Advertisement
ತೇರದಾಳದ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರದ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಅವರು,
Related Articles
Advertisement
ತಂಗಿ ವೀಣಾ ಗೆಲ್ಲಿಸಿ: ಸಿಎಂ ಕುಮಾರಸ್ವಾಮಿಬಾಗಲಕೋಟೆ ಲೋಕಸಭಾ ಅಭ್ಯರ್ಥಿ ವೀಣಾ ಕಾಶಪ್ಪನವರ ಒಬ್ಬ ಸಮರ್ಥವಾದ ಅಭ್ಯರ್ಥಿ. ಅವರು ಸಂಸದರಾದರೆ ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನ ನೀಡುತ್ತಾರೆ. ತಂಗಿಯನ್ನು ಗೆಲ್ಲಿಸಿ ಕೊಡಿ. ದೆಹಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಸತ್ಯಾಗ್ರಹ ಮಾಡಿದರೆ ಈ ಪ್ರಧಾನಿ ಸೌಜನ್ಯಕ್ಕಾದರೂ ಅವರನ್ನು ಕರೆಯಿಸಿ ಮಾತನಾಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಠಿಣ ಹೃದಯದ ಪ್ರಧಾನಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ಗದ್ದಿಗೌಡರ ಮಹಿಳೆ ಎದುರು ಸೋಲುತ್ತಾರೆ: ಸಚಿವ ಪಾಟೀಲ
ತೇರದಾಳ: ಮೂರು ಬಾರಿ ಎದುರಾಳಿ ಪುರುಷರನ್ನು ಸೋಲಿಸಿ ಗೆದ್ದ ಗದ್ದಿಗೌಡರು, ಈಗ ಓರ್ವ ಮಹಿಳೆಗೆ ಸೋಲುತ್ತಾರೆ. ಏಕೆಂದರೆ ಯಾವ ಅಭಿವೃದ್ಧಿ ಮಾಡಿಲ್ಲ. ಸೂಕ್ತ ಅಭ್ಯರ್ಥಿಯಾದ ವೀಣಾ ಕಾಶಪ್ಪನವರ ಅವರನ್ನು 40 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರದ ಬೃಹತ್ ಸಮಾರಂಭದಲ್ಲಿ ಅವರು ಮಾತನಾಡಿದರು. ಬೂಟಾಟಿಕೆಯ ಭಾಷಣವನ್ನೆ ಬಂಡವಾಳ ಮಾಡಿಕೊಂಡ ಬಿಜೆಪಿಗೆ ಬಾಗಲಕೋಟೆ ಜನತೆಯಿಂದ ಮತಕೇಳುವ ನೈತಿಕತೆಯಿಲ್ಲ. ತಮ್ಮ ಸರಕಾರವಿದ್ದ ರಾಜ್ಯಗಳಲ್ಲಿ ರೈತರು ಸಾಲಮನ್ನಾ ಮಾಡಲು ಉಪವಾಸ ಕುಳಿತರು ಸಹ ಪ್ರಧಾನಿ ರೈತರ ಸಾಲಮನ್ನಾ ಮಾಡಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸರಕಾರಗಳೇ ರೈತರ ಸಾಲಮನ್ನಾ ಮಾಡಿದ್ದು. ಅದಕ್ಕೆ ರೈತರಿಂದ ಮತಕೇಳುವ ಹಕ್ಕು ಅವರಿಗಿಲ್ಲ. ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಮನಮೋಹನ ಸಿಂಗ್ ಅವರ ಕೇಂದ್ರ ಸರಕಾರ, ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿಯವರ ರಾಜ್ಯ ಸರಕಾರಗಳು ರೈತರ ಸಾಲಮನ್ನಾ ಮಾಡಿವೆ. ಬಿಜೆಪಿಗೆ ರೈತರಿಂದ ಮತ ಕೇಳುವ ಹಕ್ಕಿಲ್ಲ. ಈಶ್ವರಪ್ಪನವರಿಗೆ ಹಿಂದುಳಿದ ಜನಾಂಗದ ಒಬ್ಬರಿಗೂ ಟಿಕೆಟ್ ಕೊಡಿಸಲಾಗಿಲ್ಲ. ಹಿಂದುಳಿದವರನ್ನು ಮತ ಕೇಳುವ ಹಕ್ಕಿಲ್ಲ. 15 ವರ್ಷ ಸಂಸದರಾದರೂ ಅಭಿವೃದ್ಧಿ ಮಾಡದ ಗದ್ದಿಗೌಡ್ರು ನಿದ್ದಿಗೌಡ್ರರಾಗಿದ್ದಾರೆ. ಅವರಿಗೇಕೆ ಮತ ನೀಡಬೇಕು ಎಂದರು. ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ಬಾಗಲಕೋಟೆ ಭಾಷಣದಲ್ಲಿ ಮೋದಿಯವರು ತಮ್ಮ ಅಭ್ಯರ್ಥಿ ಬಗ್ಗೆ ಏನೂ ಹೇಳಲಿಲ್ಲ. ಹೇಳುವಂತದ್ದೇನಾದರು ಇದ್ದರೆ ಹೇಳುತ್ತಿದ್ದರು. ಕೇವಲ ತಮ್ಮ ಸರಕಾರ ನೋಡಿ ಮತ ಹಾಕಬೇಕಂತೆ. ಈ ಬಾರಿ ನನಗೆ ಆಶೀರ್ವಾದ ಮಾಡಿದರೆ, ಅದು ನನಗೆ ಅಧಿಕಾರವೆಂದು ಭಾವಿಸದೆ ಸೇವೆಯ ಭಾಗ್ಯವೆಂದು ತಿಳಿದು ಸೇವೆ ಮಾಡುತ್ತೇನೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ಮತಯಾಚಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ತೇರದಾಳ ತಾಲೂಕು ಹೋರಾಟ ಸಮಿತಿ, ವಿವಿಧ ಸಂಘಟನೆ ಪರವಾಗಿ ಸನ್ಮಾನಿಸಲಾಯಿತು. ಎಸ್.ಆರ್. ಪಾಟೀಲ, ಆನಂದ ನ್ಯಾಮಗೌಡ, ಜೆ.ಟಿ. ಪಾಟೀಲ, ಪಾರಸ್ಮಲ್ ಜೈನ್, ಎಸ್.ಆರ್. ನವಲಿಹಿರೇಮಠ, ಬಸವರಾಜ ಕೊಣ್ಣೂರ, ಅಜಯ್‌ಕುಮಾರ ಸರ್‌ನಾಯಿಕ್, ಶಿವಾನಂದ ಉದಪುಡಿ, ಎಚ್.ವೈ. ಮೇಟಿ, ಎನ್.ಎಸ್. ದೇವರವರ, ಘನಶಾಂ ಬಾಂಡಗೆ, ಬಿ.ಎ. ದೇಸಾಯಿ, ಬಾಯಕ್ಕ ಮೇಟಿ, ಲಲಿತಾ ನಂದೆಪ್ಪನವರ, ಪ್ರವೀಣ ನಾಡಗೌಡ, ಭುಜಬಲಿ ಕೆಂಗಾಲಿ ಇದ್ದರು.