವಂತೆ ನಾಯಿಯ ಭಂಗಿಯಲ್ಲಿ ಮೊಣಕಾಲು ಊರಿ ನಿಂತು ಕೊಳ್ಳಬೇಕು. ನಿಧಾನವಾಗಿ ಉಸಿರು  ಬಿಡುತ್ತ ಸೊಂಟವನ್ನು ಮೇಲಕ್ಕೆತ್ತಿ. ಮೊಣಕೈ, ಕಾಲು ನೇರವಾಗಿರಲಿ. ದೇಹವು ವಿ ಆಕಾರದಲ್ಲಿರಬೇಕು. ಕೈಗಳು ಭುಜಕ್ಕೆ ಸರಿಯಾಗಿ, ಪಾದಗಳು ಸೊಂಟಕ್ಕೆ ಸಮಾನಾಗಿರಬೇಕು. ದೃಷ್ಟಿ ಹೆಬ್ಬರಳಿನ ನೇರಕ್ಕೆ ಇರಲಿ.

Advertisement

ಇದನ್ನೂ ಓದಿ:ಕೆಕೆಆರ್ ತಂಡದಿಂದ ಅಲಿ ಖಾನ್ ಔಟ್: ಕಿವೀಸ್ ಕೀಪರ್ ಸೀಫರ್ಟ್ ಸೇರ್ಪಡೆ

ಕೈಗಳನ್ನು ನೆಲಕ್ಕೆ ಊರಿ ಕುತ್ತಿಗೆ ಎಳೆಯಿರಿ, ಕಿವಿಗಳು ಒಳ ಭಾಗದ ಕೈಗಳನ್ನು ಮುಟ್ಟಬೇಕು. ನಾಭಿಯ ಕಡೆಗೆ ದೃಷ್ಟಿ ಇರಲಿ. ಕೆಲವು ಸೆಂಕೆಡ್‌ ಹೀಗೆ ಇದ್ದು ಬಳಿ
ಮೊಣ ಕಾಲು ಮಡಚಿ ಮೊದಲಿನ ಭಂಗಿಗೆ ಬರಬೇಕು.

ಭುಜಂಗಾಸನ

ಮೊದಲು ಹೊಟ್ಟೆ ಮೇಲೆ ಮಲಗಿ. ಅನಂತರ ಕೈಗಳನ್ನು ಎದೆ ಬಳಿ ಇಟ್ಟು ಅಂಗೈಗಳ ಮೇಲೆ ಹೊಕ್ಕಳಿನ ಮೇಲಿನ ಭಾಗದ ಶರೀರದ ಭಾರವಿರಬೇಕು. ನಿಧಾನವಾಗಿ ಉಸಿರು ತೆಗೆದುಕೊಳ್ಳುತ್ತ ಶರೀರವನ್ನು ಹಾವಿನ ರೀತಿ ಮೇಲೆಕ್ಕೆತ್ತ ಬೇಕು. ಸೊಂಟದ ಕೆಳಗಿನ ಭಾಗ ನೆಲದ ಮೇಲೆ ಚಾಚಿರಲಿ.

ಉಷ್ಟ್ರಾಸನ
ಕಾಲನ್ನು ಹಿಂದಕ್ಕೆ ಹಾಕಿ  ಮಂಡಿಯೂರಿ ನೇರವಾಗಿ ಕುಳಿ ತುಕೊಳ್ಳಬೇಕು. ಬಳಿಕ ಮೊಣಕಾಲಿನ ಮೇಲೆ ಹಿಂದೆ ಭಾಗುತ್ತಾ ಬಲಗೈಯಲ್ಲಿ ಹಿಮ್ಮಡಿಯ ಗಂಟನ್ನು, ಎಡಗೈ ಯಲ್ಲಿ ಎಡ ಹಿಮ್ಮಡಿಯ ಗಂಟನ್ನು ಹಿಡಿಯಬೇಕು. ಉಸಿರು ಒಳಗೆಳೆದುಕೊಳ್ಳುತ್ತ ಸೊಂಟ, ತೊಡೆ ನೇರವಾಗಿಸಿ. ಕತ್ತು, ತಲೆಯನ್ನು ಹಿಂದಕ್ಕೆ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಬಗ್ಗಿಸಿ. ಸ್ವಲ್ಪ ಕಾಲ ಹಾಗೇ ಇದ್ದು ನಿಧಾ ನ ವಾಗಿ ಉಸಿರು ಬಿಡುತ್ತ ಮೊದಲು ಮಂಡಿಯೂರಿದ ಸ್ಥಿತಿಗೆ ಬನ್ನಿ.

ಈ ಎಲ್ಲ ಆಸನಗಳನ್ನು ಗರ್ಭಿಣಿಯರು, ದೀರ್ಘ‌ಕಾಲದ ಆರೋಗ್ಯ ಸಮಸ್ಯೆ ಇರುವವರು ಮಾಡಬಾರದು. ಹೀಗಾಗಿ ಪ್ರಯೋಗ ಮಾಡುವ ಮೊದಲು ವೈದ್ಯರೊಂದಿಗೆ ಅಥವಾ ನುರಿತ ಯೋಗ ತಜ್ಞರಿಂದ ಅಭಿಪ್ರಾಯ ಪಡೆ ಯುವುದು ಉತ್ತಮ.

ಮತ್ಸ್ಯಾಸನ
ಪದ್ಮಾಸನದಲ್ಲಿ ಕುಳಿತುಕೊಂಡು ಎರಡೂ ಕೈಗಳನ್ನು ಭಜದ ಬಳಿಗೆ ತನ್ನಿ. ಬೆನ್ನು ಮತ್ತು ಎದೆಯನ್ನು ಮೇಲೆತ್ತಿ. ತಲೆಯ ನೆತ್ತಿ ನೆಲಕ್ಕೆ ತಾಗುವಂತಿರಲಿ. ಬಲಗೈಯಿಂದ ಎಡ ಹಾಗೂ ಎಡಕೈಯಿಂದ ಬಲ ಕಾಲ್ಬೆರಳುಗಳನ್ನು ಹಿಡಿದುಕೊಂಡು ಮೊಣಕೈ ನೆಲಕ್ಕೆ ತಾಗಿಸಿ. ಎರಡೂ ಮೊಣ ಕೈಗಳು ಪಕ್ಕೆ ಲುಬಿನ ಬಳಿ ಇರಲಿ. ಹೆಬ್ಬರಳು ಬಿಟ್ಟು ತಲೆ, ಭುಜದ ಹತ್ತಿರ ತನ್ನಿ. ಸ್ವಲ್ಪ ಹೊತ್ತಿನ  ಬಳಿಕ ನಿಧಾನಕ್ಕೆ ಮೊದಲಿನ ಸ್ಥಿತಿಗೆ ಬನ್ನಿ.

Advertisement

Udayavani is now on Telegram. Click here to join our channel and stay updated with the latest news.

Next