Advertisement
ದೇರಳಕಟ್ಟೆಯ ಯೇನಪೊಯ ವಿ.ವಿ. ಕ್ಯಾಂಪಸ್‌ನ “ಯೆಂಡ್ನೂರೆನ್ಸ್’ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಶನಿವಾರ ನಡೆದ ಯೇನಪೊಯ ವಿಶ್ವವಿದ್ಯಾನಿಲಯದ 7ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾಡಿದರು.
ಕ್ಷೇತ್ರದಲ್ಲೂ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು. ಯೇನಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಯೇನಪೊಯ ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿದ್ದರು. 421 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಬಿಡಿಎಸ್‌ನ ವೋಂಗ್ ಜಿಯಾ ಹುಯ್, ಎಂಬಿಬಿಎಸ್‌ನ ಸಂಪ್ರಿತಾ ಯು.ಸಿ., ಬಿಎಸ್ಸಿ ನರ್ಸಿಂಗ್ ಪೋಸ್ಟ್ ಬೇಸಿಕ್‌ನ ಮೆರಿನ್ ಜೋಸೆಫ್, ಬಿಎಸ್ಸಿ ನರ್ಸಿಂಗ್‌ನ ನಿಜಿತಾ ಕುಮಾರಿ ಕೆ., ಫಿಸಿಯೋಥೆರಪಿಯ ಯಾಸಿರ್ ಕೆ.ಅವರಿಗೆ ಬಂಗಾರದ ಪದಕ ನೀಡಿ ಗೌರವಿಸಲಾಯಿತು. ಕುಲಸಚಿವ ಡಾ| ಜಿ. ಶ್ರೀಕುಮಾರ್ ಮೆನನ್, ಸಹಾಯಕ ಪರೀಕ್ಷಾಂಗ ನಿಯಂತ್ರಣಾಧಿಕಾರಿ ಡಾ| ಬಿ.ಟಿ. ನಂದೀಶ್, ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ಚೇರ್‌ಮನ್ ಯೇನಪೊಯ ಮಹಮ್ಮದ್ ಕುಂಞಿ, ಕಾರ್ಯದರ್ಶಿ ಡಾ| ಅಖ್ತರ್ ಹುಸೈನ್, ಟ್ರಸ್ಟಿಗಳಾದ ಡಾ| ಸಿ.ಪಿ. ಹಬೀಬ್ ರಹಿಮಾನ್, ಖಾಲಿದ್ ಬಾವಾ, ಯೇನಪೊಯ ದಂತ ವಿದ್ಯಾಲಯದ ಡೀನ್ ಡಾ| ಬಿ.ಎಚ್. ಶ್ರೀಪತಿ ರಾವ್, ಯೇನಪೊಯ ವೈದ್ಯಕೀಯ ವಿದ್ಯಾಲಯದ ಡೀನ್ ಡಾ| ಗುಲಾಂ ಜಿಲಾನಿ ಖಾದಿರಿ, ಯೇನೆಪೊಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ| ಡೆವಿನಾ ಇ. ರೋಡ್ರಿಗಸ್, ಯೇನಪೊಯ ಅಲೈಡ್ ಆ್ಯಂಡ್ ಹೆಲ್ತ್ ಸೈನ್ಸಸ್ ಡೀನ್ ಡಾ| ಪದ್ಮಕುಮಾರ್ ಎಸ್., ಬಿಒಎಂ ಸದಸ್ಯರಾದ ಡಾ| ವೇದಪ್ರಕಾಶ್ ಮಿಶ್ರಾ, ಪ್ರೊ| ಬಿ.ಎ. ವಿವೇಕ್ ರೈ, ಸಂಪತ್ತಿಲ ಪದ್ಮನಾಭ, ಎರಿಕ್ ಸಿ. ಲೋಬೊ ಉಪಸ್ಥಿತರಿದ್ದರು. ಯೇನಪೊಯ ವಿ.ವಿ. ಕುಲಪತಿ ಡಾ| ವಿಜಯ ಕುಮಾರ್ ಸ್ವಾಗತಿಸಿದರು. ಡಾ| ರೋಶೆಲ್ ಟೆಲ್ಲಿಸ್ ಹಾಗೂ ಸುನೀತಾ ಪ್ರಭು ಕಾರ್ಯಕ್ರಮ ನಿರೂಪಿಸಿದರು.