ಉಳ್ಳಾಲ: ಆಸ್ತಿ, ಸಂಪತ್ತು ಕೂಡಿ ಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸುವ ನಿಟ್ಟಿನಲ್ಲಿ ಹೆತ್ತವರು ಚಿಂತಿಸಬೇಕು. ಈ ನಿಟ್ಟಿನಲ್ಲಿ ಯೇನಪೊಯ ವಿಶ್ವವಿದ್ಯಾನಿಲಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅಭಿಪ್ರಾಯಪಟ್ಟರು.
ಯೇನಪೊಯ ಫೌಂಡೇಶನ್ ಹಾಗೂ ಯೇನಪೊಯ ವಿ.ವಿ.ಯ ಸಹಯೋಗ ದೊಂದಿಗೆ ಶುಕ್ರವಾರ ದೇರಳಕಟ್ಟೆಯ ಯೇನಪೊಯ ವಿ.ವಿ. ಕ್ಯಾಂಪಸ್‌ನ ಯೆಂಡ್ನೂರೆನ್ಸ್ ಸಭಾಂ ಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಶೇ. 100 ಫಲಿತಾಂಶ ಪಡೆದ ಎರಡು ಅಲ್ಪಸಂಖ್ಯಾಕ ಶಾಲೆಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಜೀವನ ಅತ್ಯಮೂಲ್ಯ. ಉನ್ನತ ಶಿಕ್ಷಣದ ಸಂದರ್ಭ ಗುರಿ ನಿರ್ಧಾರ ಮಾಡಿ ಮುನ್ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಯೇನಪೊಯ ಪರಿಗಣಿಸಲಾಗಿರುವ ವಿ.ವಿ.ಯ ಕುಲಾಧಿಪತಿ ವೈ. ಅಬ್ದುಲ್ಲಾ ಕುಂಞಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಹಾಗೂ ಅಲ್ಪಸಂಖ್ಯಾಕ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಫೌಂಡೇಶನ್ ವತಿಯಿಂದ ಪುರಸ್ಕಾರ ನೀಡಲಾಗುತ್ತಿದೆ. ಪ್ರತಿ ಭಾನ್ವಿತ ವಿದ್ಯಾರ್ಥಿಗಳ ಮುಂದಿನ ಜೀವನ ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿದರು.
ಯೇನಪೊಯ ಫೌಂಡೇಶನ್ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ಕುಲಸಚಿವ ಡಾ| ಕೆ.ಎಸ್. ಗಂಗಾಧರ ಸೋಮಯಾಜಿ, ಟ್ರಸ್ಟಿಗಳಾದ ಡಾ| ಅಖ್ತರ್ ಹುಸೈನ್ ಹಾಗೂ ಖಾಲಿದ್ ಬಾವಾ ಉಪಸ್ಥಿತರಿದ್ದರು.ಕುಲಪತಿ ಡಾ| ಎಂ. ವಿಜಯಕುಮಾರ್ ಸ್ವಾಗತಿಸಿದರು. ಡಾ| ಮಲ್ಲಿಕಾ ಶೆಟ್ಟಿ ಮತ್ತು ಡಾ| ರೋಶೆಲ್ ಟೆಲ್ಲೀಸ್ ನಿರೂಪಿಸಿದರು.
ಪ್ರಶಸ್ತಿ ಪ್ರದಾನ
ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿಯ 374 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಶೇ. 100 ಫಲಿತಾಂಶ ದಾಖಲಿಸಿದ ಎರಡು ಅಲ್ಪ ಸಂಖ್ಯಾಕ ಶಾಲೆಗಳಿಗೆ 3,000ದಿಂದ 10,000 ರೂ. ತನಕ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಒಟ್ಟು 15 ಲಕ್ಷ ರೂ. ವಿತರಿಸಲಾಯಿತು. ವಿವಿಧ ಕೋರ್ಸುಗಳಲ್ಲಿ ಕಲಿಯು ತ್ತಿರುವ ಮೂರು ಜಿಲ್ಲೆಗಳ ಪ್ರತಿಭಾನ್ವಿತ 32 ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೇನ ಪೊಯ ಫೌಂಡೇಶನ್ ಪ್ರಾಯೋಜಕತ್ವ ನೀಡಿದೆ.