Advertisement

ಯೇನಪೊಯ ಎಂಜಿನಿಯರಿಂಗ್‌: ಪದವಿ ಪ್ರದಾನ

08:50 AM Aug 30, 2017 | Team Udayavani |

ಮೂಡಬಿದಿರೆ: “ಸ್ವಸಾಮರ್ಥ್ಯ, ಅನ್ಯರೊಂದಿಗೆ ಹೊಂದಿರುವ ವ್ಯವಹಾರ ಕೌಶಲ ಹಾಗೂ ಸಂಬಂಧಗಳ ಕುರಿತಾದ ಕಾಳಜಿ ಇದ್ದಾಗ ಮಾತ್ರ ವ್ಯಕ್ತಿಯ ಜೀವನದಲ್ಲಿ ಯಶಸ್ಸು ಸಾಧ್ಯ’ ಎಂದು ಸುರತ್ಕಲ್‌ ಎನ್‌ಐಟಿಕೆ ನಿರ್ದೇಶಕ ಪ್ರೊ| ಕೆ. ಉಮಾಮಹೇಶ್ವರ ರಾವ್‌ ಅಭಿಪ್ರಾಯಪಟ್ಟರು.

Advertisement

ರವಿವಾರ ತೋಡಾರ್‌ನಲ್ಲಿರುವ ಯೇನಪೊಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರಿಸರ ಪ್ರೀತಿ
ಮರವೆಂದರೆ ಪ್ರಕೃತಿಯ ಶ್ವಾಸಕೋಶ; ಮಾನವರ ಅಸ್ತಿತ್ವಕ್ಕೆ ಈ ಶ್ವಾಸಕೋಶ ಸದಾ ಜೀವಂತವಾಗಿರಬೇಕು ಎಂಬ ಪರಿಜ್ಞಾನ ಕೊರಿಯಾದಂಥ ದೇಶದ ಪುಟ್ಟ ಬಾಲಕನ ಪರಿಜ್ಞಾನವನ್ನು ಉಲ್ಲೇಖೀಸಿದ ಅವರು ಪಂಚಭೂತಗಳನ್ನು ಆರಾಧನಾ ಭಾವದಿಂದ ನೋಡುವ ಭಾರತೀಯರು ಪ್ರಾಮಾಣಿಕವಾಗಿ ಪರಿಸರ ಪ್ರೀತಿಯನ್ನು ರೂಢಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಮೆಕಾನಿಕಲ್‌, ಕಂಪ್ಯೂಟರ್‌ ಸೈನ್ಸ್‌, ಇನ್‌ಫಾರ್ಮೇಶನ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಈ ಐದು ವಿಭಾಗಗಳ 194 ಮಂದಿ “ಪದವಿ ಪ್ರಮಾಣ ಪತ್ರ’ ಸ್ವೀಕರಿಸಿದರು.

ಅಭಿಷೇಕ್‌ ಅವರನ್ನು ಉತ್ತಮ ನಿರ್ಗಮನ ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಯೇನಪೊಯ ಗ್ರೂಪ್‌ನ ಆಡಳಿತ ನಿರ್ದೇಶಕ ಯೇನಪೊಯ ಅಬ್ದುಲ್ಲಾ ಕುಂಞಿ ಮಾತನಾಡಿ, “ಸ್ಪಷ್ಟ ಗುರಿ ಇರಲಿ; ಗುರಿ ತಲು ಪುವ ಶ್ರದ್ಧೆ, ಪರಿಶ್ರಮ ಇರಲಿ’ ಎಂದು ಹೇಳಿದರು.

Advertisement

ಆಡಳಿತ ಮಂಡಳಿಯ ಸದಸ್ಯರಾದ ರಾಮ ಚಂದ್ರ ಶೆಟ್ಟಿ, ಅಕ್ತಾರ್‌ ಹುಸೇನ್‌ ಮುಖ್ಯ ಅತಿಥಿಗಳಾಗಿದ್ದರು.
ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ| ಸತೀಶ್‌ ಎನ್‌.(ಮೆಕ್ಯಾನಿಕಲ್‌), ಪ್ರೊ| ಗಂಗಾಧರ್‌ (ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌), ಪ್ರೊ| ಗುರುಪ್ರಸಾದ್‌ (ಕಂಪ್ಯೂಟರ್‌ ಸೈನ್ಸ್‌), ಪ್ರೊ| ಪಾಂಡು (ಇನ್‌ಫಾರ್ಮೇಶನ್‌ ಸೈನ್ಸ್‌ ), ಪ್ರೊ| ಪ್ರಸನ್ನ (ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ) ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಆರ್‌.ಜೆ. ಡಿ’ಸೋಜಾ ಸ್ವಾಗತಿಸಿದರು. ಪ್ರೊ| ಕೆವಿನ್‌ ಜೋಯ್‌ ಡಿ’ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಜೀವನ್‌ ಪಿಂಟೋ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next